ವಾಷಿಂಗ್ಟನ್: ಪಾಕಿಸ್ತಾನಕ್ಕೆ ಅಮೆರಿಕ ಸರ್ಕಾರದ ಎಫ್ 16 ಯುದ್ಧ ವಿಮಾನಗಳ ಮಾರಾಟ ಪ್ರಸ್ತಾಪಕ್ಕೆ ಅಲ್ಲಿನ ಕಾಂಗ್ರೆಸ್ ತಡೆಯೊಡ್ಡಿದೆ.
ಪಾಕಿಸ್ತಾನಕ್ಕೆ ಇದರಿಂದ ಯಾವ ರೀತಿಯ ನೆರವಾಗಲಿದೆ ಸೇರಿದಂತೆ ಹಲವು ಪ್ರಶ್ನೆಗಳನ್ನು ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ನ ಸದಸ್ಯರು ಹಾಕಿದ್ದಾರೆ. ಈ ಪೈಕಿ ಸದಸ್ಯರೊಬ್ಬರು ವಿಮಾನ ಮಾರಾಟ ಮಾಡುವ ಪ್ರಸ್ತಾಪಕ್ಕೆ ತಡೆಯೊಡ್ಡಲೇಬೇಕೆಂದು ಸಲಹೆ ಮಾಡಿದ್ದಾರೆ. ಹಾಗೆಂದು ಒಟ್ಟಾರೆ ಒಪ್ಪಂದ ರದ್ದಾಗುವುದಿಲ್ಲ ಎಂದು ಮೂಲಗಳು ತಿಳಿಸಿವೆ ಎಂದು ಹಿಂದುಸ್ತಾನ್ ಟೈಮ್ಸ್' ವರದಿ ಮಾಡಿದೆ. ಒಳ್ಳೆಯ ತಾಲೀಬಾನ್, ಕೆಟ್ಟ ತಾಲೀಬಾನ್ ಎಂಬ ವ್ಯತ್ಯಾಸ ಎಣಿಸದೆ ಉಗ್ರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಅಮೆರಿಕ ಸೂಚಿಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.