ಬೈರುತ್: ಅಮಾಯಕರನ್ನು ಅಮಾನುಷವಾಗಿ ಕೊಳ್ಳುವ ಮೂಲಕ ಜಿಹಾದಿ ಜಾನ್ ಎಂದೇ ಪ್ರಸಿದ್ಧನಾಗಿದ್ದ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಅಂಡ್ ಸಿರಿಯಾ(ಇಸಿಸ್) ಸಂಘಟನೆಯ ಪ್ರಮುಖ ಉಗ್ರ ಮೊಹಮ್ಮದ್ ಎಮ್ವಜಿ ಡ್ರೋಣ್ ದಾಳಿಯಲ್ಲಿ ಮೃತಪಟ್ಟಿದ್ದಾನೆ ಎಂದು ಇಸಿಸ್ ಸಂಘಟನೆ ಖಚಿತಪಡಿಸಿದೆ.
ಕಳೆದ ನವೆಂಬರ್ 12ರಂದು ಸಿರಿಯಾದ ಇಸಿಸ್ ಉಗ್ರರ ಪ್ರಾಬಲ್ಯದ ರಖಾದಲ್ಲಿ ಜಿಹಾದಿ ಜಾನ್ ತೆರಳುತ್ತಿದ್ದ ಕಾರಿನ ಮೇಲೆ ಅಮೆರಿಕ ಸೈನಿಕರು ಡ್ರೋಣ್ ದಾಳಿ ನಡೆಸಿದ್ದರು. ದಾಳಿಯಲ್ಲಿ ‘ಜಿಹಾದಿ ಜಾನ್’ ಮೃತಪಟಿದ್ದಾನೆ ಎಂದು ಅಮೆರಿಕಾ ಸೇನೆ ಹೇಳಿಕೊಂಡಿತ್ತು. ಆದರೆ ಇದುವರೆಗೂ ಇಸಿಸ್ ಉಗ್ರರು ಈ ವಿಷಯವನ್ನು ಸ್ಪಷ್ಟಪಡಿಸಿರಲಿಲ್ಲ. ಇದೀಗ ಜಿಹಾದಿ ಜಾನ್ ಮೃತಪಟ್ಟಿರುವುದಾಗಿ ಇಸಿಸ್ ಸಂಘಟನೆ ತನ್ನ ಆನ್ ಲೈನ್ ಮ್ಯಾಗಜಿನ್ ದಬೀಕ್ ನಲ್ಲಿ ಹೇಳಿದೆ.
ಬ್ರಿಟನ್ ಪ್ರಜೆಯಾಗಿದ್ದ ಜಿಹಾದಿ ಜಾನ್ ಇಸಿಸ್ ಉಗ್ರರು ಬಿಡುಗಡೆ ಮಾಡುತ್ತಿದ್ದ ಬಹುತೇಕ ವಿಡಿಯೋಗಳಲ್ಲಿ ಕಾಣಿಸಿಕೊಂಡಿದ್ದ. ಈತ ಒತ್ತೆಯಾಳುಗಳ ಶಿರಚ್ಛೇದನ ಮಾಡುತ್ತಿದ್ದ ದೃಶ್ಯಾವಳಿಗಳಿಂದಾಗಿಯೇ ವಿಶ್ವದಾದ್ಯಂತ ಕುಖ್ಯಾತನಾಗಿದ್ದ.