ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 
ವಿದೇಶ

ಉತ್ತರ ಕೊರಿಯಾವನ್ನು ಸಂಪೂರ್ಣ ನಾಶ ಮಾಡುತ್ತೇವೆ: ಟ್ರಂಪ್ ಎಚ್ಚರಿಕೆ

ತನ್ನ ನೆರೆ ರಾಷ್ಟ್ರಗಳಿಗೆ ಬೆದರಿಕೆಯನ್ನು ಮುಂದುವರೆಸಿದ್ದಲ್ಲಿ, ಅಣ್ವಸ್ತ್ರಭರಿತ ಉತ್ತರ ಕೊರಿಯಾವನ್ನು ಸಂಪೂರ್ಣ ನಾಶ ಮಾಡುತ್ತೇವೆಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು...

ವಿಶ್ವಸಂಸ್ಥೆ: ತನ್ನ ನೆರೆ ರಾಷ್ಟ್ರಗಳಿಗೆ ಬೆದರಿಕೆಯನ್ನು ಮುಂದುವರೆಸಿದ್ದಲ್ಲಿ, ಅಣ್ವಸ್ತ್ರಭರಿತ ಉತ್ತರ ಕೊರಿಯಾವನ್ನು ಸಂಪೂರ್ಣ ನಾಶ ಮಾಡುತ್ತೇವೆಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತೀಕ್ಷ್ಣವಾಗಿ ಎಚ್ಚರಿಕೆ ನೀಡಿದ್ದಾರೆ. 
ವಿಶ್ವಸಂಸ್ಥೆಯ ಪ್ರಧಾನ ಅಧಿವೇಶನದಲ್ಲಿ ನೆರೆದಿದ್ದ ಎಲ್ಲಾ ರಾಷ್ಟ್ರಗಳನ್ನುದ್ದೇಶಿಸಿ ಮಾತನಾಡಿರುವ ಅವರು, ಇತ್ತೀಚೆಗೆ ಸರಣಿ ಕ್ಷಿಪಣಿ ಪ್ರಯೋಗ ನಡೆಸಿದುದಲ್ಲದೆ, ಉದ್ವಿಗ್ನಕಾರಿ ಹೇಳಿಕೆ ಮತ್ತು ನಡವಳಿಕೆ ಪ್ರದರ್ಶಿಸಿದ್ದ ಉತ್ತರ ಕೊರಿಯಾದ ನಾಯಕ ಕಿಮ್ ಜೊಂಗ್ ಉನ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ ಅಲ್ಲದೆ, ಪರೋಕ್ಷ ಯುದ್ಧ ಎಚ್ಚರಿಕೆಯನ್ನೂ ಘೋಷಿಸಿದ್ದಾರೆ. 
ಇದೇ ವೇಳೆ ಇರಾನ್ ಸೇರಿದಂತೆ ಯುದ್ಧೋನ್ಮಾದ ರಾಷ್ಟ್ರಗಳಿಗೂ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕಠಿಣ ಸಂದೇಶವನ್ನು ರವಾನಿಸಿದ್ದಾರೆ. 
ರಾಕೆಟ್ ಮನುಷ್ಯ (ಕಿಮ್ ಜೊಂಗ್ ಉನ್) ತನ್ನ ಆಡಳಿತ ಮತ್ತು ತನಗೇ ಸ್ವಯಂ ಆತ್ಮಹತ್ಯಾ ಮಿಶನ್ ನಲ್ಲಿ ನಿರತನಾಗಿದ್ದಾನೆ. ಅಮೆರಿಕದ ಬಳಿ ಸಾಕಷ್ಟು ಸಾಮರ್ಥ್ಯವಿದೆ ಮತ್ತು ತಾಳ್ಮೆಯೂ ಇದೆ. ತನ್ನನ್ನು ತಾನು ಅಥವಾ ಮಿತ್ರರನ್ನು ರಕ್ಷಿಸಿಕೊಳ್ಳುವ ಅನಿವಾರ್ಯತೆ ಎದುರಾದರೆ, ಬೇರೆ ಆಯ್ಕೆಯೇ ಇರುವುದಿಲ್ಲ. ನಾವು ಉತ್ತರ ಕೊರಿಯಾವನ್ನು ಸಂಪೂರ್ಣ ನಾಶ ಮಾಡಲಿದ್ದೇವೆ. ಆದರೆ, ಅದು ಅವಶ್ಯಕವಾಗದು ಎಂಬ ಭರವಸೆಯಿಂದಿದ್ದೇನೆ ಎಂದು ಹೇಳಿದ್ದಾರೆ. 
ಇರಾನ್ ನ ಶಸ್ತ್ರಾಸ್ತ್ರ ಪರೀಕ್ಷೆಯ ಕುರಿತಂತೆಯೂ ಟ್ರಂಪ್ ಆಕ್ರೋಶ ವ್ಯಕ್ತಪಡಿಸಿದರು. ಅಣ್ವಸ್ತ್ರ ಪ್ರಯೋಗಕ್ಕೆ ಅನುವು ಮಾಡಿಕೊಡುವುದಾದಲ್ಲಿ, ಆರು ಜಾಗತಿಕ ಶಕ್ತಿಗಳು ಇರಾನ್ ನೊಂದಿಗೆ 2015ರಲ್ಲಿ ಮಾಡಿರುವ ಪರಣಾಮು ಒಪ್ಪಂದವನ್ನು ಮುರಿಯುವ ನಿಟ್ಟಿನಲ್ಲಿ ಟ್ರಂಪ್ ಮಾತನಾಡಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿಯಲ್ಲಿ ನಾಯಕರ ಬಂಧನ, ಮೆಟ್ರೋ ಸ್ಥಗಿತ ಕುರಿತ ನ್ಯಾಯಾಂಗ ನಿಂದನೆ: ಭಾನುವಾರವೂ 'ಸುಪ್ರೀಂ' ವಿಶೇಷ ಪೀಠದಿಂದ ವಿಚಾರಣೆ!

BBK 13: ಗಾನವಿ ಹೇಳಿಕೆಗೆ ನೊಂದು ಗಗನ್ ತಾಯಿಗೆ ತಾನೇ ಕ್ಷಮೆ ಕೇಳಿ ಕಣ್ಣೀರು ಹಾಕಿದ ಸುದೀಪ್

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತ, ಆಫ್ರಿಕಾಗೆ ಸೂಕ್ತ ಪ್ರಾತಿನಿಧ್ಯ ಸಿಗಲೇಬೇಕು: ಜೈಶಂಕರ್ ಆಗ್ರಹ

ಪ್ರತಿಭಟನೆಗಳ ನಡುವೆಯೇ ಚು. ಆಯೋಗ ಮಹತ್ವದ ನಡೆ, ಹೊಸ ಉಪಾಯುಕ್ತರ ನೇಮಕ, 27 ಅಧಿಕಾರಿಗಳಿಗೆ ಹೊಸ ಹೊಣೆ!

ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ: 30 ಮನೆ-ಅಂಗಡಿಗಳಿಗೆ ಬೆಂಕಿ, ಕನಿಷ್ಠ 5 ಸಾವು!