ವಿದೇಶ

ನಾಸ್ತಿಕನಿಗೆ 15 ವರ್ಷ ಜೈಲು ಶಿಕ್ಷೆ ವಿಧಿಸಿದ ಸೌದಿ ಅರೇಬಿಯ: ಮಾನವ ಹಕ್ಕುಗಳ ಸಂಘಟನೆ ಆಕ್ರೋಶ

Harshavardhan M

ದುಬೈ: ಯೆಮೆನ್ ಮೂಲದ ವ್ಯಕ್ತಿಯನ್ನು ನಾಸ್ತಿಕ ಎನ್ನುವ ಕಾರಣಕ್ಕೆ ಸೌದಿ ಅರೇಬಿಯ ನ್ಯಾಯಾಲಯ 15 ವರ್ಷ ಜೈಲು ಶಿಕ್ಷೆ ವಿಧಿಸಿದೆ ಎಂದು ಮಾನವ ಹಕ್ಕುಗಳ ಸಂಘಟನೆ ಆರೋಪಿಸಿದೆ. 

ಆಧುನಿಕತೆಗೆ ತೆರೆದುಕೊಳ್ಳುತ್ತಿರುವ ಸೌದಿ ಅರೇಬಿಯ ಈ ಬಗೆಯ ಘಟನೆಗಳಿಂದ ಅಂತಾರಾಷ್ಟ್ರೀಯ ಸಮುದಾಯದ ಎದುರು ಅಪಮಾನಕ್ಕೀಡಾಗುತ್ತಿದೆ ಎಂದು ಸಂಘಟನೆ ಅಭಿಪ್ರಾಯಪಟ್ಟಿದೆ. 

ಅಲಿ ಅಬು ಲುಹುಮ್ ಎಂಬ 38 ವರ್ಷ ಪ್ರಾಯದ ಯೆಮೆನ್ ಮೂಲದ ವ್ಯಕ್ತಿ ಶಿಕ್ಷೆಗೆ ಗುರಿಯಾದಾತ. ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ದೇವರಿಗೆ ಅವಹೇಳನಕಾರಿಯಾದ ಕಮೆಂಟುಗಳನ್ನು ಬರೆದ ಆರೋಪ ಆತನ ಮೇಲೆ ಹೊರಿಸಲಾಗಿತ್ತು.

ಆರೋಪಿ ಬರೆದಿರುವ ಕಾಮೆಂಟುಗಳು ನಾಸ್ತಿಕವಾದವನ್ನು ಹಾಗೂ ಇಸ್ಲಾಂ ಧರ್ಮದ ಮೇಲೆ ಅಪನಂಬುಗೆಯನ್ನು ಹರಡುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತ್ತು.

SCROLL FOR NEXT