ಉಗ್ರರ ದಮನ ಮಾಡಿದರೆ ಪಾಕಿಸ್ತಾನಕ್ಕೆ ಭಾರತದಿಂದ ಆರ್ಥಿಕ ಪ್ರಯೋಜನ: ಅಮೆರಿಕ
ತನ್ನ ನೆಲದಲ್ಲಿರುವ ಉಗ್ರರನ್ನು ದಮನ ಮಾಡುವ ಮೂಲಕ ಪಾಕಿಸ್ತಾನ ಭಾರತದಿಂದ ಆರ್ಥಿಕ ಪ್ರಯೋಜನ ಪಡೆಯಬಹುದು ಎಂದು ಅಮೆರಿಕ ಹೇಳಿದೆ.
ವಾಷಿಂಗ್ಟನ್: ತನ್ನ ನೆಲದಲ್ಲಿರುವ ಉಗ್ರರನ್ನು ದಮನ ಮಾಡುವ ಮೂಲಕ ಪಾಕಿಸ್ತಾನ ಭಾರತದಿಂದ ಆರ್ಥಿಕ ಪ್ರಯೋಜನ ಪಡೆಯಬಹುದು ಎಂದು ಅಮೆರಿಕ ಹೇಳಿದೆ.
ಸೆನೆಟ್ ಆರ್ಮಿಡ್ ಸರ್ವೀಸಸ್ ಕಮಿಟಿ ಸಭೆಯಲ್ಲಿ ಮಾತನಾಡಿದ ಅಮೆರಿಕ ರಕ್ಷಣಾ ಕಾರ್ಯದರ್ಶಿ ಜೇಮ್ಸ್ ಮ್ಯಾಟಿಸ್, ಉಗ್ರರ ಸ್ವರ್ಗವಾಗಿರುವ ಪಾಕಿಸ್ತಾನದ ಉಗ್ರ ನೆಲೆಗಳನ್ನು ಆ ದೇಶದ ಸರ್ಕಾರ ದಮನ ಮಾಡಿದರೆ ಖಂಡಿತಾ ಪಾಕಿಸ್ತಾನಕ್ಕೆ ಭಾರತದ ಆರ್ಥಿಕ ನೆರವು ದೊರೆಯುತ್ತದೆ ಎಂದು ಹೇಳಿದ್ದಾರೆ. ಪಾಕಿಸ್ತಾನ ಉಗ್ರರ ಕುರಿತ ತನ್ನ ನಿಲುವುಗಳನ್ನು ಕಠಿಣಗೊಳಿಸಿಕೊಂಡು ತನ್ನ ನೆಲದಲ್ಲಿರುವ ಉಗ್ರ ನೆಲೆಗಳನ್ನು ದಮನ ಮಾಡಬೇಕು. ಇದನ್ನೇ ವಿಶ್ವ ಸಮುದಾಯ ಕೂಡ ಆಶಿಸುತ್ತಿದೆ ಎಂದು ಹೇಳಿದ್ದಾರೆ.
ಇದೇ ವೇಳೆ ಭಾರತದ ಕುರಿತು ಮಾತನಾಡಿದ ಮ್ಯಾಟಿಸ್, ಪಾಕಿಸ್ತಾನದ ನೆರೆ ರಾಷ್ಟ್ರವಾಗಿರುವ ಭಾರತ, ಆರ್ಥಿಕವಾಗಿ ಮುನ್ನಡೆಯುತ್ತಿದೆ. ಹೀಗಾಗಿ ಭಾರತದೊಂದಿಗೆ ಪಾಕಿಸ್ತಾನ ಉತ್ತಮ ಸಂಬಂಧ ಹೊಂದಬೇಕು. ಇದು ಉಗ್ರರ ದಮನ ಕಾರ್ಯದಿಂದ ಮಾತ್ರ ಸಾಧ್ಯ. ಪಾಕಿಸ್ತಾನದಲ್ಲಿರು ಉಗ್ರ ನೆಲೆಗಳನ್ನು ಆಲ್ಲಿನ ಸರ್ಕಾರ ನಾಶ ಪಡಿಸಿದರೆ, ಆಗ ಆರ್ಥಿಕವಾಗಿ, ರಾಜತಾಂತ್ರಿಕವಾಗಿ ಭಾರತ ಪಾಕಿಸ್ತಾನಕ್ಕೆ ನೆರವು ನೀಡಬಹುದು ಎಂದು ಹೇಳಿದ್ದಾರೆ.