ಸಾಂದರ್ಭಿಕ ಚಿತ್ರ 
ವಿದೇಶ

ಪಾಕಿಸ್ತಾನ: ವಿಡಿಯೋ ಮಾಡುವಾಗ ಆಕಸ್ಮಿಕವಾಗಿ ಗುಂಡು ಸಿಡಿದು 'ಟಿಕ್ ಟಾಕರ್' ಬಲಿ

ವಿಡಿಯೋ ಶೂಟಿಂಗ್ ಮಾಡುವಾಗ ಪಿಸ್ತೂಲ್ ನಿಂದ ಆಕಸ್ಮಿಕವಾಗಿ ಹಾರಿದ ಗುಂಡಿಗೆ 19 ವರ್ಷದ ಟಿಕ್ ಟಾಕರ್ ಬಲಿಯಾಗಿರುವ ಘಟನೆ ಕಬಾಲ್ ನ ತೆಹ್ಸಿಲ್ ನಲ್ಲಿ ನಡೆದಿದೆ.

ಸ್ವಾತ್: ವಿಡಿಯೋ ಶೂಟಿಂಗ್ ಮಾಡುವಾಗ ಪಿಸ್ತೂಲ್ ನಿಂದ ಆಕಸ್ಮಿಕವಾಗಿ ಹಾರಿದ ಗುಂಡಿಗೆ 19 ವರ್ಷದ ಟಿಕ್ ಟಾಕರ್ ಬಲಿಯಾಗಿರುವ ಘಟನೆ ಕಬಾಲ್ ನ ತೆಹ್ಸಿಲ್ ನಲ್ಲಿ ನಡೆದಿದೆ.

ಟಿಕ್ ಟಾಕ್ ವಿಡಿಯೋ ಮಾಡುವಾಗ ಈ ದುರಂತ ಸಂಭವಿಸಿದೆ ಎಂದು ಪೊಲೀಸರು ದೃಢಪಡಿಸಿದ್ದಾರೆ ಎಂದು ಡಾನ್ ಪತ್ರಿಕೆ  ವರದಿ ಮಾಡಿದೆ.

ಟಿಕ್ ಟಾಕ್ ನಲ್ಲಿ ತನ್ನ ಹಿಂಬಾಲಕರಿಗೆ ಆತ್ಮಹತ್ಯೆ ಮಾಡಿಕೊಳ್ಳುವ ವಿಡಿಯೋ ಮಾಡುವಾಗ ಪಿಸ್ತೂಲ್ ನಿಂದ ಹಾರಿದ ಗುಂಡಿಗೆ ಹಮೀದುಲ್ಲಾ ಬಲಿಯಾಗಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.

ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮಾಹಿತಿ ಸಂಗ್ರಹಿಸಿ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಕಳುಹಿಸಿದ್ದಾರೆ.

ಕಬಲ್ ತಹಸಿಲ್‌ನಲ್ಲಿ ಹಮೀದುಲ್ಲಾ  ಪ್ರಸಿದ್ಧ ಟಿಕ್‌ಟಾಕ್ ತಾರೆಯಾಗಿದ್ದರು. ಆತ್ಮಹತ್ಯೆ ವಿಡಿಯೋವನ್ನು ಚಿತ್ರೀಕರಿಸಲು ಯೋಜಿಸಿ ಪಿಸ್ತೂಲ್ ವ್ಯವಸ್ಥೆ ಮಾಡಿದರು. ಪಿಸ್ತೂಲ್‌ನಲ್ಲಿ ಇರುವ ಗುಂಡುಗಳ ಬಗ್ಗೆ ತಿಳಿದಿಲ್ಲದ ಅವರು ತಮ್ಮ ಸ್ನೇಹಿತರೊಂದಿಗೆ ಹತ್ತಿರದ ಪರ್ವತಕ್ಕೆ ಹೋದರು ಅವರು ವೀಡಿಯೊವನ್ನು ಚಿತ್ರೀಕರಿಸಲು ಪ್ರಾರಂಭಿಸಿದರು. ಆದರೆ ಇದ್ದಕ್ಕಿದ್ದಂತೆ ಹಾರಿದ ಗುಂಡಿಗೆ ಬಲಿಯಾಗಿದ್ದಾರೆ ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಬೆಂಗಳೂರು: ಮಾಜಿ ಪ್ರೇಯಸಿ ಕರೆದಳೆಂದು ಮನೆಗೆ ಹೋದ ಪ್ರಿಯಕರ ದುರಂತ ಸಾವು: ಅಷ್ಟಕ್ಕೂ ಆಗಿದ್ದೇನು?

IPL 2026 Eliminator: ವಿಶ್ವದಾಖಲೆಯ ಹೊಸ್ತಿಲಲ್ಲಿ ಎಡವಿದ Vaibhav Suryavanshi, ಮತ್ತೊಂದು ರೆಕಾರ್ಡ್ ಜಸ್ಟ್ ಮಿಸ್!

ಸಿದ್ದರಾಮಯ್ಯ ರಾಜೀನಾಮೆ ಸುದ್ದಿ: ಕಣ್ಣೀರಿಟ್ಟ CM ಕಚೇರಿ ಸಿಬ್ಬಂದಿ; ಬೆಂಬಲಿಗರಿಂದ ಪ್ರತಿಭಟನೆ

IPL 2026 Eliminator: SRH ವಿರುದ್ಧ ವೈಭವ್ ಸೂರ್ಯವಂಶಿ ಸಿಕ್ಸರ್ ಸುರಿಮಳೆ, 14 ವರ್ಷ ಹಳೆಯ Chris gayle ದಾಖಲೆ ಧೂಳಿಪಟ

SCROLL FOR NEXT