ಕಾಬೂಲ್: ಯುದ್ಧ ಪೀಡಿತ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರು ಕೂಡಲೇ ಹಿಂಸಾಚಾರ ನಿಲ್ಲಿಸದಿದ್ದರೆ ಪ್ರತೀಕಾರ ಕೈಗೊಳ್ಳುವುದಾಗಿ ಅಮೆರಿಕ ನೇರ ಎಚ್ಚರಿಕೆ ನೀಡಿದೆ.
ಅಫ್ಘಾನಿಸ್ತಾನದ ಸಂಘರ್ಷಕ್ಕೆ ಕೊನೆಗಾಣಿಸಲು ರಾಜಕೀಯ ವಿಧಾನಗಳ ಮೂಲಕ ಬಗೆಹರಿಸಲು ರಾಜಕೀಯ ಒಪ್ಪಂದಕ್ಕೆ ಕರೆ ನೀಡಿತ್ತು ತಾಲಿಬಾನ್ ಉಗ್ರರು ಹಿಂಸಾಚಾರ ನಿಲ್ಲಿಸಬೇಕು ಇಲ್ಲವಾದಲ್ಲಿ ಅಮೆರಿಕಕ್ಕೆ ಪ್ರತೀಕಾರದ ಕ್ರಮ ಅನಿವಾರ್ಯ ಎಂದು ಅಫ್ಘಾನಿಸ್ತಾನದ ಅಮೆರಿಕ ಪಡೆಗಳ ವಕ್ತಾರ ಕರ್ನಲ್ ಸೋನಿ ಲೆಗೆಟ್ ಹೇಳಿದ್ದಾರೆ.
ಟ್ವಿಟ್ಟರ್ ಮೂಲಕ ತಾಲಿಬಾನ್ ವಕ್ತಾರ ಜಬಿಹುಲ್ಲಾ ಮುಜಾಹಿದ್ ಅವರಿಗೆ ಎರಡು ಪುಟಗಳ ಪತ್ರವನ್ನು ಕಳುಹಿಸಿದ್ದಾರೆ. ಎಲ್ಲಾ ಪಕ್ಷಗಳು ಸಂಘರ್ಷ ಕೊನೆಗಾಣಿಸಲು "ರಾಜಕೀಯ ಪರಿಹಾರದ ಹಾದಿಯಲ್ಲಿ ಸಾಗಬೇಕು, ಆಫ್ಘನ್ನರ ಭವಿಷ್ಯದ ಬಗ್ಗೆ ಚರ್ಚಿಸಬೇಕು ಹಿಂಸಾಚಾರ ಕೊನೆಗಾಣಿಸುವುದು ಬಹಳ ಅವಶ್ಯಕತೆಯಾಗಿದೆ ಎಂದೂ ಹೇಳಿದ್ದಾರೆ.