ವಿದೇಶ

ದುಬೈನಲ್ಲಿ ಇನ್ನುಮುಂದೆ ವೀಕೆಂಡ್ ಎರಡು ದಿನವಲ್ಲ. ಎರಡೂವರೆ ದಿನ: ಕಡೆಗೂ ವೆಸ್ಟರ್ನ್ ಪದ್ಧತಿಗೆ ಶರಣು

Harshavardhan M

ದುಬೈ: ಯುಎಇ ತನ್ನ ವಾರಾಂತ್ಯವನ್ನು ಎರಡು ದಿನಗಳಿಗೆ ಬದಲಾಗಿ ಎರಡೂವರೆ ದಿನಗಳಿಗೆ ಹೆಚ್ಚಿಸಿಕೊಂಡಿದೆ. ವಾರಾಂತ್ಯಕ್ಕೆ ಸಂಬಂಧಿಸಿದಂತೆ ಅಲ್ಲಿ ಹೊಸ ನಿಯಮಗಳು ಜಾರಿಗೆ ಬಂದಿದೆ.

ಯುಎಇ ನಲ್ಲಿ ಇದುವರೆಗೂ ಶುಕ್ರವಾರ ಮತ್ತು ಶನಿವಾರ ವಾರಾಂತ್ಯದ ದಿನಗಳಾಗಿದ್ದವು. ಶನಿವಾರ ಮತ್ತು ಭಾನುವಾರ ವೀಕೆಂಡ್ ಆಚರಿಸುವುದು ಪಾಶ್ಚಿಮಾತ್ಯ ಪದ್ಧತಿ ಎಂದು ಅದರಿಂದ ಇಷ್ಟು ದಿನ ದೂರವಿತ್ತು.

ಈಗ ವೇಗವಾಗಿ ಮುನ್ನುಗ್ಗುತ್ತಿರುವ ಆಧುನಿಕ ಜಗತ್ತಿಗೆ ತಕ್ಕಂತೆ ತಾನೂ ಬದಲಾಗಲೂ ಪಾಶ್ಚಿಮಾತ್ಯ ಪದ್ಧತಿಯನ್ನು ಅಳವಡಿಸಿಕೊಂಡಿದೆ. ಇನ್ನುಮುಂದೆ ಶನಿವಾರ ಮತ್ತು ಭಾನುವಾರ ಅಲ್ಲಿ ವೀಕೆಂಡ್ ಆಗಲಿದೆ.

ಅಲ್ಲದೆ ಇನ್ನೊಂದು ವಿಚಾರ ಎಂದರೆ ಶುಕ್ರವಾರ ಮುಸ್ಲಿಮರಿಗೆ ನಮಾಜ್ ಇರುವುದರಿಂದ ಶುಕ್ರವಾರ ಅರ್ಧ ದಿನವನ್ನೂ ವೀಕೆಂಡ್ ಪಾಲಿಗೆ ಸೇರಿಸಲಾಗಿದೆ. ಅದರಂತೆ ಇನ್ನುಮುಂದೆ ಯುಎಇ ನಲ್ಲಿ ವೀಕೆಂಡ್ ಎಂದರೆ ಎರಡೂವರೆ ದಿನಗಳು.

SCROLL FOR NEXT