ಎಫ್‌–16 ಯುದ್ಧ ವಿಮಾನ 
ವಿದೇಶ

ಎಫ್-16 ಯುದ್ಧ ವಿಮಾನ ಖರೀದಿಗೆ ಅಮೆರಿಕ ಷರತ್ತುಗಳನ್ನು ತಿರಸ್ಕರಿಸಿದ ಪಾಕ್

ಎಫ್‌–16 ಯುದ್ಧ ವಿಮಾನಗಳ ಖರೀದಿಗೆ ಅಮೆರಿಕ ವಿಧಿಸಿರುವ ಷರತ್ತುಗಳನ್ನು ಪಾಕಿಸ್ತಾನ ತಿರಸ್ಕರಿಸಿದೆ.

ಇಸ್ಲಾಮಾಬಾದ್: ಎಫ್‌–16 ಯುದ್ಧ ವಿಮಾನಗಳ ಖರೀದಿಗೆ ಅಮೆರಿಕ ವಿಧಿಸಿರುವ ಷರತ್ತುಗಳನ್ನು ಪಾಕಿಸ್ತಾನ ತಿರಸ್ಕರಿಸಿದ್ದು, ಎಫ್-16 ಪೂರೈಕೆಗೆ ಸಬ್ಸಿಡಿ ನೀಡದೆ ಹೋದಲ್ಲಿ, ಭಯೋತ್ಪಾದನೆಯ ವಿರುದ್ಧದ ತನ್ನ ಹೋರಾಟಕ್ಕೆ ಬೇರೆಯ ಯುದ್ಧ ವಿಮಾನಗಳನ್ನು ಖರೀದಿಸುವ ಚಿಂತನೆ ನಡೆಸಲಾಗುವುದು ಎಂದು ಹೇಳಿದೆ.
ಪತ್ರಕರ್ತರೊಂದಿಗೆ ಮಾತನಾಡಿರುವ ಪಾಕಿಸ್ತಾನದ ವಿದೇಶಾಂಗ ಕಾರ್ಯದರ್ಶಿ ಅಜೀಜ್ ಚೌಧರಿ, ಎಫ್-16 ಯುದ್ಧ ವಿಮಾನ ಪೂರೈಕೆಗೆ ಅಮೆರಿಕ ವಿಧಿಸಿರುವ ಷರತ್ತುಗಳ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಪಾಕಿಸ್ತಾನ ಷರತ್ತುಗಳನ್ನು ತಿರಸ್ಕರಿಸುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.
ಎಫ್-16 ಮಾದರಿಯ ಯುದ್ಧ ವಿಮಾನಗಳನ್ನು ಪಾಕಿಸ್ತಾನ ಭಯೋತ್ಪಾದನೆ ವಿರುದ್ಧ ಬಳಕೆ ಮಾಡಲಿರುವ ಹಿನ್ನೆಲೆಯಲ್ಲಿ ಅಮೆರಿಕ ಯುದ್ಧ ವಿಮಾನಗಳ ಪೂರೈಕೆಗೆ ಷರತ್ತುಗಳನ್ನು ವಿಧಿಸುವುದು ಸೂಕ್ತವಲ್ಲ ಎಂದು ಅಭಿಪ್ರಾಯಪಟ್ಟಿರುವ ಚೌಧರಿ, ಸಬ್ಸಿಡಿ ರಹಿತವಾಗಿ ಯುದ್ಧ ವಿಮಾನಗಳನ್ನು ಖರೀದಿಸುವಷ್ತು ಹಣ ಪಾಕಿಸ್ತಾನದ ಬಳಿ ಇಲ್ಲ. ಆದ್ದರಿಂದ ಭಯೋತ್ಪಾದನೆ ವಿರುದ್ಧದ ಕಾರ್ಯಾಚರಣೆಗೆ ತನ್ನಲ್ಲಿರುವ ಹಣಕ್ಕೆ ಹೊಂದುವಂತಹ ಬೇರೆ ಮಾದರಿಯ ಯುದ್ಧ ವಿಮಾನಗಳನ್ನು ಖರೀದಿಸುವ ಬಗ್ಗೆ ಪರಿಗಣಿಸಲಾಗುವುದು ಎಂದು ತಿಳಿಸಿದ್ದಾರೆ. 
ಪಾಕಿಸ್ತಾನ ಹಕ್ಕಾನಿ ಉಗ್ರ ಜಾಲದ ವಿರುದ್ಧ ಪರಿಣಾಮಕಾರಿಯಾಗಿ ಕಾರ್ಯಾಚರಣೆ ನಡೆಸದೆ ಇದ್ದ ಹಿನ್ನೆಲೆಯಲ್ಲಿ ಪಾಕ್ ಗೆ ನೀಡಬೇಕಿದ್ದ ನೆರವಿಗೆ ಅಮೆರಿಕ ಕತ್ತರಿ ಹಾಕಿತ್ತು ಅಲ್ಲದೇ, ಕೆಲವು ಸೆನೆಟರ್‌ಗಳು ವಿದೇಶಿ ಸೇನೆಗೆ ಹಣಕಾಸು ನೆರವು (ಎಫ್‌ಎಂಎಫ್‌) ನೀಡುವುದನ್ನು ತೀವ್ರವಾಗಿ ವಿರೋಧಿಸಿದ್ದ ಹಿನ್ನೆಲೆಯಲ್ಲಿ ಸಬ್ಸಿಡಿಗೂ ಕತ್ತರಿ ಹಾಕಿದ್ದ ಅಮೆರಿಕ ಪಾಕ್ ತನ್ನ ರಾಷ್ಟ್ರೀಯ ನಿಧಿಯನ್ನು ಬಳಸಿ ಪೂರ್ತಿ ಮೊತ್ತವನ್ನು ಪಾವತಿಸಬೇಕು ಎಂದು ಸ್ಪಷ್ಟಪಡಿಸಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬ್ಲಿಂಕಿಟ್, ಸ್ವಿಗ್ಗಿ, ಜೆಪ್ಟೊಗೆ 10 ನಿಮಿಷಗಳ ಡೆಲಿವರಿ ಸೇವೆ ನಿಲ್ಲಿಸುವಂತೆ ಸರ್ಕಾರ ಸೂಚನೆ; ಯಾಕೆ ಗೊತ್ತಾ?

ಅಷ್ಟೊಂದು ಪ್ರೀತಿ ಇದ್ದರೆ, ನಿಮ್ಮ ಮನೆಗೇಕೆ ಕರೆದೊಯ್ಯಬಾರದು?; ಶ್ವಾನ ಪ್ರಿಯರಿಗೆ ಸುಪ್ರೀಂ ಕೋರ್ಟ್ ಚಾಟಿ

ಇರಾನ್ ಅಶಾಂತಿ: ಭಾರತದ ಬಾಸ್ಮತಿ ಅಕ್ಕಿ ರಫ್ತಿಗೆ ಹೊಡೆತ, ಬೆಲೆ ಕುಸಿತ

ಇರಾನ್ ಜೊತೆ ವ್ಯವಹಾರ ನಡೆಸುವ ದೇಶಗಳ ಮೇಲೆ ಶೇ.25ರಷ್ಟು ಸುಂಕ: Donald Trump

Toxic Teaser: ಯಶ್ ಅಭಿಮಾನಿಗಳು ನಿರಾಳ, ಯೂಟ್ಯೂಬ್ ವಿಡಿಯೋಗೆ 'ಪ್ರಮಾಣ ಪತ್ರ ಅವಶ್ಯಕತೆ ಇಲ್ಲ': ಸೆನ್ಸಾರ್ ಮಂಡಳಿ

SCROLL FOR NEXT