ವಾಷಿಂಗ್ ಟನ್: ಶುದ್ಧ ಇಂಧನ ಅಭಿವೃದ್ಧಿಗಾಗಿ ಕೈಗೊಂಡ ಜಾಗತಿಕ ಉಪಕ್ರಮಕ್ಕೆ ಸೂಕ್ತ ಹೆಸರು ನೀಡಲು ವಿಶ್ವದ ನಾಯಕರು ಪರದಾಡುತ್ತಿದ್ದಾಗ, ಪ್ರಧಾನಿ ನರೇಂದ್ರ ಮೋದಿ ಮಿಷನ್ ಇನೋವೇಷನ್ ಎಂಬ ಆಕರ್ಷಕ ಹೆಸರನ್ನು ಸೂಚಿಸಿದ್ದರು ಎಂದು ಅಮೆರಿಕ ಇಂಧನ ಸಚಿವ ಮಾಹಿತಿ ನೀಡಿದ್ದಾರೆ.
ಜಾಗತಿಕ ಮಟ್ಟದಲ್ಲಿ ಇಂಧನ ಶಕ್ತಿಯನ್ನು ದ್ವಿಗುಣಗೊಳಿಸುವುದು, ಸಂಶೋಧನೆ ಮತ್ತು ಅಭಿವೃದ್ಧಿಯ ಬಗ್ಗೆ ಚರ್ಚೆ ನಡೆಯುತ್ತಿದ್ದಾಗ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಂಬಂಧಿಸಿದಂತೆ ಒಂದು ಆಸಕ್ತಿದಾಯಕ ಘಟನೆ ಇದೆ, ಶುದ್ಧ ಇಂಧನ ಅಭಿವೃದ್ಧಿ ಉಪಕ್ರಮಕ್ಕಾಗಿ ಸೂಕ್ತ ಹೆಸರಿಗಾಗಿ ವಿಶ್ವ ನಾಯಕರು ತಡಕಾಡುತ್ತಿದ್ದಾಗ ಪ್ರಧಾನಿ ನಾವು ಈ ಉಪಕ್ರಮವನ್ನು ಮಿಷನ್ ಇನೋವೇಷನ್ ಎಂದು ಕರೆಯಲು ಸೂಚಿಸಿದ್ದರು ಎಂದು ಅಮೆರಿಕದ ಇಂಧನ ಸಚಿವರು ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಸಲಹೆಯನ್ನು ಜಾಗತಿಕ ನಾಯಕರು ಒಪ್ಪಿ, ಶುದ್ಧ ಇಂಧನ ಅಭಿವೃದ್ಧಿಗೆ ಮಿಷನ್ ಇನೋವೇಷನ್ ಎಂಬ ಹೆಸರು ನೀಡಿದ್ದಾರೆ ಎಂದು ಅಮೆರಿಕ ಸಚಿವ ಅರ್ನೆಸ್ಟ್ ಮೊನಿಜ್ ತಿಳಿಸಿದ್ದಾರೆ. ಇಂಧನ ಶಕ್ತಿಯನ್ನು ದ್ವಿಗುಣಗೊಳಿಸಲು ಕೈಗೊಂಡಿರುವ ಉಪಕ್ರಮದಲ್ಲಿ ಭಾರತವೂ ಕೈ ಜೋಡಿಸಿದ್ದು, 2020 ರ ವೇಳೆಗೆ 175 ಗಿಗಾ ವ್ಯಾಟ್ ಇಂಧನ ಶಕ್ತಿಯನ್ನು ಉತ್ಪಾದನೆ ಮಾಡುವ ಗುರಿ ಹೊಂದಿದೆ.