ಮಹಿಳೆ-ಮನೆ-ಬದುಕು

ಸ್ತ್ರೀ ರಕ್ಷಣೆಗೆ ಆ್ಯಪ್

ಮಹಿಳೆಯರ ಸುರಕ್ಷೆಗೆ ಈಗ ಹತ್ತು ಹಲವು ನೆರವುಗಳಿವೆ. ಖಾಲಿ ಮೊಬೈಲ್ ಕೂಡ ಆಕೆಯ ಕೈ ಹಿಡಿಯುತ್ತಿದೆ. ಸ್ತ್ರೀ ಸುರಕ್ಷತೆಗಾಗಿಯೇ ಇಲ್ಲಿವೆ ಕೆಲವು ಆ್ಯಪ್‌ಗಳು...

ಮಹಿಳೆಯರ ಸುರಕ್ಷೆಗೆ ಈಗ ಹತ್ತು ಹಲವು ನೆರವುಗಳಿವೆ. ಖಾಲಿ ಮೊಬೈಲ್ ಕೂಡ ಆಕೆಯ ಕೈ ಹಿಡಿಯುತ್ತಿದೆ. ಸ್ತ್ರೀ ಸುರಕ್ಷತೆಗಾಗಿಯೇ ಇಲ್ಲಿವೆ ಕೆಲವು ಆ್ಯಪ್‌ಗಳು...

ಫೈಟ್ ಬ್ಯಾಕ್
ನೀವು ಯಾವುದಾದರೂ ತೊಂದರೆಗೆ ಸಿಲುಕಿದಾಗ ಜಿಪಿಎಸ್, ಎಸ್ಸೆಮ್ಮೆಸ್ಸ್, ಲೊಕೇಶನ್ ಮ್ಯಾಪ್, ಜಿಪಿಆರ್‌ಎಸ್, ಇಮೇಲ್ ಮತ್ತು ಫೇಸ್‌ಬುಕ್ ಸಂಪರ್ಕಗಳ ಮೂಲಕ ಈ ಆ್ಯಪ್ ನಿಮ್ಮ ಗೆಳೆಯರಿಗೆ SOS ಸಂದೇಶವನ್ನು ಕಳುಹಿಸುತ್ತದೆ.

ಸರ್ಕಲ್ 6
ಕಾಲೇಜು ವಿದ್ಯಾರ್ಥಿನಿಯರಿಗಾಗಿಯೇ ಹೇಳಿ ಮಾಡಿಸಿದ ಆ್ಯಪ್ ಇದು. ಈ ಆ್ಯಪ್‌ನಲ್ಲಿ ನಿಮ್ಮ 6 ಆಪ್ತ ಗೆಳೆಯ/ ಗೆಳತಿಯರ ಮೊಬೈಲ್ ಸಂಖ್ಯೆ ಸೇರಿಸಿಕೊಂಡಿದ್ದರೆ, ನಿಮಗೆ ಕಷ್ಟ ಬಂದಾಗ ಅವರಿಗೆ ಸಂದೇಶ ರವಾನೆಯಾಗುತ್ತದೆ. ಸ್ಥಳೀಯ ಎಮೆರ್ಜೆನ್ಸಿ ನಂಬರ್‌ಗೆ ಮತ್ತು ಹಾಟ್‌ಲೈನ್ ನಂಬರ್‌ಗೂ ಸಂದೇಶಗಳು ರವಾನೆಯಾಗುತ್ತವೆ. ಹಿಂದಿಯಲ್ಲೂ ಈ ಆ್ಯಪ್ ಲಭ್ಯವಿದ್ದು, ಐಫೋನ್ ಮತ್ತು ಆ್ಯಂಡ್ರಾಯ್ಡ್ ಫೋನ್‌ಗಳಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬಹುದು.

ಅಲರ್ಟ್ ಅಸ್
ಈ ಆ್ಯಪ್‌ನಿಂದ ಹೆತ್ತವರಿಗೆ ತಮ್ಮ ಮಕ್ಕಳ ಆಗುಹೋಗುಗಳು ಗೊತ್ತಾಗುತ್ತವೆ. ಸಮಸ್ಯೆಗಳೆದುರಾದಾಗ ಅಲರ್ಟ್ ಬಟನ್ ಒತ್ತುವ ಮೂಲಕ ನಮ್ಮ ವಿಶ್ವಸನೀಯ ವ್ಯಕ್ತಿಗಳಿಗೆ ಸಂದೇಶ ಕಳುಹಿಸಬಹುದು. ಬ್ಲಾಕ್‌ಬೆರ್ರಿ ಫೋನ್‌ಗಳಲ್ಲಿ ಇದನ್ನು ಡೌನ್‌ಲೋಡ್ ಮಾಡಬಹುದು.

ಸ್ಕ್ರೀಮ್ ಅಲಾರ್ಮ್
ಸಂಕಷ್ಟಕ್ಕೆ ಸಿಲುಕಿದಾಗ ನೀವು ಮೊಬೈಲ್‌ನ ಒಂದು ಬಟನ್ ಒತ್ತಿದರೆ ಸಾಕು, ಅದು ಹೆಣ್ಣಿನ ದನಿಯಲ್ಲಿ ಕಿರುಚಲು ಶುರುವಾಗುತ್ತದೆ. ಒಬ್ಬಂಟಿಯಾಗಿ ಯಾತ್ರೆ ಮಾಡುವ ಸಂದರ್ಭಗಳಲ್ಲಿ ಈ ಆ್ಯಪ್ ಬಳಸುವುದು ಉತ್ತಮ. ಆ್ಯಂಡ್ರಾಯ್ಡ್ ಫೋನ್‌ಗಳಲ್ಲಿ ಇದನ್ನು ಡೌನ್‌ಲೋಡ್ ಮಾಡಬಹುದು.

ನಿರ್ಭಯಾ

ವಿಂಡೋಸ್ ಫೋನ್‌ಗಳಲ್ಲಿ ಲಭ್ಯವಾಗುವ ಈ ಆ್ಯಪ್ ನೀವು ತೊಂದರೆಗೊಳಗಾದಾಗ ಮೊಬೈಲ್ ಅನ್ನು ಅಲುಗಾಡಿಸಿದರೆ ಸಾಕು, ಇದು ನಿಮ್ಮ ಆಪ್ತರ ಗುಂಪಿಗೆ ಕರೆ ಅಥವಾ ಸಂದೇಶವನ್ನು ಕಳುಹಿಸುತ್ತದೆ. ಮಾತ್ರವಲ್ಲದೆ ಪ್ರತಿ ಬಾರಿ 300 ಮೀಟರ್‌ಗಳನ್ನು ಕ್ರಮಿಸುತ್ತಿದ್ದಂತೆ ಪದೇ ಪದೇ ಇದು ನಿಮ್ಮ ಆಪ್ತರಿಗೆ ನೀವಿರುವ ಸ್ಥಳದ ಮಾಹಿತಿಗಳನ್ನು ರವಾನಿಸುತ್ತಿರುತ್ತದೆ.

- ರಶ್ಮಿ ಕಾಸರಗೋಡು

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Delhi CJP Protest: ಅಭಿಜೀತ್ ದೀಪ್ಕೆ, ಸೌರವ್ ದಾಸ್, ಆಶುತೋಷ್ ರಂಕಾ,ಯೂಟ್ಯೂಬರ್ ಧ್ರುವ್ ರಾಠಿ ಸೇರಿ 200ಕ್ಕೂ ಹೆಚ್ಚು ಮಂದಿ ಪೊಲೀಸ್ ವಶಕ್ಕೆ; Video

CEC ಜ್ಞಾನೇಶ್ ಕುಮಾರ್ ವಜಾಕ್ಕೆ ಆಗ್ರಹಿಸಿ CJP ಪ್ರತಿಭಟನೆ: ದೆಹಲಿಯಲ್ಲಿ ಬಂಧನ ಪ್ರಕ್ರಿಯೆ ಆರಂಭ, ತೀವ್ರ ಭದ್ರತೆ; Video

‘ಪ್ರೇಮದ ಊರಲಿ’ ಭರ್ಜರಿ ಕಲೆಕ್ಷನ್: ಬಾಕ್ಸ್ ಆಫೀಸ್‌ನಲ್ಲಿ ಬರೋಬ್ಬರಿ 39 ಕೋಟಿ ರೂ. ಗಳಿಕೆ!

‘ಕಾನೂನು ಸುವ್ಯವಸ್ಥೆಗೆ ಗಂಭೀರ ಅಪಾಯವಿದೆ’: ಸಿಜೆಪಿ ಪ್ರತಿಭಟನೆಗೆ ಕೆಲವೇ ಗಂಟೆ ಮೊದಲು ರಾಜ್ಯಗಳಿಗೆ ಪತ್ರ ಬರೆದು MHA ಹೇಳಿದ್ದೇನು?

ನವೆಂಬರ್‌ನಲ್ಲಿ ಕರ್ನಾಟಕ ಬಿಜೆಪಿಗೆ ಮೇಜರ್ ಸರ್ಜರಿ: ಬಿವೈ ವಿಜಯೇಂದ್ರ, ಆರ್ ಅಶೋಕಗೆ ಗೇಟ್ ಪಾಸ್?; ಹೊಸ ಮುಖಗಳಿಗೆ ಮಣೆ!