ವಿದೇಶ

ಇಂಡೋನೇಷ್ಯಾದಲ್ಲಿ ಪಾಕ್ ದೂತಾವಾಸ ಕಚೇರಿಯನ್ನೇ ಮಾರಾಟ ಮಾಡಿದ ಪಾಕ್ ಮಾಜಿ ಅಧಿಕಾರಿ! 

Srinivas Rao BV

ಇಸ್ಲಾಮಾಬಾದ್: ಇಂಡೋನೇಷ್ಯಾದಲ್ಲಿದ್ದ ಪಾಕ್ ದೂತವಾಸ ಕಚೇರಿಯನ್ನು ಪಾಕಿಸ್ತಾನದ ಮಾಜಿ ರಾಯಭಾರಿಯೊಬ್ಬರು ಅತ್ಯಂತ ಅಗ್ಗದ ದರಕ್ಕೆ ಮಾರಾಟ ಮಾಡಿದ್ದ 10 ವರ್ಷಗಳ ಹಿಂದಿನ ಘಟನೆ ಈಗ ಬಯಲಾಗಿದೆ. 

ಇಸ್ಲಾಮಾಬಾದ್ ನ ಮಾಧ್ಯಮ ವರದಿಗಳ ಪ್ರಕಾರ ಜಕಾರ್ತದಲ್ಲಿದ್ದ ಪಾಕಿಸ್ತಾನದ ಎಂಬಸಿಯ ಕಚೇರಿಯನ್ನು ಮಾರಾಟ ಮಾಡಿದ್ದಾನೆ. ಈ ಸಂಬಂಧ ನ್ಯಾಷನಲ್ ಅಕೌಂಟೆಬಿಲಿಟಿ ಬ್ಯೂರೋ (ಎನ್ಎಬಿ) ಹಾಗೂ ಭ್ರಷ್ಟಾಚಾರ ವಿರೋಧಿ ಸಂಸ್ಥೆ ಮೇಜರ್ ಜನರಲ್ (ನಿವೃತ್ತ) ಸಯೀದ್ ಮುಸ್ತಫಾ ವಿರುದ್ಧ 2001-02 ರಲ್ಲಿ ನಡೆಸಲಾದ ಅಪರಾಧಕ್ಕೆ  ರೆಫರೆನ್ಸ್ ನ್ನು ದಾಖಲಿಸಿದೆ.

ಜಕಾರ್ತದಲ್ಲಿದ್ದ ಪಾಕಿಸ್ತಾನಿ ದೂತವಾಸ ಕಚೇರಿಯ ಕಟ್ಟಡವನ್ನು ಅಕ್ರಮವಾಗಿ ಮಾರಾಟ ಮಾಡಿ 1.32 ಮಿಲಿಯನ್ ಡಾಲರ್ ನಷ್ಟು ಮೊತ್ತವನ್ನು ಪಾಕ್ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿದ್ದಾರೆಂದು ಆರೋಪಿಸಲಾಗಿದೆ. 

ವಿದೇಶಾಂಗ ಇಲಾಖೆಯ ಅನುಮತಿ ಇಲ್ಲದೇ ಮಾಜಿ ರಾಯಭಾರಿ ಮಾರಾಟ ಮಾಡಿದ್ದಾರೆ. ಈ ಮಾರಾಟ ಎನ್ಎ ಬಿಯ ಸೆಕ್ಷನ್ 9 (A) 6 ಅಡಿಯಲ್ಲಿ ಅವರ ಅಧಿಕಾರ ದುರುಪಯೋಗ, ಉಲ್ಲಂಘನೆಯಾಗಿದೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.

SCROLL FOR NEXT