ವಿದೇಶ

ಸಂಸತ್ ವಾಗ್ದಂಡನೆಗೆ ಡೊನಾಲ್ಡ್ ಟ್ರಂಪ್ ತೀವ್ರ ಆಕ್ರೋಶ

Manjula VN

ವಾಷಿಂಗ್ಟನ್: ತಮ್ಮ ವಿರುದ್ಧ ಹೌಸ್ ಆಫ್ ರೆಪ್ರೆಸೆಂಟೇಟಿವ್ ನಲ್ಲಿ ವಾಗ್ದಂಡನೆ ವಿಧಿಸುತ್ತಿದ್ದಂತೆಯೇ ಕೆಂಡಾಮಂಡಲಗೊಂಡಿರುವ ಟ್ರಂಪ್ ಅವರು ಸರಣಿ ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಡೆಮೋಕ್ರಾಟ್ ಸದಸ್ಯರು ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ನನ್ನನ್ನು ವಾಗ್ದಂಡನೆ ಪ್ರಕ್ರಿಯೆಗೆ ಗುರಿಪಡಿಸಿದ್ದಾರೆ. ಇದೊಂದು ಅಸಂವಿಧಾನಿಕ ಅಮೆರಿಕ ಶಾಸಕಾಂಗ ಇತಿಹಾಸದಲ್ಲಿಯೇ ಈ ರೀತಿ ಎಂದು ಆಗಿರಲಿಲ್ಲ. ಮುಂದಿನ ಅಧ್ಯಕ್ಷರಿಗೆ ಈ ರೀತಿ ಆಗದಿರಲಿ ಎಂದು ಪ್ರಾರ್ಥಿಸುತ್ತೇನೆಂದು ಹೇಳಿದ್ದಾರೆ. 

ವಾಗ್ದಂಡನೆಗೆ ಗುರಿಪಡಿಸುವಂತಹ ತಪ್ಪನ್ನು ನಾನು ಮಾಡಿಲ್ಲ. ಅವರಿಗೆ ಅಧ್ಯಕ್ಷ ಹುದ್ದೆ ಬೇಕಾಗಿದೆ. ಅವರಿಗೆ ತನಿಖೆ ನಡೆಸುವ ಧೈರ್ಯವಿಲ್ಲ. ಕ್ಷುಲ್ಲಕ ಕಾರಣಕ್ಕೆ ನನ್ನ ವಿರುದ್ಧ ವಾಗ್ದಂಡನೆ ವಿಧಿಸಲಾಗಿದೆ ಎಂದು ಹೇಳಿದ್ದಾರೆ. 

ಇದಕ್ಕೂ ಮುನ್ನ ಬುಧವಾರ ಮುಂಜಾನೆ ತಮ್ಮ ವಿರುದ್ಧದ ವಾಗ್ಡಂಡನೆಯನ್ನು ತಡೆಹಿಡಿಯುವಂತೆ ಕೋರಿ ಸದನದ ಸ್ಪೀಕರ್'ಗೆ ಟ್ರಂಪ್ ಪತ್ರ ಬರೆದಿದ್ದರು. 

SCROLL FOR NEXT