ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ವಿದೇಶ

71 ಮಂದಿ ಪ್ರಯಾಣಿಕರಿದ್ದ ರಷ್ಯಾ ಪ್ಯಾಸೆಂಜರ್ ವಿಮಾನ ಪತನ, ಎಲ್ಲ ಪ್ರಯಾಣಿಕರ ಸಾವು!

ಸುಮಾರು 71 ಪ್ರಯಾಣಿಕರಿದ್ದ ಪ್ರಯಾಣಿಕ ವಿಮಾನವೊಂದು ರಷ್ಯಾ ರಾಜಧಾನಿ ಮಾಸ್ಕೋದಲ್ಲಿ ಭಾನುವಾರ ಪತನವಾಗಿದೆ ಎಂದು ತಿಳಿದುಬಂದಿದೆ.

ಸಂಗ್ರಹ ಚಿತ್ರ
Srinivasa Murthy VN
Updated On : 11 Feb 2018, 7:17 am
ಮಾಸ್ಕೋ: ಸುಮಾರು 71 ಪ್ರಯಾಣಿಕರಿದ್ದ ಪ್ರಯಾಣಿಕ ವಿಮಾನವೊಂದು ರಷ್ಯಾ ರಾಜಧಾನಿ ಮಾಸ್ಕೋದಲ್ಲಿ ಭಾನುವಾರ ಪತನವಾಗಿದ್ದು, ವಿಮಾನದಲ್ಲಿದ್ದ ಎಲ್ಲ ಪ್ರಯಾಣಿಕರೂ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಮಾಸ್ಕೋದ ಡೊಮೊಡೆಡೋವೊ ವಿಮಾನ ನಿಲ್ದಾಣದ ಹೊರ ಆವರಣದಲ್ಲಿ ಅಂಟಾನೋವ್ ಎಎನ್ 148 ವಿಮಾನ ಪತನವಾಗಿದ್ದು, ವಿಮಾನದಲ್ಲಿ 6 ಮಂದಿ ಸಿಬ್ಬಂದಿ ಸೇರಿ ಒಟ್ಟು 71 ಮಂದಿ ಪ್ರಯಾಣಿಕರು ಇದ್ದರು. ಈ ಪೈಕಿ ಎಲ್ಲ ಪ್ರಯಾಣಿಕರೂ ಸಾವನ್ನಪ್ಪಿದ್ದಾರೆ  ಎನ್ನಲಾಗಿದೆ.  ಪ್ರಾದೇಶಿಕ ವಿಮಾನಯಾನ ಸಂಸ್ಥೆ ಸರತೋವ್ ಏರ್ ಲೈನ್ಸ್ ಗೆ ಸೇರಿದ ವಿಮಾನ ಎಂದು ತಿಳಿದುಬಂದಿದ್ದು, ವಿಮಾನ ಉರಲ್ಸ್ ನ ಓರ್ಸ್ಕ್ ನಗರಕ್ಕೆ ತೆರಳುತ್ತಿತ್ತು ಎಂದು ತಿಳಿದುಬಂದಿದೆ.
ಮಾಸ್ಕೋ ಹೊರವಲಯದ ರಮೆನ್ ಸ್ಕಿ ಪ್ರಾಂತ್ಯದಲ್ಲಿ ವಿಮಾನ ಪತನವಾಗಿದೆ. ಘಟನಾ ಸ್ಥಳಕ್ಕೆ 5ಕ್ಕೂ ಹೆಚ್ಚು ಅಗ್ನಿಶಾಮಕ ವಾಹನಗಳು ದೌಡಾಯಿಸಿವೆ. 

Advertisement

Advertisement

ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement