ವಿದೇಶ

ಗೌಪ್ಯತೆ ಉಲ್ಲಂಘನೆ: ಟ್ವಿಟರ್ ಗೆ 250 ದಶಲಕ್ಷ ಡಾಲರ್ ದಂಡ

Nagaraja AB

ಮಾಸ್ಕೋ: ಜಾಹೀರಾತುಗಳನ್ನು ಒದಗಿಸಲು ವೈಯಕ್ತಿಕ ಮಾಹಿತಿಯನ್ನು ದುರುಪಯೋಗಪಡಿಸಿಕೊಂಡ ಆರೋಪಕ್ಕಾಗಿ ಅಮೆರಿಕ ಫೆಡರಲ್ ಟ್ರೇಡ್ ಕಮಿಷನ್ (ಎಫ್‌ಟಿಸಿ) ತನಿಖೆ ನಡೆಸುತ್ತಿದೆ ಎಂದು ಸಾಮಾಜಿಕ ಮಾಧ್ಯಮ ಕಂಪನಿ ಟ್ವಿಟರ್ ಸೋಮವಾರ ತಿಳಿಸಿರುವುದಾಗಿ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.

ಗೌಪ್ಯತೆ ಉಲ್ಲಂಘನೆಗಾಗಿ ಕಂಪನಿಯು 150 ದಶಲಕ್ಷದಿಂದ 250 ದಶಲಕ್ಷ ದಂಡವನ್ನು ಎದುರಿಸುತ್ತಿದೆ.

ಬಳಕೆದಾರರ ವೈಯಕ್ತಿಕ ಮಾಹಿತಿಯ ಡೇಟಾಬೇಸ್ ಅನ್ನು ಭದ್ರತಾ ಉದ್ದೇಶಗಳಿಗಾಗಿ ಜಾಹೀರಾತು  ಪಾಲುದಾರರು ಬಳಸುವ ಸಿಸ್ಟಮ್ ನೊಂದಿಗೆ ಲಿಂಕ್ ಮಾಡಿದ ನಂತರ ಕಳೆದ ಅಕ್ಟೋಬರ್ ನಲ್ಲಿ ಎಫ್ ಟಿಸಿ ತನಿಖೆ ಪ್ರಾರಂಭಿಸಿದೆ ಎಂದು ಟ್ವಿಟರ್ ಹೇಳಿದೆ.

SCROLL FOR NEXT