ವಾಷ್ಟಿಂಗನ್: ಜುಲೈ 6ರಂದು ಅಮೆರಿಕದ ಕನ್ಸಾಸ್ ನಗರದ ರೆಸ್ಟೋರೆಂಟ್ ಬಳಿ ಭಾರತೀಯ ವಿದ್ಯಾರ್ಥಿ ಶರತ್ ಕೊಪ್ಪು ನನ್ನು ಗುಂಡಿಕ್ಕಿ ಕೊಲೆ ಮಾಡಿದ್ದ ಶಂಕಿತ ಹಂತಕನನ್ನು ಪೊಲೀಸರು ಎನ್‌ಕೌಂಟರ್ ಮಾಡಿದ್ದಾರೆ.
ಎನ್‌ಕೌಂಟರ್ ಶಂಕಿತ ಆರೋಪಿಯನ್ನು ಪೊಲೀಸರು ಹತ್ಯೆ ಮಾಡಿದ್ದು, ಗುಂಡಿನ ಕಾಳಗದಲ್ಲಿ ಮೂವರು ಪೊಲೀಸರಿಗೂ ಗಾಯವಾಗಿದೆ.
ಶರತ್ ಕೊಪ್ಪು ಉನ್ನತ ವ್ಯಾಸಂಗಕ್ಕಾಗಿ ಕೆಲ ತಿಂಗಳ ಹಿಂದೆ ಅಮೆರಿಕಾಕ್ಕೆ ಬಂದಿದ್ದ, ಬಿಡುವಿನ ವೇಳೆಯಲ್ಲಿ ಶರತ್ ಕನ್ಸಾಸ್ ನಗರದ ರೆಸ್ಟೋರೆಂಟ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದ. ದರೋಡೆ ಮಾಡಲು ಜುಲೈ 6ರಂದು ರೆಸ್ಟೋರೆಂಟ್ ಗೆ ಬಂದಿದ್ದ ಶಂಕಿತ ಆರೋಪಿ ಶರತ್ ನನ್ನು ಹತ್ಯೆ ಮಾಡಿ ಪರಾರಿಯಾಗಿದ್ದ.