ಮಹಿಳೆ-ಮನೆ-ಬದುಕು

ಕಿಚನ್

ನೀವು ಬಯಸುವ ಸೌಂದರ್ಯ ಬ್ಯೂಟಿಪಾರ್ಲರ್‌ನೊಳಗೆಲ್ಲೋ ಖಂಡಿತಾ ಇಲ್ಲ. ಅದು ನಿಮ್ಮ ಮನೆಯ ಅಡುಗೆ ಕೋಣೆಯಲ್ಲಿಯೇ ಅಡಗಿ ಕುಳಿತಿದೆ. ಸಾವಿರಾರು ಹಣ ನೀಡಿ ಫೇಶಿಯಲ್ ಮಾಡಿಕೊಳ್ಳುವ ಬದಲು ಸುಲಭವಾಗಿ ದೊರೆಯುವ ವಸ್ತುಗಳಿಂದ ನಿಮ್ಮ ಸೌಂದರ್ಯಕ್ಕೆ ಇನ್ನಷ್ಟು ಮೆರುಗು ನೀಡಬಹುದು.

  • ಸಾಧ್ಯವಾದಷ್ಟು ಮಟ್ಟಿಗೆ ಮುಖಕ್ಕೆ ಸಾಬೂನಿನ ಬಳಕೆ ಕಡಿಮೆಮಾಡಿ. ಸಾಬೂನು ಇಲ್ಲದೇ ನಡೆಯುವುದೇ ಇಲ್ಲವೆಂದರೆ, ಉತ್ತಮ ಗುಣಮಟ್ಟದ ಸಾಬೂನನ್ನು ಬಳಸಿ.
  • ಗುಲಾಬಿ ಜಲ ಹಾಗೂ ಹಾಲಿನಲ್ಲಿ ಲಿಂಬೆರಸ ಮಿಶ್ರಣ ಮಾಡಿ ತ್ವಚೆಯ ಮೇಲೆ ಕೈಗಳಿಂದ ಸೌಮ್ಯವಾಗಿ ಮಸಾಜ್ ಮಾಡಿಕೊಳ್ಳಿ. ಇದರಿಂದ ನಿಮ್ಮ ತ್ವಚೆಗೆ ಹೊಳಪು ಬರುವುದು.
  • ಮೊಸರಿಗೆ ಅರಿಶಿನ, ಕಡಲೆಹಿಟ್ಟು ಹಾಗೂ ಎರಡು ಹನಿ ಗುಲಾಬಿ ಜಲ ಸೇರಿಸಿ ಪೇಸ್ಟ್ ತಯಾರಿಸಿ ಇದನ್ನು ಮುಖ, ಕುತ್ತಿಗೆಗೆ ಹಚ್ಚಿ ಒಣಗಲು ಬಿಡಿ. 15 ನಿಮಿಷದ ನಂತರ ತಣ್ಣನೆಯ ನೀರಿನಿಂದ ತೊಳೆದುಕೊಳ್ಳಿ. ತ್ವಚೆಗೆ ಮೆರುಗು ಬರುವುದು.
  • ಗುಲಾಬಿ ಜಲದಲ್ಲಿ ಅರ್ಧ ಕಪ್ ಮುಲ್ತಾನಿ ಮಣ್ಣನ್ನು ಸೇರಿಸಿ ದಟ್ಟ ಪೇಸ್ಟ್ ತಯಾರಿಸಿ. ಇದನ್ನು ಮುಖ, ಕುತ್ತಿಗೆ, ಕೈಗಳಿಗೆ ಹಚ್ಚಿಕೊಳ್ಳಿ. 15 ನಿಮಿಷದ ನಂತರ ಸಾಧಾರಣ ಬಿಸಿ ನೀರಿನಿಂದ ತೊಳೆದುಕೊಳ್ಳಿ.
  • ನಿಮ್ಮದು ಎಣ್ಣೆಚರ್ಮವಾಗಿದ್ದರೆ ಗುಲಾಬಿ ಜಲ ಮತ್ತು ಗ್ಲಿಸರಿನ್‌ನಲ್ಲಿ ಕಿತ್ತಳೆ ಸಿಪ್ಪೆಯ ಚೂರ್ಣ ಹಾಕಿ. ಇದನ್ನು ಮುಖಕ್ಕೆ ಲೇಪಿಸಿ ನಿಧಾನವಾಗಿ ಮಸಾಜ್ ಮಾಡಿ. ಹತ್ತು ನಿಮಿಷಗಳ ಬಳಿಕ ಒರೆಸಿಕೊಳ್ಳಿ.
  • ಜೇನು ತುಪ್ಪ, ಒಂದು ಲಿಂಬೆಹಣ್ಣಿನ ರಸವನ್ನು ಮಿಶ್ರಣ ಮಾಡಿ ಈ ಮಿಶ್ರಣವನ್ನು ಹಚ್ಚಿಕೊಳ್ಳುವುದರಿಂದ ಸುಕ್ಕುಗಳು ನಿವಾರಣೆಯಾಗುತ್ತವೆ.
  • ಮುಖದ ಮೇಲೆ ಸುಕ್ಕು ಇದ್ದರೆ, ಅವುಗಳ ನಿವಾರಣೆಗೆ ಸೌತೆರಸ ಹಾಗೂ ನಿಂಬೆರಸ ಸಮಾನ ಪ್ರಮಾಣದಲ್ಲಿ ತಗೆದುಕೊಂಡು ಅದರಲ್ಲಿ ಒಂದು ಚಿಟಿಕೆಯಷ್ಟು ಅರಿಶಿನ ಪುಡಿ ಸೇರಿಸಿ ಈ ಮಿಶ್ರಣವನ್ನು ಸುಕ್ಕು ಇರುವ ಭಾಗಕ್ಕೆ ಹಚ್ಚಿ ನಿಧಾನವಾಗಿ ಮಸಾಜ್ ಮಾಡಿಕೊಳ್ಳಿ. ನಂತರ ತಣ್ಣೀರಿನಿಂದ ಮುಖ ತೊಳೆದುಕೊಳ್ಳಿ.
  • ನಿಮ್ಮ ಕೂದಲಿಗೆ ದಟ್ಟ ಕಪ್ಪು ಹಾಗೂ ಇನ್ನಷ್ಟು ಹೊಳಪು ಬರುವಂತೆ ಮಾಡಬೇಕೆ? ಹಾಗಾದರೆ ಒಣಗಿದ ನೆಲ್ಲಿಕಾಯಿಗಳನ್ನು ಪುಡಿ ಮಾಡಿ ಅದರಲ್ಲಿ ನಿಂಬೆರಸ ಸೇರಿಸಿ ನಿತ್ಯ ಕೂದಲಿಗೆ ಹಚ್ಚಿಕೊಳ್ಳಿ.
ನೀವೂ ಬರೆಯಿರಿ...
rangolikp@gmail.com

- ವೈ.ಬಿ. ಕಡಕೋಳ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಾಲಿವುಡ್ ಹಿರಿಯ ನಟ ನಾನಾ ಪಾಟೇಕರ್ ಇನ್ನಿಲ್ಲ

"ಜೀವಕ್ಕೆ ಕುತ್ತು ತರುವ ಹಾದಿ": ರಷ್ಯಾ ಸೇನಾ ನೇಮಕಾತಿ ಆಮಿಷಗಳಿಗೆ ಬಲಿಯಾಗದಂತೆ ನಾಗರಿಕರಿಗೆ ಭಾರತ ಕಟ್ಟುನಿಟ್ಟಿನ ಸೂಚನೆ, 69 ಭಾರತೀಯರ ಬಿಡುಗಡೆಗೆ ಪಟ್ಟು..!

ಮಗು ಆಡಿಸುತ್ತಿದ್ದ ವ್ಯಕ್ತಿ ಮೇಲೆ ಗೂಳಿ ದಾಳಿ; ರಕ್ಷಣೆಗೆ ಧಾವಿಸಿದ ಮಹಿಳೆ, Video ವೈರಲ್

'ಭಾರತೀಯನ ಮದುವೆಯಾದಾಕ್ಷಣ Indian ಆಗಲ್ಲ, ಬಾಂಗ್ಲಾದೇಶಿ ಪತ್ನಿಗೆ ಭಾರತ ಪ್ರವೇಶ ನಿರಾಕರಣೆ ಸರಿ ಇದೆ': ಹೈಕೋರ್ಟ್

CM ಡಿ.ಕೆ. ಶಿವಕುಮಾರ್‌ಗಾಗಿ IndiGo flight ಲೇಟ್? VVIP ಸಂಸ್ಕೃತಿ ವಿರುದ್ಧ ಪ್ರಯಾಣಿಕರ ಆಕ್ರೋಶ..!