ವಿದೇಶ

ಕ್ಯಾಲಿಫೋರ್ನಿಯಾದಲ್ಲಿ ಹೆಚ್ಚಿದ ಕೊರೋನ ಸೋಂಕು: 3 ವಾರ ಮನೆ ವಾಸ ಕಡ್ಡಾಯ

Manjula VN

ವಾಷಿಂಗ್ಟನ್: ಕ್ಯಾಲಿಫೋರ್ನಿಯಾದಲ್ಲಿ ಕೆಲ ವಲಯದಲ್ಲಿ ಕರೋನ ಸೋಂಕು ಪ್ರಕರಣಗಳು ಬಹಳ ವೇಗವಾಗಿ ಹೆಚ್ಚಾದ ಕಾರಣ ಜನತೆ ಮೂರು ವಾರ ಮನೆಯಲ್ಲಿಯೇ ಇರುವಂತೆ ಹೊಸ ಆದೇಶ ವಿಸ್ತರಿಲಾಗುತ್ತಿದೆ ಎಂದು ಕ್ಯಾಲಿಫೋರ್ನಿಯಾ ಸಾರ್ವಜನಿಕ ಆರೋಗ್ಯ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

"ಸ್ಯಾನ್ ಜೊವಾಕ್ವಿನ್ ವ್ಯಾಲಿ ಮತ್ತು ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ಮನೆ ವಾಸದ ವಾಸ್ತವ್ಯದ ಆದೇಶಗಳನ್ನು ವಿಸ್ತರಿಸಲಾಗುತ್ತಿದೆ ಎಂದು ಕ್ಯಾಲಿಫೋರ್ನಿಯಾ ಸಾರ್ವಜನಿಕ ಆರೋಗ್ಯ ಇಲಾಖೆ ಟ್ವಿಟರ್ ಮೂಲಕ ತಿಳಿಸಿದೆ.

ಡಿಮೆ ಜನರೊಂದಿಗೆ ಕಡಿಮೆ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ, ನೀವು ಮನೆಯಿಂದ ಹೊರಡುವ ಯಾವುದೇ ಸಮಯದಲ್ಲಿ ಮುಖವಾಡಗಳನ್ನು ಇಟ್ಟುಕೊಳ್ಳುವ ಮೂಲಕ ಮತ್ತು ಮನೆಯಲ್ಲಿಯೇ ಇರುವ ಮೂಲಕ ಪರಸ್ಪರರನ್ನು ರಕ್ಷಿಸಲು ಈ ಕ್ರಮ ಅನಿವಾರ್ಯವಾಗಿದೆ.

ನಿರ್ಬಂಧಿತ ಪ್ರದೇಶಗಳಲ್ಲಿ ಬಾರ್‌ಗಳು, ವೈಯಕ್ತಿಕ ಸೇವೆಗಳು, ಹೇರ್ ಸಲೂನ್‌ಗಳನ್ನು ಅಂಗಡಿಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. 

ಕಳೆದ ಏಳು ದಿನಗಳಲ್ಲಿ ಕ್ಯಾಲಿಫೋರ್ನಿಯಾದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸೋಂಕು ಪ್ರಕರಣ ವರದಿಯಾಗಿರುವುದು ಬಹಳ ಆತಂಕ ತಂದಿದೆ ಎಂದೂ ಹೇಳಲಾಗಿದೆ. 

SCROLL FOR NEXT