ಪಶ್ಚಿಮ ಏಷ್ಯಾದಲ್ಲಿ ಪರಿಸ್ಥಿತಿ ಇನ್ನೂ ಉದ್ವಿಗ್ನವಾಗಿರುವುದರಿಂದ ಪಾಕಿಸ್ತಾನ ಮಧ್ಯಸ್ಥಿಕೆಯ ಕದನ ವಿರಾಮವು ಯಶಸ್ವಿಯಾಗುವುದೇ ಎಂಬ ಅನುಮಾನ ಉಂಟಾಗಿದೆ.
ಕದನ ವಿರಾಮದ ಹೊರತಾಗಿಯೂ, ಇಸ್ರೇಲ್ ಲೆಬನಾನ್‌ನಲ್ಲಿ ತನ್ನ ದಾಳಿಗಳನ್ನು ಮುಂದುವರೆಸಿದೆ.
ಇದು ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಅವರ ಶಾಂತಿ ಮಾತುಕತೆಯ ಪ್ರಕ್ರಿಯೆಯನ್ನು ದುರ್ಬಲಗೊಳಿಸಿದೆ.
ಈ ಎಲ್ಲಾ ಅನಿಶ್ಚತೆಗಳ ಹೊರತಾಗಿಯೂ, ಏಪ್ರಿಲ್ 11 ಮತ್ತು 12 ರಂದು ನಿಗದಿಯಾಗಿರುವ ಮುಂದಿನ ಸುತ್ತಿನ ಮಾತುಕತೆಗಳನ್ನು ನಡೆಸಲು ಇಸ್ಲಾಮಾಬಾದ್ ಪೂರ್ಣ ಪ್ರಮಾಣದಲ್ಲಿ ಸಿದ್ಧತೆ ನಡೆಸುತ್ತಿದೆ.
ಉನ್ನತ ಮಟ್ಟದ ಭದ್ರತಾ ವ್ಯವಸ್ಥೆಗಳನ್ನು ನಿರ್ವಹಿಸಲು ಪಾಕಿಸ್ತಾನವು ಸಿದ್ಧವಾಗಿಲ್ಲದಿರುವಂತೆ ತೋರುತ್ತಿದೆ. ವಿಡಿಯೋ ಇಲ್ಲಿದೆ ನೋಡಿ.