ವಿದೇಶ

ಟ್ರಂಪ್ ಬೆಂಬಲಿಗರ ಕುಖ್ಯಾತ ಕ್ಯಾಪಿಟಲ್ ದಾಳಿಗೆ ಫೇಸ್ ಬುಕ್ ಕುಮ್ಮಕ್ಕು ಕಾರಣ: ಮಾಜಿ ಮ್ಯಾನೇಜರ್ ಆರೋಪ

Harshavardhan M

ವಾಷಿಂಗ್ಟನ್: ಕಳೆದ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಸೋತ ನಂತರ ಶ್ವೇತಭವನದ ಮೇಲೆ ಟ್ರಂಪ್ ಬೆಂಬಲಿಗರು ದಾಳಿ ನಡೆಸಿದ್ದನ್ನು ಜಗತ್ತು ಇನ್ನೂ ಮರೆತಿಲ್ಲ.

ಅಮೆರಿಕವನ್ನು ತಲೆತಗ್ಗಿಸುವಂತೆ ಮಾಡಿದ ಈ ದಾಳಿಗೆ ಫೇಸ್ ಬುಕ್ ಕುಮ್ಮಕ್ಕು ನೀಡಿತ್ತು ಎನ್ನುವ ಸಂಗತಿಯನ್ನು ಮಾಜಿ ಫೇಸ್ ಬುಕ್ ಮ್ಯಾನೇಜರ್ ಬಹಿರಂಗಪಡಿಸಿದ್ದಾರೆ. 

ಫ್ರಾನ್ಸಸ್ ಹೋಗನ್ ಅವರು ಜನವರಿ 6ರಂದು ನಡೆದ ಕುಖ್ಯಾತ ಕ್ಯಾಪಿಟಲ್ ದಾಳಿ ಕುರಿತು ಸಂದರ್ಶನದಲ್ಲಿ ಬಾಯಿಬಿಟ್ಟಿದ್ದಾರೆ. ಅದೊಂದು ಘಟನೆಯ ಬಗ್ಗೆ ಮಾತ್ರವಲ್ಲದೆ ಸಾಮಾಜಿಕ ಜಾಲತಾಣ ದೈತ್ಯ ಫೇಸ್ ಬುಕ್  ಹೇಗೆ ಪ್ರಪಂಚದ ವಿನಾಶಕಾರಿ ಶಕ್ತಿಯಾಗಿ ಬೆಳೆಯುತ್ತಿದೆ ಎನ್ನುವುದನ್ನು ಹೊರಗೆಡವಿದ್ದಾರೆ. 

ಜಗತ್ತಿಗೆ ಒಳ್ಳೆಯದು ಮಾಡುವುದಕ್ಕಿಂತ ಹೆಚ್ಚಾಗಿ ದುಡ್ಡು ಮಾಡುವ ಬಗ್ಗೆ ಫೇಸ್ಬುಕ್ ಹೆಚ್ಚು ತಲೆ ಕೆಡಿಸಿಕೊಳ್ಳುತ್ತದೆ. ಇದರ ಫಲವಾಗಿಯೇ 2018ರಲ್ಲಿ 56 ಬಿಲಿಯನ್ ಡಾಲರ್ ನಷ್ಟಿದ್ದ ಆದಾಯ 119 ಬಿಲಿಯನ್ ಡಾಲರ್ ಗೆ ಏರಿಕೆಯಾಗಿರುವುದು. 

ಇಂದು ಜನರ ಅಭಿಪ್ರಾಯಗಳನ್ನು ಬದಲಿಸಬಲ್ಲ ಶಕ್ತಿಯನ್ನು ಫೇಸ್ ಬುಕ್ ಹೊಂದಿದೆ. ಬಳಕೆದಾರರು ಮತ್ತೆ ಮತ್ತೆ ಫೇಸ್ ಬುಕ್ ಗೆ ಹಿಂದಿರುಗುವಂತೆ ಮಾಡುವುದು ಅದರ ಧ್ಯೇಯ. ಅದಕ್ಕಾಗಿ ಯಾವುದೇ ಹಂತಕ್ಕೂ ಅದು ಇಳಿಯಬಲ್ಲುದು. ಎರಡು ಪಂಗಡ ಸಮುದಾಯಗಳ ನಡುವೆ ಜಗಳವನ್ನೂ ತಂದಿಕ್ಕಬಲ್ಲುದು. ದ್ವೇಷ ಭಾವನೆ ಹರಡಬಲ್ಲುದು ಎಂದು ಹೋಗನ್ ಹೇಳಿದ್ದಾರೆ. 
 

SCROLL FOR NEXT