ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ (ಸಂಗ್ರಹ ಚಿತ್ರ)
ಸೋಲ್: ವಿಶ್ವಸಂಸ್ಥೆಯ ಭದ್ರತಾ ಸಮಿತಿ ತನ್ನ ಮೇಲೆ ಕಠಿಣ ನಿರ್ಬಂಧ ಹೇರಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಉತ್ತರ ಕೊರಿಯಾ, ಅಣ್ವಸ್ತ್ರ ದಾಳಿಯ ಮೂಲಕ ಜಪಾನ್ ದೇಶವನ್ನು ಮುಳುಗಿಸಿ, ಅಮೆರಿಕವನ್ನು ಬೂದಿ ಮಾಡುವ ಬೆದರಿಕೆಯನ್ನು ಹಾಕಿದೆ.
ಉತ್ತರ ಕೊರಿಯಾ ಸರ್ಕಾರದ ಮುಖವಾಣಿ ಸಂಸ್ಥೆಯಾದ ಕೊರಿಯಾ ಏಷ್ಯಾ-ಪೆಸಿಫಿಕ್ ಶಾಂತಿ ಸಮಿತಿ ಹೇಳಿಕೆ ನೀಡಿದ್ದು, ವಿಶ್ವಸಂಸ್ಥೆಯ ಭದ್ರತಾ ಸಮಿತಿಯು ದುಷ್ಟಶಕ್ತಿಗಳ ಒಂದು ಅಸ್ತ್ರವಾಗಿದೆ. ಜೊತೆಗೆ ಅಮೆರಿಕ ಅಣತಿಯಂತೆ ಕೆಲಸ ಮಾಡುವ ಲಂಚದ ಹಣದ ತಿಂದ ದೇಶಗಳ ಸಂಘಟನೆಯಾಗಿದೆ. ಹೀಗಾಗಿ ಇಂಥ ಭದ್ರತಾ ಮಂಡಳಿ ಕೈಗೊಳ್ಳುವ ನಿರ್ಧಾರವನ್ನು ಬೆಂಬಲಿಸುವ ಜಪಾನ್ ರಾಷ್ಟ್ರವನ್ನು ಅಣ್ವಸ್ತ್ರ ದಾಳಿಯ ಮೂಲಕ ಮುಳುಗಿಸುತ್ತೇವೆಂದು ಹೇಳಿದೆ.
ಭದ್ರತಾ ಸಮಿತಿಯಲ್ಲಿ ಉತ್ತರ ಕೊರಿಯಾದ ವಿರುದ್ಧ ನಿರ್ಣಯ ಮಂಡಿಸಿದ ಅಮೆರಿಕ ದೇಶವನ್ನು ಬೂದಿ ಮಾಡಿ, ಅಮೆರಿಕ ಕಗ್ಗತ್ತಲಿನಲ್ಲಿ ಕಳೆಯುವಂತೆ ಮಾಡುತ್ತೇವೆಂದು ಎಚ್ಚರಿಕೆ ನೀಡಿದೆ.
ಇತ್ತೀಚೆಗಷ್ಟೇ ಉತ್ತರ ಕೊರಿಯಾ ಪ್ರಬಲ ಹೈಡ್ರೋಜನ್ ಬಾಂಬ್ ದಾಳಿ ನಡೆಸಿತ್ತು. ಇದರ ಬೆನ್ನಲ್ಲೇ ಆ ದೇಶಕ್ಕೆ ಮಾರಕವಾಗುವಂಥಹ ಕಠಿಣ ನಿರ್ಬಂಧಗಳನ್ನು ವಿಶ್ವಸಂಸ್ಥೆ ಭದ್ರತಾ ಸಮಿತಿ ಹೇರಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics