ವಾಷಿಂಗ್ಟನ್: ವಿಶ್ವಾದ್ಯಂತ ಲಕ್ಷಾಂತರ ಮಂದಿ ಮರಣ ಮೃದಂಗ ನಡೆಸುತ್ತಿರುವ ಮಾರಕ ಕೊರೋನಾ ವೈರಸ್ ವಿರುದ್ಧ ಹೋರಾಡುತ್ತಿರುವ ಮೈಸೂರು ಮೂಲದ ವೈದ್ಯೆಯೊಬ್ಬರಿಗೆ ಅಮೆರಿಕದಲ್ಲಿ 'ಡ್ರೈವ್ ಆಫ್ ಹಾನರ್' ಗೌರವ ಸಲ್ಲಿಕೆ ಮಾಡಲಾಗಿದೆ.
ಹೌದು.. ಅಮೆರಿಕದಲ್ಲಿ ಮಾರಕ ಕೊರೋನಾ ವೈರಸ್ ವಿರುದ್ಧ ಹಗಲಿರುಳು ಶ್ರಮಿಸುತ್ತಿರುವ ಮೈಸೂರು ಮೂಲದ ವೈದ್ಯೆ ಡಾ. ಉಮಾ ಮಧುಸೂದನ್ ಅವರಿಗೆ ಇಲ್ಲಿನ ಸ್ಥಳೀಯ ಆಡಳಿತ ಹಾಗೂ ಸಾರ್ವಜನಿಕರು 'ಡ್ರೈವ್ ಆಫ್ ಹಾನರ್' ಗೌರವ ಸಲ್ಲಿಕೆ ಮಾಡಿದ್ದಾರೆ.
ಡಾ.ಉಮಾ ಮಧುಸೂದನ್ ಅವರು ಇಲ್ಲಿನ ಸೌಥ್ ವಿಂಡ್ಸರ್ ಆಸ್ಪತ್ರೆಯಲ್ಲಿ ಕೊರೋನಾ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದು, ಇದರ ಗೌರವಾರ್ಥ ನಿನ್ನೆ ಉಮಾ ಮಧುಸೂಧನ್ ಅವರಿಗೆ 'ಡ್ರೈವ್ ಆಫ್ ಹಾನರ್' ಗೌರವ ಸಲ್ಲಿಕೆ ಮಾಡಲಾಯಿತು. ಉಮಾ ಅವರು ತಮ್ಮ ಮನೆಯ ಮುಂದೆ ನಿಂತಿದ್ದಾಗ ಆ ರಸ್ತೆಯಲ್ಲಿ ಬಂದ ವಾಹನಗಳು ಉಮಾ ಅವರಿಗೆ ಧನ್ಯವಾದ ಹೇಳಿ ಮುಂದೆ ಸಾಗುತ್ತಿದ್ದವು. ಈ ಡ್ರೈವ್ ಆಫ್ ಹಾನರ್ ನಲ್ಲಿ ಸ್ಥಳೀಯ ಆಡಳಿತ ಕೂಡ ಸಾಥ್ ನೀಡಿತ್ತು. ಹೀಗಾಗಿ ಇಲ್ಲಿನ ಅಧಿಕಾರಿಗಳು, ಸರ್ಕಾರಿ ವಾಹನಗಳು, ಅಗ್ನಿಶಾಮಕ ಸಿಬ್ಬಂದಿ, ಭದ್ರತಾ ಸಿಬ್ಬಂದಿಗಳು ಸೇರಿ ಉಮಾ ಅವರಿಗೆ ಡ್ರೈವ್ ಆಫ್ ಹಾನರ್ ನಲ್ಲಿ ಧನ್ಯವಾದ ಸಲ್ಲಿಕೆ ಮಾಡಿದರೆ.
ಡ್ರೈವ್ ಆಫ್ ಹಾನರ್ ನ ವಿಡಿಯೋ ಇಲ್ಲಿದೆ