ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ವಿದೇಶ

ಭಾರತದ ಮೇಲೆ 10 ಸರ್ಜಿಕಲ್ ದಾಳಿ ನಡೆಸುತ್ತೇವೆ: ಪಾಕಿಸ್ತಾನ ಎಚ್ಚರಿಕೆ

ಭಾರತ ನಮ್ಮ ಮೇಲೆ ಒಂದೇ ಒಂದು ಸರ್ಜಿಕಲ್ ದಾಳಿ ಮಾಡಿದರೂ ಅದಕ್ಕೆ ಪ್ರತಿಯಾಗಿ ಭಾರತದ ಮೇಲೆ 10 ಸರ್ಜಿಕಲ್ ದಾಳಿ ಮಾಡುತ್ತೇವೆಂದು ಪಾಕಿಸ್ತಾನ ಎಚ್ಚರಿಕೆ ನೀಡಿದೆ...

ಸಂಗ್ರಹ ಚಿತ್ರ
Manjula VN
Updated On : 14 Oct 2018, 8:48 am
ಇಸ್ಲಾಮಾಬಾದ್: ಭಾರತ ನಮ್ಮ ಮೇಲೆ ಒಂದೇ ಒಂದು ಸರ್ಜಿಕಲ್ ದಾಳಿ ಮಾಡಿದರೂ ಅದಕ್ಕೆ ಪ್ರತಿಯಾಗಿ ಭಾರತದ ಮೇಲೆ 10 ಸರ್ಜಿಕಲ್ ದಾಳಿ ಮಾಡುತ್ತೇವೆಂದು ಪಾಕಿಸ್ತಾನ ಎಚ್ಚರಿಕೆ ನೀಡಿದೆ. 
ಲಂಡನ್ ನಲ್ಲಿ ಸೇನಾ ಮುಖ್ಯಸ್ಥ ಜ.ಕಮರ್ ಜಾವೇದ್ ಬಾಜ್ವಾ ಅವರ ಜೊತೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸೇನಾ ವಕ್ತಾರ ಜ.ಆಸಿಫ್ ಗಫೂರ್, ಭಾರತವೇನಾದರೂ ಮತ್ತೊಮ್ಮೆ ಪಾಕಿಸ್ತಾನದ ಮೇಲೆ ಸರ್ಜಿಕಲ್ ದಾಳಿ ನಡೆಸಿದ್ದೇ ಆದರೆ, ಭಾರತದ ಮೇಲೆ ಅದೇ ರೀತಿಯ 10 ದಾಳಿ ನಡೆಸುವ ಸಾಮರ್ಥ್ಯ ಪಾಕಿಸ್ತಾನಕ್ಕಿದೆ ಎಂದು ಹೇಳಿದ್ದಾರೆ. 
ಪಾಕಿಸ್ತಾನದ ಸಾಮರ್ಥ್ಯದ ಬಗ್ಗೆ ಸಂದೇಹ ಪಡಬೇಕಿಲ್ಲ. ದುಸ್ಸಾಹಸಕ್ಕೆ ಯತ್ನಿಸಿದರೆ, ಅದಕ್ಕೆ ದಿಟ್ಟ ಉತ್ತರ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ. 

Advertisement

Advertisement

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement