ರೈಲಿನಲ್ಲಿ ಖಾಸಗಿಯಾಗಿ ಪ್ರಯಾಣ ಮಾಡಬೇಕಾ? Online Desk
ಪ್ರವಾಸ

ರೈಲಿನಲ್ಲಿ ಖಾಸಗಿಯಾಗಿ ಪ್ರಯಾಣ ಮಾಡಬೇಕಾ? ಹಾಗಾದ್ರೆ, IRCTCಯಲ್ಲಿ ಹೀಗೆ ಕೂಪ್ ಬುಕ್ ಮಾಡಿ

IRCTC Coupe Booking: ರೈಲಿನಲ್ಲಿ ದಂಪತಿಗಳು ಅಥವಾ ಇಬ್ಬರು ವ್ಯಕ್ತಿಗಳು ಒಟ್ಟಿಗೆ ಖಾಸಗಿಯಾಗಿ ಪ್ರಯಾಣಿಯಬಹುದಾ? ಖಂಡಿತಾ ಪ್ರಯಾಣಿಸಬಹುದು! ಹೌದು, ಭಾರತೀಯ ರೈಲ್ವೆಯಲ್ಲಿ ಖಾಸಗಿ ಕೂಪ್ ಪಡೆಯಲು ಪ್ರತ್ಯೇಕವಾಗಿ ಪಡೆಯಬಹುದು. ಆ ಕುರಿತ ವರದಿ ಇಲ್ಲಿದೆ.

IRCTC Coupe Booking: ರೈಲಿನಲ್ಲಿ ದಂಪತಿಗಳು ಅಥವಾ ಇಬ್ಬರು ವ್ಯಕ್ತಿಗಳು ಒಟ್ಟಿಗೆ ಖಾಸಗಿಯಾಗಿ ಪ್ರಯಾಣಿಯಬಹುದಾ? ಖಂಡಿತಾ ಪ್ರಯಾಣಿಸಬಹುದು! ಆದರೆ, ಈ ಖಾಸಗಿ ಕೂಪ್ ಅನ್ನು ನೇರ ಬುಕಿಂಗ್ ಮಾಡಲು ಯಾವುದೇ ಅವಕಾಶ ಇರುವುದಿಲ್ಲ. ಹಾಗದ್ರೆ ರೈಲಿನಲ್ಲಿ ಕುಟುಂಬದವರ ಜೊತೆ ಅಥವಾ ಆಪ್ತರ ಜೊತೆ ಖಾಸಗಿಯಾಗಿ ಪ್ರಯಾಣ ಮಾಡಲು ಈ ಕೂಪ್ ಪಡೆಯುವುದು ಹೇಗೆ? ಇಲ್ಲಿದೆ ಆ ಕುರಿತ ವರದಿ.

ಏನಿದು ಕೂಪ್ ವ್ಯವಸ್ಥೆ?

ಕೂಪ್ ಎಂದರೆ ರೈಲಿನಲ್ಲಿ ಪ್ರತ್ಯೇಕವಾದ ಒಂದು ಚಿಕ್ಕ ಕೊಠಡಿಯಿದ್ದಂತೆ. ಇದರಲ್ಲಿ ಹೊರಗಿನ ಜನರ ಕಿರಿಕಿರಿ ಇರುವುದಿಲ್ಲ. ಆರಾಮವಾಗಿ ಕೂತು ಮಾತಾಡಿಕೊಂಡು ಪ್ರಯಾಣ ಮಾಡಬಹುದು. ಎರಡನೇ ದರ್ಜೆ ಅಥವಾ ಮೊದಲ ದರ್ಜೆ ಕೋಚ್ ನಲ್ಲಿ ಇರುವ ಪ್ರತ್ಯೇಕ ಕೊಠಡಿಯಾಗಿರುವ, ಇದರಲ್ಲಿ 2 ಜನರು ಅಥವಾ 4 ಜನರು ಮಾತ್ರ ಪ್ರಯಾಣಿಸಬಹುದು. ಐ ಆರ್ ಸಿ ಟಿ ಸಿ ಮೂಲಕ ಕೂಪ್ ಅನ್ನು ನೇರವಾಗಿ ಬುಕ್ ಮಾಡಲು ಸಾಧ್ಯವಿಲ್ಲ. ಆದರೆ ಕೆಲವು ನಿಯಮಗಳನ್ನು ಅನುಸರಿಸಿ ಕೂಪ್ ಪಡೆಯಬಹುದು.

ಇದನ್ನ ಪಡೆಯೋದು ಹೇಗೆ?

  • ಮೊದಲು ಸಾಮಾನ್ಯ ಟಿಕೆಟ್ ಬುಕ್ ಮಾಡಿ:

    IRCTC ವೆಬ್ ಸೈಟ್ ಅಥವಾ ಅಪ್ಲಿಕೇಶನ್ ನಲ್ಲಿ ಮೊದಲು ಸಾಮಾನ್ಯ ಟಿಕೆಟ್ ಬುಕ್ ಮಾಡಬೇಕು. ಕೂಪ್ ಮೊದಲ ದರ್ಜೆ ಮತ್ತು ಎರಡನೇ ದರ್ಜೆ ಎಸಿ ಕೋಚ್ ನಲ್ಲಿ ಮಾತ್ರ ಇರುತ್ತದೆ. ಆದ್ದರಿಂದ ಈ ಎರಡರಲ್ಲಿ ಯಾವುದಾದರೂ ಒಂದರಲ್ಲಿ ಟಿಕೆಟ್ ತೆಗೆದುಕೊಳ್ಳಿ. ಟಿಕೆಟ್ ಕನ್ಫರ್ಮ್ ಆಗಿರಬೇಕು.

  • ಲಿಖಿತ ಅರ್ಜಿ ಸಲ್ಲಿಸಿ:

    ಟಿಕೆಟ್ ಬುಕ್ ಆದ ನಂತರ ರೈಲು ಹೊರಡುವ 48 ಗಂಟೆಗಳ ಮೊದಲು ಹತ್ತಿರದ ರೈಲ್ವೆ ನಿಲ್ದಾಣದ ಮೀಸಲಾತಿ ಕಚೇರಿಗೆ ಹೋಗಬೇಕು. ಅಲ್ಲಿ ಕೂಪ್ ಬೇಕೆಂದು ಲಿಖಿತ ಅರ್ಜಿ ಕೊಡಬೇಕು. ಅರ್ಜಿಯಲ್ಲಿ ಪಿ ಎನ್ ಆರ್ ಸಂಖ್ಯೆ ಪ್ರಯಾಣಿಕರ ಹೆಸರು ಮೊಬೈಲ್ ಸಂಖ್ಯೆ ಮತ್ತು ಕೂಪ್ ಬೇಕಾಗಿರುವ ಕಾರಣ ಬರೆಯಬೇಕು. ವಯಸ್ಸಾದವರು ಗರ್ಭಿಣಿಯರು ಅಂಗವಿಕಲರು ಅಥವಾ ವಿವಿಐಪಿ ಇದ್ದರೆ ಅದನ್ನು ನಮೂದಿಸಿ. ಅವರಿಗೆ ಆದ್ಯತೆ ಸಿಗುತ್ತದೆ.

  • ಚಾರ್ಟ್ ತಯಾರಾದ ಮೇಲೆ ಹಂಚಿಕೆ:

    ರೈಲು ಹೊರಡುವ 4 ಗಂಟೆಗಳ ಮೊದಲು ರಿಸರ್ವೇಷನ್ ಚಾರ್ಟ್ ತಯಾರಾಗುತ್ತದೆ. ಆಗ ಖಾಲಿ ಇದ್ದರೆ ಮತ್ತು ನಿಮ್ಮ ಅರ್ಜಿ ಅನುಮೋದನೆಯಾದರೆ ನಿಮಗೆ ಕೂಪ್ ಹಂಚಿಕೆ ಮಾಡಲಾಗುತ್ತದೆ. ಇದಕ್ಕೆ ಯಾವುದೇ ಹೆಚ್ಚುವರಿ ಶುಲ್ಕ ಇರುವುದಿಲ್ಲ. ಸಾಮಾನ್ಯ ಟಿಕೆಟ್ ದರವೇ ಇರುತ್ತದೆ.

ಮುಖ್ಯ ನಿಯಮಗಳು:

  • ಮೊದಲ ದರ್ಜೆಯಲ್ಲಿ 2 ಬರ್ತ್ ಇರುವದನ್ನು ಕ್ಯಾಬಿನ್ ಮತ್ತು 4 ಬರ್ತ್ ಇರುವದನ್ನು ಕೂಪ್ ಎನ್ನುತ್ತಾರೆ.

  • ಎರಡನೇ ದರ್ಜೆ ಎಸಿ ಯಲ್ಲಿ 4 ಬರ್ತ್ ಕೂಪ್ ಮಾತ್ರ ಇರುತ್ತದೆ.

  • ಕೂಪ್ ಗ್ಯಾರಂಟಿ ಇರುವುದಿಲ್ಲ. ಸೀಟು ಖಾಲಿ ಇದ್ದರೆ ಮಾತ್ರ ಸಿಗುತ್ತದೆ.

  • ಆದ್ದರಿಂದ ಆದಷ್ಟು ಬೇಗ ಅರ್ಜಿ ಸಲ್ಲಿಸುವುದು ಉತ್ತಮ.

ಒಟ್ಟಾರೆಯಾಗಿ IRCTC ಯಲ್ಲಿ ನೇರ ಕೂಪ್ ಬುಕಿಂಗ್ ಇಲ್ಲದಿದ್ದರೂ ಈ ಪ್ರಕ್ರಿಯೆ ಅನುಸರಿಸಿದರೆ ಖಾಸಗಿಯಾಗಿ ಆರಾಮವಾಗಿ ಪ್ರಯಾಣಿಸಬಹುದು. ಕುಟುಂಬದೊಂದಿಗೆ ದೂರ ಪ್ರಯಾಣ ಮಾಡುವವರಿಗೆ ಇದು ಉಪಯುಕ್ತ ಮಾರ್ಗವಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test Day 3: ಫಾಲೋ ಆನ್ ಭೀತಿಯಲ್ಲಿ ಲಂಕಾಪಡೆ, ಮಳೆಯಿಂದಾಗಿ 3ನೇ ದಿನದಾಟ ಮೊಟಕು!

ಮಂಡ್ಯ ಜೈಲಿನ ಕರ್ಮಕಾಂಡ ಬಯಲು: ಆಸ್ಪತ್ರೆ​​ ವಾರ್ಡ್​​​ನಲ್ಲಿ ಮಹಿಳೆ​​ ಜೊತೆ ಸಿಕ್ಕಿಬಿದ್ದ ವಿಚಾರಣಾಧೀನ ಸರ್ಕಾರಿ ಅಧಿಕಾರಿ!

ಕೊಡಗಿನಲ್ಲಿ ಭಾರಿ ಮಳೆ: ಹಾರಂಗಿ ಜಲಾಶಯಕ್ಕೆ ಹೆಚ್ಚಿದ ಒಳಹರಿವು, ತಲಕಾವೇರಿಯಲ್ಲೂ ದಾಖಲೆಯ ವರ್ಷಧಾರೆ!