ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ವಿದೇಶ

ಅಮೆರಿಕಾದಲ್ಲಿ ಐವರು ಸಂಸದರಿಗೂ ಅಮರಿಕೊಂಡ ಕೊರೋನ ಸೋಂಕು

ಅಮೆರಿಕದಲ್ಲಿ ಕೊರೋನಾ ಸೋಂಕು ಬಹಳ ವೇಗವಾಗಿ ಹಬ್ಬುತ್ತಿದ್ದು ಈವರೆಗೆ ಐವರು ಸಂಸದರು ಮಾರಕ ಜಾಢ್ಯಕ್ಕೆ ಸಿಲುಕಿಕೊಂಡಿದ್ದಾರೆ.

ಮೈಕ್ ಕೆಲ್ಲಿ
Manjula VN
Updated On : 28 Mar 2020, 10:54 am

ವಾಷಿಂಗ್ಟನ್: ಅಮೆರಿಕದಲ್ಲಿ ಕೊರೋನಾ ಸೋಂಕು ಬಹಳ ವೇಗವಾಗಿ ಹಬ್ಬುತ್ತಿದ್ದು ಈವರೆಗೆ ಐವರು ಸಂಸದರು ಮಾರಕ ಜಾಢ್ಯಕ್ಕೆ ಸಿಲುಕಿಕೊಂಡಿದ್ದಾರೆ.

ಕಾಂಗ್ರೆಸ್ಸಿಗ ಮೈಕ್ ಕೆಲ್ಲಿ ಅವರಿಗೂ ಕೊರೋನಸೋಂಕು ಇರುವುದು ವೈದ್ಯಕೀಯ ಪರೀಕ್ಷೆಯಿಂದ ದೃಡಪಟ್ಟಿದೆ. ಇದೀಗ ಮೈಕ್ ಕೆಲ್ಲಿಯವರು ಕೊರೋನ ಸೋಂಕಿಗೆ ತುತ್ತಾದ ಐದನೇ ಸಂಸದರಾಗಿದ್ದಾರೆ ಎಂದು ಕಾಂಗ್ರೆಸ್ ಕಚೇರಿ ಪತ್ರಿಕಾ ಪ್ರಕಟಣೆ ತಿಳಿಸಿದೆ.

ಅಮೆರಿಕದಲ್ಲಿ ಕರೋನ ಹಾವಳಿ ಚೀನಾಕ್ಕಿಂತಲು ಹೆಚ್ಚಾಗಿದೆ ಈಗ 100,000 ಕ್ಕೂ ಹೆಚ್ಚು ( ಲಕ್ಷಕ್ಕೂ ಮಿಗಿಲಾದ) ಕೋವಿಡ್ -19 ಪ್ರಕರಣಗಳು ದೃ ಡಪಟ್ಟಿವೆ ಎಂದು ತಿಳಿದುಬಂದಿದೆ. ಜಗತ್ತಿನಾದ್ಯಂತ ಹೆಚ್ಚು ದೃಢಪಡಿಸಿದ ಸೋಂಕಿತ ಪ್ರಕರಣಗಳ ಸಂಖ್ಯೆಯಲ್ಲಿ ಅಮೆರಿಕವೇ ಎಲ್ಲರಿಗಿಂತ ಮುಂದೆ ಇದೆ ಎಂಬ ಅಚ್ಚರಿ ಮಾಹಿತಿ ಇದೀಗ ಬಹಿರಂಗವಾಗಿದೆ. ಇದರಂತೆ ಅಮೆರಿಕಾ ಇಟಲಿ ಮತ್ತು ಚೀನಾವನ್ನು ಹಿಂದಿಕ್ಕಿ ಹೆಚ್ಚಿನ ಸಂಖ್ಯೆಯ ಪ್ರಕರಣಗಳನ್ನು ಹೊಂದಿರುವ ದೇಶವಾಗಿ ಪರಿವರ್ತನೆಗೊಂಡಿದೆ ಎಂದು ಹೇಳಲಾಗುತ್ತಿದೆ. 

Advertisement

Advertisement

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement