ಸಾಂದರ್ಭಿಕ ಚಿತ್ರ 
ವಿದೇಶ

ವ್ಯಕ್ತಿಗೆ ಕೊರೋನಾ ವೈರಸ್ ಸೋಂಕು 2 ಬಾರಿ ಬರುತ್ತದೆಯೇ? ಈ ಬಗ್ಗೆ ವಿಜ್ಞಾನಿಗಳು ಹೇಳಿದ್ದೇನು?

ಓರ್ವ ವ್ಯಕ್ತಿಗೆ ಕೊರೋನಾ ಸೋಂಕು ಎಷ್ಟು ಬಾರಿ ಬರಬಹುದು... ಒಂದು ಬಾರಿ ಅಥವಾ ಎರಡು ಬಾರಿ.. ಈ ಬಗ್ಗೆ ವಿಜ್ಞಾನಿಗಳು ಸಾಕಷ್ಟು ಅಂಶಗಳ ಕುರಿತು ಬೆಳಕು ಚೆಲ್ಲಿದ್ದಾರೆ.

ವಾಷಿಂಗ್ಟನ್: ಓರ್ವ ವ್ಯಕ್ತಿಗೆ ಕೊರೋನಾ ಸೋಂಕು ಎಷ್ಟು ಬಾರಿ ಬರಬಹುದು... ಒಂದು ಬಾರಿ ಅಥವಾ ಎರಡು ಬಾರಿ.. ಈ ಬಗ್ಗೆ ವಿಜ್ಞಾನಿಗಳು ಸಾಕಷ್ಟು ಅಂಶಗಳ ಕುರಿತು ಬೆಳಕು ಚೆಲ್ಲಿದ್ದಾರೆ.

ಆರೋಗ್ಯ ತಜ್ಞರು ಕೊರೋನಾ ವೈರಸ್ ಸೋಂಕಿಗೆ ಸಂಬಂಧಿಸಿದಂತೆ ತಮ್ಮ ಅಧ್ಯಯನ ಮುಂದುವರೆಸಿದ್ದು, ಓರ್ವ ವ್ಯಕ್ತಿಗೆ ಕೊರೋನಾ ವೈರಸ್ ಸೋಂಕು ಎಷ್ಟು ಬಾರಿ ಬರಬಹುದು ಎಂಬ ಪ್ರಶ್ನೆಗೆ ಉತ್ತರಿಸುವ ಪ್ರಯತ್ನ ಮಾಡಿದ್ದಾರೆ. ವಿಜ್ಞಾನಿಗಳ ಪ್ರಕಾರ ಮತ್ತು ಹಾಲಿ ಪರಿಸ್ಥಿತಿಗಳನ್ನು ಅವಲೋಕಿಸಿದರೆ ಓರ್ವ ವ್ಯಕ್ತಿ 2 ಬಾರಿ ಕೊರೋನಾ ಸೋಂಕಿಗೆ ತುತ್ತಾಗಬಹುದು ಎಂದು ಶಂಕಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಸೋಂಕಿನಿಂದ ಗುಣಮುಖರಾದ ಸಾಕಷ್ಟು ಮಂದಿ ಮತ್ತೆ ಸೋಂಕಿಗೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಹೀಗಾಗಿ ಕೊರೋನಾ ಸೋಂಕು ಒಮ್ಮೆ ಮಾತ್ರ ಅಲ್ಲ ಬಹುಶಃ ಎರಡು ಬಾರಿ ಒಕ್ಕರಿಸಬಹುದು ಎಂದು ವಿಜ್ಞಾನಿಗಳು ಹೇಳಿದ್ದಾರೆ. ಅಂತೆಯೇ ಒಮ್ಮೆ ಸೋಂಕಿಗೆ ತುತ್ತಾಗಿ ಗುಣಮುಖರಾಗಿದ್ದ ವ್ಯಕ್ತಿಯ ರೋಗ ನಿರೋಧಕ ಶಕ್ತಿ ಮತ್ತು ಆತನ ಆ್ಯಂಟಿಬಾಡಿ ಕಣಗಳು ಎಷ್ಟು ಪರಿಣಾಮಕಾರಿ ಮತ್ತು ಎಷ್ಟು ದೀರ್ಘಾವಧಿಯದ್ದಾಗಿರುತ್ತದೆ ಎಂಬುದು ಈ ವರೆಗೂ ನಿರ್ಧಿಷ್ಠವಾಗಿ ತಿಳಿದುಬಂದಿಲ್ಲ ಎಂದು ಹೇಳಿದ್ದಾರೆ.

ಒಮ್ಮೆ ಸೋಂಕಿಗೆ ತುತ್ತಾದ ವ್ಯಕ್ತಿ 2ನೇ ಬಾರಿ ಸೋಂಕಿಗೆ ತುತ್ತಾದ ಸಾಕಷ್ಟು ನಿದರ್ಶನಗಳಿವೆ. ಅಂತೆಯೇ ಸೋಂಕಿಗೆ ತುತ್ತಾದ ವ್ಯಕ್ತಿಯ ಸರಿಯಾದ ಪರೀಕ್ಷೆ ನಡೆಸದೇ ಸೋಂಕು ಸಂಪೂರ್ಣವಾಗಿ ಗುಣವಾಗಿದೆ ಎಂಬುದನ್ನು ಪರೀಕ್ಷಿಸದೇ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಮಾಡಲಾಗುತ್ತಿದೆ. ಇದರಿಂದ ಮತ್ತೆ ಆ ವ್ಯಕ್ತಿಯಲ್ಲಿ ಸೋಂಕಿನ ಲಕ್ಷಣಗಳು ಗೋಚರಿಸುತ್ತಿವೆ ಎಂಬ ಮತ್ತೊಂದು ವಾದ ಕೂಡ ಕೇಳಿಬರುತ್ತಿದೆ.  ಮತ್ತೊಂದು ಕಡೆ ಸೋಂಕಿನಿಂದ ಗುಣಮುಖವಾದ ವ್ಯಕ್ತಿ ಮತ್ತೆ ಸೋಂಕಿತ ವ್ಯಕ್ತಿಯ ಸಂಪರ್ಕಕ್ಕೆ ಬಂದಿರಬಹುದು ಅಥವಾ ಸೋಂಕಿತ ವ್ಯಕ್ತಿ ಮುಟ್ಟಿದ್ದ ವಸ್ತುಗಳ ಸಂಪರ್ಕಕ್ಕೆ ಬಂದು ಸೋಂಕಿಗೆ ತುತ್ತಾಗಿರಬಹುದು ಎಂಬ ವಾದ ಕೂಡ ಇದೆ. ಈ ಬಗ್ಗೆ ಕೂಲಂಕುಷ ತನಿಖೆಯಾಗಬೇಕು ಎಂದು ಹೇಳಿದ್ದಾರೆ.

ಒಮ್ಮೆ ಕೊರೋನಾ ಸೋಂಕಿಗೆ ತುತ್ತಾಗುವ ವ್ಯಕ್ತಿ ವರ್ಷದಲ್ಲಿ ಮೂರು ಬಾರಿ ಅನಾರೋಗ್ಯಕ್ಕೀಡಾಗುವ ಸಾಧ್ಯತೆ ಕುರಿತು ಆರೋಗ್ಯತಜ್ಞರು ಶಂಕಿಸಿದ್ದಾರೆ. ಆದರೆ ಈ ಬಗ್ಗೆ ಈಗಲೇ ಸ್ಪಷ್ಟವಾಗಿ ಹೇಳಲು ಸಾಧ್ಯವಿಲ್ಲ ಎಂದು ಬೋಸ್ಚನ್ ಕಾಲೇಜು ಪ್ರಾಧ್ಯಾಪಕರಾದ ಡಾ. ಫಿಲಿಪ್ ಲ್ಯಾಂಡ್ಗಿಗನ್ ಹೇಳಿದ್ದಾರೆ.

ಈ ಹಿಂದೆ ಒಂದು ಪತ್ರಿಕೆಯಲ್ಲಿ ವರದಿಯಾದಂತೆ ಕೊರೇನಾ ವೈರಸ್ ಸೋಂಕಿನಿಂದ ಚೇತರಿಸಿಕೊಂಡ ವ್ಯಕ್ತಿಯ ದೇಹದಲ್ಲಿ ಸಿದ್ಧವಾದ ಆ್ಯಂಟಿ ಬಾಡಿ ಕಣಗಳು ಕೆಲವೇ ತಿಂಗಳುಗಳಲ್ಲಿ ಮಾಯವಾಗುತ್ತವೆ ಎಂದು ಬರೆಯಲಾಗಿತ್ತು. ಆ ಬಳಿಕ ಸೋಂಕಿಗೆ ತುತ್ತಾಗಿ ಗುಣಮುಖರಾಗಿದ್ದ ವ್ಯಕ್ತಿ ಮತ್ತೆ ಸಣ್ಣ ಪ್ರಮಾಣದ ಅನಾರೋಗ್ಯಕ್ಕೆ ತುತ್ತಾಗುತ್ತಾರೆ. ಆ್ಯಂಟಿ ಬಾಡಿ ಕಣಗಳು ಕೇವಲ ವೈರಸ್ ವಿರುದ್ಧ ಮಾತ್ರವಲ್ಲ ನಮ್ಮ ಅಂಗಾಂಗ ರೋಗನಿರೋಧಕ ಕಣಗಳ ಸಂಖ್ಯೆಯನ್ನು ಗಣನೀಯವಾಗಿ ಹೆಚ್ಚಳ ಮಾಡುತ್ತವೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನ್ಯಾಯಾಧೀಶರ ಮೇಲಿನ ದಾಳಿ ಖಂಡಿಸಿದ ಮಮತಾ; ರಾಷ್ಟ್ರಪತಿ ಆಳ್ವಿಕೆಗಾಗಿ ಬಿಜೆಪಿ 'ಸಂಚು' ಎಂದ ದೀದಿ

ಆಮ್ ಆದ್ಮಿ ದನಿಯಾಗಿದ್ದ ರಾಘವ್ ಚಡ್ಡಾಗೆ AAP ಶಾಕ್: ರಾಜ್ಯಸಭೆ ಉಪನಾಯಕ ಸ್ಥಾನದಿಂದ ವಜಾ, ಮಾತನಾಡಲು ನಿರ್ಬಂಧ!

ಭಾರತದ ಉತ್ಪಾದನಾ ವಲಯದ ಬೆಳವಣಿಗೆ ಭಾರೀ ಕುಸಿತ; 4 ವರ್ಷಗಳಲ್ಲೇ ಕನಿಷ್ಠ: ಇಲ್ಲಿದೆ ಅಸಲಿ ಕಾರಣ

ಗಡಿಯಲ್ಲಿ ಹದ್ದು ಮೀರಿದ್ರೆ ಹುಷಾರ್: ಇರಾನ್ ವಾರ್ ನಡುವೆ ಪಾಕಿಸ್ತಾನಕ್ಕೆ ರಾಜನಾಥ್ ಸಿಂಗ್ ವಾರ್ನಿಂಗ್!

ಅಮೆರಿಕಕ್ಕೆ 'ಅವಮಾನ'ವಾಗುವವರೆಗೂ ಯುದ್ಧ ಮುಂದುವರಿಯುತ್ತದೆ: ಟ್ರಂಪ್ ಹೇಳಿಕೆ ತಳ್ಳಿಹಾಕಿದ ಇರಾನ್ ಸೇನೆ!

SCROLL FOR NEXT