ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ವಿದೇಶ

ಅಮೆರಿಕಾದಲ್ಲಿ ರಣಕೇಕೆ ಹಾಕುತ್ತಿರುವ ಕೊರೋನಾ: 24 ಗಂಟೆಗಳಲ್ಲಿ 2,494 ಮಂದಿ ಬಲಿ

ವಿಶ್ವದ ದೊಡ್ಡಣ್ಣ ಅಮೆರಿಕಾದಲ್ಲಿ ಕೊರೋನಾ ವೈರಸ್ ರಣಕೇಕೆ ಹಾಕುತ್ತಿದ್ದು, 24 ಗಂಟೆಗಳಲ್ಲಿ 2,494 ಮಂದಿ ಬಲಿಯಾಗಿದ್ದಾರೆ.

ಸಂಗ್ರಹ ಚಿತ್ರ
Manjula VN
Updated On : 26 Apr 2020, 9:19 am

ವಾಷಿಂಗ್ಟನ್: ವಿಶ್ವದ ದೊಡ್ಡಣ್ಣ ಅಮೆರಿಕಾದಲ್ಲಿ ಕೊರೋನಾ ವೈರಸ್ ರಣಕೇಕೆ ಹಾಕುತ್ತಿದ್ದು, 24 ಗಂಟೆಗಳಲ್ಲಿ 2,494 ಮಂದಿ ಬಲಿಯಾಗಿದ್ದಾರೆ. 

ಕೊರೋನಾ ಮಟ್ಟಹಾಕಲು ಅಮೆರಿಕಾ ಹೆಣಗಾಡುತ್ತಿದ್ದು, ಈ ವರೆಗೂ ಮಹಾಮಾರಿಯಿಂದಾಗಿ 53,511 ಮಂದಿ ಸಾವನ್ನಪ್ಪಿದ್ದಾರೆ, ಅಲ್ಲದೆ, 936,293 ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆಂದು ಜಾನ್ ಹಾಪ್ಕಿನ್ಸ್ ಯುನಿವರ್ಸಿಟಿ ಮಾಹಿತಿ ನೀಡಿದೆ. 

ಈ ನಡುವೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ನೀಡಿದ್ದ ಸೋಂಕು ನಾಶಕ ಚುಚ್ಚಿಕೊಳ್ಳುವ ಹೇಳಿಕೆ ಅಮೆರಿಕಾದಲ್ಲಿ ಭಾರೀ ಪರಿಣಾಮ ಬೀರಿದೆ. 

Advertisement

Advertisement

ಸೋಂಕು ಹರಡದಂತೆ ತಡೆಯಲು ಸಿಂಪಡಿಸಲಾಗುವ ಸೋಂಕು ನಿವಾರಕಗಳನ್ನು ರೋಗಿಯ ದೇಹಕ್ಕೆ ಚುಚ್ಚಿದರೆ ಅಥವೇ ನೇರಳಾತೀತ ಕಿರಣಗಲನ್ನು ಹಾಯಿಸಿದರೆ ಕೊರೋನಾ ವೈರಸ್ ಅನ್ನು ಕೊಲ್ಲಬಹುದು ಎಂದು ಟ್ರಂಪ್ ಹೇಳಿದ್ದರು. 

ಈ ಮಾತನ್ನೇ ನಂಬಿದ ಜನರು ನ್ಯೂಯಾರ್ಕ್ ನಲ್ಲಿ 30 ಮಂದಿ ಆ ಪ್ರಯೋಗ ಮಾಡಿದ್ದಾರೆ. ಮನೆ ಸ್ವಚ್ಛ ಮಾಡಲು ಬಳಸುವ ಸೋಂಕುನಾಶಕ ದ್ರಾವಣವನ್ನು ಚುಚ್ಚುಮದ್ದು ರೂಪದಲ್ಲಿ ದೇಹಕ್ಕೆ ತೆಗೆದುಕೊಂಡಿರುವ ಪ್ರಕರಣಗಳು ಬೆಳಕಿಗೆ ಬಂದಿವೆ. ಆದರೆ. ಯಾರೊಬ್ಬರಿಗೂ ಪ್ರಾಣಾಪಾಯವಾಗಿಲ್ಲ ಎಂದು ವರದಿಗಳು ತಿಳಿಸಿವೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement