ಮೆಕ್ಸಿಕೋ: ಕೇವಲ 6 ದಿನಗಳ ಅಂತರದಲ್ಲಿ ಅಮೆರಿಕದ ಮೆಕ್ಸಿಕೋದಲ್ಲಿ ಮತ್ತೊಂದು ಪ್ರಬಲ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 6.2ರಷ್ಟು ತೀವ್ರತೆ ದಾಖಲಾಗಿದೆ.
ಶನಿವಾರ ಮಧ್ಯರಾತ್ರಿ ಮೆಕ್ಸಿಕೋದಲ್ಲಿ ಮತ್ತೆ ಭೂಕಂಪನ ಸಂಭವಿಸಿದ್ದು, ಭೂಕಂಪನದ ಕೇಂದ್ರ ಬಿಂದು ಓಕ್ಸಕ ರಾಜ್ಯದ ಮಟಿಯಸ್ ರೊಮರೊ ನಗರದಿಂದ ಆಗ್ನೇಯಕ್ಕೆ 19.3 ಕಿ.ಮೀ ಆಳದಲ್ಲಿ ದಾಖಲಾಗಿದೆ ಎಂದು ಅಮೆರಿಕ ಭೂಕಂಪನ ಕೇಂದ್ರದ ತಜ್ಞರು ತಿಳಿಸಿದ್ದಾರೆ.
ಕಳೆದ ಮಂಗಳವಾರವಷ್ಟೇ ಸಂಭವಿಸಿದ್ದ ವಿನಾಶಕಾರಿ ಭೂಕಂಪನದಿಂದಾಗಿ ಮೆಕ್ಸಿಕೋದಲ್ಲಿ ಸುಮಾರು 400 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರು. ಅಲ್ಲದೆ ಸುಮಾರು 8 ಬಿಲಿಯನ್ ಡಾಲರ್ ಮೊತ್ತದ ಆಸ್ತಿಪಾಸ್ತಿ ನಷ್ಟವಾಗಿತ್ತು. ಅಂದು ಭೂಕಂಪನದ ತೀವ್ರತೆಗೆ ಧರೆಗುರುಳಿದ ಕಟ್ಟಡಗಳ ಅಡಿಯಲ್ಲಿ ಸಿಲುಕಿಕೊಂಡಿರುವವರ ರಕ್ಷಣಾ ಕಾರ್ಯಾಚರಣೆ ಇನ್ನೂ ನಡೆಯುತ್ತಿದೆ. ಅವಶೇಷಗಳ ತೆರವು ಕಾರ್ಯಾಚರಣೆ ಪೂರ್ಣಗೊಂಡಿಲ್ಲ. ಅದಗಾಲೇ ಮತ್ತೊಂದು ಪ್ರಬಲ ಭೂಕಂಪನ ಸಂಭವಿಸಿದ್ದು, ಮೆಕ್ಸಿಕೋ ನಿವಾಸಗಳಲ್ಲಿ ಮತ್ತೆ ಆತಂಕ ಸೃಷ್ಟಿ ಮಾಡಿದೆ.
ಇನ್ನು ಪ್ರಸ್ತುತ ಸಂಭವಿಸಿರುವ ಭೂಕಂಪನದಲ್ಲಿ ಸಾವುನೋವು ಸಂಭವಿಸಿದ ಕುರಿತು ಮಾಹಿತಿ ಲಭ್ಯವಾಗಿಲ್ಲ. ಆದರೆ ಮೆಕ್ಸಿಕೋದ ಪ್ರಮುಖ ನಗರಗಳ ಆಗಸದಲ್ಲಿ ಜ್ವಾಲಾಮುಖಿಯ ದಟ್ಟ ಹೊಗೆ ಆವರಿಸಿದೆ ಎಂದು ತಿಳಿದುಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics