ಬಾಂಬ್'ಗಳ ಮಹಾತಾಯಿ ಮೊಅಬ್ 
ವಿದೇಶ

'ಬಾಂಬ್'ಗಳ ಮಹಾತಾಯಿ' ದಾಳಿಗೆ 13 ಭಾರತೀಯ ಉಗ್ರರು ಬಲಿ?

ಇತ್ತೀಚೆಗಷ್ಟೇ ಅಫ್ಘಾನಿಸ್ದಾನದ ಮೇಲೆ ಅಮೆರಿಕ ನಡೆಸಿದ್ದ ಅತೀ ದೊಡ್ಡ ಪರಮಾಣೇತರ ಬಾಂಬ್ (ಬಾಂಬ್'ಗಳ ಮಹಾತಾಯಿ) ದಾಳಿಯಲ್ಲಿ ಮೃತಪಟ್ಟ 96 ಜನರಲ್ಲಿ 13 ಮಂದಿ ಭಾರತೀಯರೂ ಕೂಡ ಇದ್ದರು ಎಂದು ಮೂಲಗಳಿಂದ ತಿಳಿದುಬಂದಿದೆ....

ಕಾಬೂಲ್: ಇತ್ತೀಚೆಗಷ್ಟೇ ಅಫ್ಘಾನಿಸ್ದಾನದ ಮೇಲೆ ಅಮೆರಿಕ ನಡೆಸಿದ್ದ ಅತೀ ದೊಡ್ಡ ಪರಮಾಣೇತರ ಬಾಂಬ್ (ಬಾಂಬ್'ಗಳ ಮಹಾತಾಯಿ) ದಾಳಿಯಲ್ಲಿ ಮೃತಪಟ್ಟ 96 ಜನರಲ್ಲಿ 13 ಮಂದಿ ಭಾರತೀಯರೂ ಕೂಡ ಇದ್ದರು ಎಂದು ಮೂಲಗಳಿಂದ ತಿಳಿದುಬಂದಿದೆ. 
ಅಫ್ಘಾನಿಸ್ತಾನದ ಮೇಲಿನ ದಾಳಇಯಲ್ಲಿ ಭಾರತೀಯರೂ ಕೂಡ ಮೃತಪಟ್ಟಿದ್ದಾರೆಂದು ಗುಪ್ತಚರ ಇಲಾಖೆ ದೃಢಪಡಿಸಿದೆ ಎಂದು ಟೊಲೊ ಸುದ್ದಿ ಮಾಧ್ಯಮವೊಂದು ವರದಿ ಮಾಡಿದೆ. 
ಟೊಲೊ ಅಫ್ಘಾನಿಸ್ತಾದ ಸುದ್ದಿ ಮಾಧ್ಯಮವಾಗಿದ್ದು, ಅಮೆರಿಕ ನಡೆಸಿದ ಬಾಂಬ್ ದಾಳಿಯಲ್ಲಿ 12 ಪಾಕಿಸ್ತಾನ ಪ್ರಜೆಗಳು, 12 ತಜಿಕಿಸ್ತಾನಿಗಳು ಹಾಗೂ 13 ಮಂದಿ ಭಾರತೀಯರೂ ಇದ್ದರು ಎಂದು ವರದಿಯಲ್ಲಿ ಹೇಳಿಕೊಂಡಿದೆ. 
ನಂಗರ್ ಹಾರ್ ಪ್ರಾಂತ್ಯದ ಅಚಿನ್ ಜಿಲ್ಲೆಯ ಸುರಂಗಗಳು ಹಾಗೂ ಗುಹೆಗಳ ಮೇಲೆ ನಡೆದ ದಾಳಿಯಲ್ಲಿ 13 ಭಾರತೀಯರು ಇದ್ದರು. ಮೃತಪಟ್ಟ 13 ಭಾರತೀಯರು (ಡೀಶ್) ಇಸಿಸ್ ಉಗ್ರ ಸಂಘಟನೆಗೆ ಸೇರಿದ ಉಗ್ರರಾಗಿದ್ದಾರೆ. ಈ ಪೈಕಿ ಇಬ್ಬರು ಇಸಿಸ್ ಕಮಾಂಡರ್ ಗಳಿದ್ದು, ಮೊಹಮ್ಮದ್ ಹಾಗೂ ಅಲ್ಲಾ ಗುಪ್ತಾ ಎಂದು ಗುರ್ತಿಸಲಾಗಿದೆ ಎಂದು ವರದಿ ಹೇಳಿದೆ. 
ನಂಗರ್ ಹಾರ್ ನಲ್ಲಿ ನಡೆದ ಅಮೆರಿಕ ವಾಯುದಾಳಇಯಲ್ಲಿ ಇತ್ತೀಚೆಗೆ ಇಬ್ಬರು ಕೇರಳ ಮೂಲದ ಇಸಿಸ್ ಉಗ್ರರು ಹತ್ಯೆಯಾಗಿದ್ದಾರೆಂದು ವರದಿಯಾಗಿತ್ತು. ಈಗ ಮೃತಪಟ್ಟಿದ್ದಾರೆನ್ನಲಾಗುತ್ತಿರುವ 13 ಮಂದಿ ಉಗ್ರರಲ್ಲಿ ಇಬ್ಬರನ್ನು ಹೊರತು ಪಡಿಸಿದರೆ, ಉಳಿದವರ ಊರುಗಳಾಗಲಿ ಅಥವಾ ಹೆಸರುಗಳಾಗಲಿ ಸರಿಯಾಗಿ ಲಭ್ಯವಾಗಿಲ್ಲ. ಕಳೆದ ವರ್ಷ 21 ಕೇರಳ ಮೂಲದ ಯುವಕರು ದೇಶ ಬಿಟ್ಟು ಓಡಿ ಹೋಗಿ ಇಸಿಸ್ ಉಗ್ರ ಸಂಘಟನೆಯನ್ನು ಸೇರ್ಪಡೆಗೊಂಡಿದ್ದು ಇಲ್ಲಿ ಗಮನಾರ್ಹ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಇಂದಿರಾ ಗಾಂಧಿ ಕೂಡ ಹೀಗೆ ಮಾಡಿರಲಿಲ್ಲ': ದೆಹಲಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯುವ ಮುನ್ನ ಅಭಿಜಿತ್ ದೀಪ್ಕೆ; ವಿಡಿಯೋ ಹಂಚಿಕೊಂಡ CJP

ದೇಶವಿರೋಧಿ ಶಕ್ತಿಗಳಿಂದ ಅಶಾಂತಿ ಸೃಷ್ಟಿಗೆ ಯತ್ನ; CJP ಪ್ರತಿಭಟನೆಯಿಂದ ದೂರವಿರಿ: ಮುಸ್ಲಿಮರಿಗೆ ಇಮಾಮ್‌ ಮುಖ್ಯಸ್ಥ ಕರೆ

'ತಂದಿಟ್ಟ ಗಿಡ ಮನೆಗೇ ಹಾನಿ ಮಾಡಿದ್ರೆ..'; 'ನೋ ಕ್ಲಾಸ್', BiggBoss ಇತಿಹಾಸದ ಅತಿದೊಡ್ಡ ನಿರ್ಧಾರದ ಸುಳಿವು ನೀಡಿದ ಕಿಚ್ಚಾ ಸುದೀಪ್

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌‌ವೇಯಲ್ಲಿ ಅಪಘಾತಕ್ಕೆ ಬಿಗ್ ಟ್ವಿಸ್ಟ್: ಸ್ನೇಹಿತನಿಂದಲೇ ಭೂಮಿಕಾ ಕೊಲೆ?

CJP ಪ್ರತಿಭಟನೆ: ದೆಹಲಿ ಪೊಲೀಸರ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಕೆ!