ಬೀಜಿಂಗ್: ಅರುಣಾಚಲ ಪ್ರದೇಶ ತನ್ನದು ಎಂಬ ಚೀನಾ ರಾಷ್ಟ್ರದ ವಾದಕ್ಕೆ ಶುಕ್ರವಾರ ಭಾರೀ ಹಿನ್ನಡೆಯುಂಟಾಗಿದೆ. ಅರುಣಾಚಲ ಪ್ರದೇಶ ನಮ್ಮದು ಎಂದು ಚೀನಾ ಹೇಳಿಕೊಳ್ಳುವುದಕ್ಕೆ ಯಾವ ಅರ್ಥವೂ ಇಲ್ಲ. ಅದರಿಂದ ಯಾವುದೇ ಪ್ರಯೋಜನವೂ ಇಲ್ಲ ಎಂದು ಚೀನಾದ ವಿಶ್ಲೇಷಕರೊಬ್ಬರು ಹೇಳಿದ್ದಾರೆ.
ಈ ಬಗ್ಗೆ ಪತಿಕ್ರಿಯೆ ನೀಡಿರುವ ಚೀನಾ ರಕ್ಷಣಾ ತಜ್ಞ ವಾಂಗ್ ತಾವ್ ತಾವ್ ಅವರು, ಅರುಣಾಚಲ ತನ್ನದೆಂಬ ಚೀನಾ ವಾದ ಅರ್ಥಹೀನ. ಅರುಣಾಚಲವು ಚೀನಾ ಪಾಲಿಗೆ ಕೋಳಿ ಮಾಂಸದೊಳಗಿನ ಎಲುಬು ಇದ್ದಂತೆ. ಅದು ದೇಶಕ್ಕೆ ಯಾವುದೇ ಆಸ್ತಿಯಲ್ಲ ಎಂದು ವಾದಿಸಿದ್ದಾರೆ.
ಅರುಣಾಚಲ ಪ್ರದೇಶದಿಂದ ಚೀನಾಗೆ ಯಾವುದೇ ಪ್ರಯೋಜನಗಳಿಲ್ಲ. ಅದು ಕೋಳಿಯ ಪಕ್ಕೆಲುಬಿನಂತೆ. ದೇಶಕ್ಕೆ ಅದು ಆಸ್ತಿಯಾಗಲಾರದು. ಅರುಣಾಚಲ ಪ್ರದೇಶವನ್ನು ಚೀನಾ ದಕ್ಷಿಣ ಟಿಬೆಟ್ ಎಂದು ಹೇಳುತ್ತಿದ್ದು, ಟಿಬೆಟ್'ನ ಭಾಗ, ಭಾರತ ಅತಿಕ್ರಮಣ ಮಾಡಿಕೊಂಡಿದೆ ಎನ್ನುತ್ತಿದೆ. ಆದರೆ, ಇದರಿಂದ ಚೀನಾಗೆ ಯಾವುದೇ ಪ್ರಯೋಜನವಾಗಲಾರದು.
ಅರುಣಾಚಲ ಪ್ರದೇಶವು ಚೀನಾ ಪಾಲಿಗೆ ಹೊರೆಯೇ ವಿನಾ ಆಸ್ತಿಯಲ್ಲ. ನಿಜ ಹೇಳಬೇಕೆಂದರೆ ಅರುಣಾಚಲವು ಚೀಚನಾ ಪಾಲಿಗೆ ಕಬಾಬ್ ಮೇ ಹಡ್ಡಿ ಇದ್ದಂತೆ. ಅರುಣಾಚಲದ ಭೌಗೋಳಿಕ ಪರಿಸ್ಥಿತಿಯನ್ನು ಗಮನಿಸಿದಾಗ ಆ ರಾಜ್ಯವನ್ನು ಅಭಿವೃದ್ಧಿಪಡಿಸುವುದು ಕಷ್ಟಸಾಧ್ಯ ಎಂದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics