ಇಮ್ರಾನ್ ಖಾನ್ 
ವಿದೇಶ

ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಸೆಕ್ಸ್ ಆಡಿಯೋ ಕಾಲ್ ಲೀಕ್: ನಕಲಿ ಎಂದ ಪಾಕಿಸ್ತಾನ್‌ ತೆಹರೀಕ್‌ ಇ ಇನ್ಸಾಫ್‌!

ಇಮ್ರಾನ್ ಖಾನ್ ಮಹಿಳೆ ಜೊತೆ ಸೆಕ್ಸ್ ಕುರಿತು ಮಾತನಾಡಿರುವ ಆಡಿಯೊ ಸೋರಿಕೆಯಾಗಿದೆ. ಆದರೆ ಇದು ನಕಲಿ ಎಂದು ಇಮ್ರಾನ್‌ ಖಾನ್‌ ನಾಯಕತ್ವದ ‘ಪಾಕಿಸ್ತಾನ್‌ ತೆಹರೀಕ್‌ ಇ ಇನ್ಸಾಫ್‌‘(ಪಿಟಿಐ) ಪಕ್ಷ ಹೇಳಿದೆ.

ನವದೆಹಲಿ: ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಹುದ್ದೆಯಿಂದ ಕೆಳಗಿಳಿದರೂ ಭಾರಿ ಸದ್ದು ಮಾಡುತ್ತಿದ್ದಾರೆ. ಪ್ರಧಾನಿಯಾಗಿ ವಿವಾದದಲ್ಲೇ ಮುಳುಗಿದ್ದ ಇಮ್ರಾನ್ ಖಾನ್ ಇತ್ತೀಚೆಗೆ ಸಾರ್ವಜನಿಕ ರ್ಯಾಲಿಯಲ್ಲಿ ಗುಂಡೇಟು ತಗುಲಿ ವಿಶ್ವದಾದ್ಯಂತ ಸುದ್ದಿಯಾಗಿದ್ದರು. ಇದೀಗ ತೀವ್ರ ಮುಖಭಂಗಕ್ಕೆ ಒಳಗಾಗಿದ್ದಾರೆ.

ಇಮ್ರಾನ್ ಖಾನ್ ಮಹಿಳೆ ಜೊತೆ ಸೆಕ್ಸ್ ಕುರಿತು ಮಾತನಾಡಿರುವ ಆಡಿಯೊ ಸೋರಿಕೆಯಾಗಿದೆ. ಆದರೆ ಇದು ನಕಲಿ ಎಂದು ಇಮ್ರಾನ್‌ ಖಾನ್‌ ನಾಯಕತ್ವದ ‘ಪಾಕಿಸ್ತಾನ್‌ ತೆಹರೀಕ್‌ ಇ ಇನ್ಸಾಫ್‌‘(ಪಿಟಿಐ) ಪಕ್ಷ ಹೇಳಿದೆ.

ಮಹಿಳೆಯೊಬ್ಬರು ಇಮ್ರಾನ್ ಖಾನ್‌ ಜತೆಗೆ ಸೆಕ್ಸ್‌ ಸಂಭಾಷಣೆ ನಡೆಸಿರುವ ಎರಡು ಆಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಇದು ಇಮ್ರಾನ್‌ ಖಾನ್‌ ಅವರ ಅಸಲಿ ಧ್ವನಿ ಎಂದು ಪಾಕಿಸ್ತಾನ್‌ ಪೀಪಲ್‌ ಪಾರ್ಟಿ ಹಾಗೂ ಪಾಕಿಸ್ತಾನ್‌ ಮುಸ್ಲಿಂ ಲೀಗ್‌ ಪಕ್ಷಗಳು ಆರೋಪ ಮಾಡಿವೆ. ಆದರೆ ಪಿಟಿಐ ಪಕ್ಷ ಈ ಆರೋಪವನ್ನು ತಳ್ಳಿ ಹಾಕಿದೆ.

ಇಮ್ರಾನ್‌ ಖಾನ್‌ ಅವರು ಮಹಿಳೆಯೊಬ್ಬರಿಗೆ ತನ್ನ ಬಳಿ ಬರುವಂತೆ ಕರೆಯುತ್ತಾರೆ. ಆ ಮಹಿಳೆ ಈಗ ಬರಲು ಸಾಧ್ಯವಿಲ್ಲ, ಮತ್ತೊಂದು ದಿನ ಬರುತ್ತೇನೆ ಎಂದು ಹೇಳುತ್ತಾರೆ, ಇದಕ್ಕೆ ಪ್ರತಿಕ್ರಿಯಿಸಿರುವ ಇಮ್ರಾನ್‌ ಖಾನ್‌, ಆ ದಿನ ನನ್ನ ಎಲ್ಲಾ ಕಾರ್ಯಕ್ರಮಗಳನ್ನು ಬದಲಾಯಿಸುತ್ತೇನೆ ಎಂದು ಹೇಳುತ್ತಾರೆ.

ಈಗಾಗಲೇ ನಿಮ್ಮ ನಡೆಯಿಂದ ನನ್ನ ಖಾಸಗಿ ಅಂಗಗಳಿಗೆ ನೋವಾಗಿದೆ. ಹೀಗಾಗಿ ಈಗ ಬರಲು ಸಾಧ್ಯವಿಲ್ಲ ಎಂದಿದ್ದಾರೆ. ಈ ಆಡಿಯೋ ಇದೀಗ ಪಾಕಿಸ್ತಾನ ಮಾತ್ರವಲ್ಲ, ವಿಶ್ವದಲ್ಲೇ ಪಾಕಿಸ್ತಾನದ ಪ್ರಧಾನಿ ಕಚೇರಿಯಲ್ಲಿ ನಡೆಯುತ್ತಿರುವ ಅಸಲಿ ಆಟಗಳನ್ನು ಬೆತ್ತಲೆ ಮಾಡಿದೆ ಎಂದು ಪ್ರತಿಕ್ರಿಯೆ ವ್ಯಕ್ತವಾಗಿದೆ.

ಇಮ್ರಾನ್ ಖಾನ್ ಅವರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿನ ಆಡಿಯೊಗಳು ಸೋರಿಕೆಯಾಗಿವ ಎಂದು ಹೇಳಲಾಗುತ್ತಿದೆ. ಪ್ರಧಾನಿ ಕಚೇರಿಯಲ್ಲಿ ಇಮ್ರಾನ್‌ ಖಾನ್‌ ಏನೆಲ್ಲಾ ಆಟವಾಡಿದ್ದಾರೆ ಎಂದು ಹಲವು ಪಕ್ಷಗಳ ರಾಜಕೀಯ ನಾಯಕರು ಟೀಕೆ ಮಾಡಿದ್ದಾರೆ.

ಇಮ್ರಾನ್ ಖಾನ್ ಅವರದ್ದು ಎನ್ನಲಾಗಿರುವ ಸೆಕ್ಸ್ ಕಾಲ್ ಆಡಿಯೋವನ್ನು ಪಾಕಿಸ್ತಾನದ ಪತ್ರಕರ್ತ ಸೈಯದ್ ಆಲಿ ಹೈದರ್ ಲೀಕ್ ಮಾಡಿದ್ದಾರೆ. ಯೂಟ್ಯೂಬ್ ಚಾನೆಲ್ ಮೂಲಕ ಈ ಆಡಿಯೋ ಬಹಿರಂಗ ಮಾಡಲಾಗಿದೆ. ಈ ಆಡಿಯೋದಲ್ಲಿ ಇಮ್ರಾನ್ ಖಾನ್, ಮಹಿಳೆಯೊಂದಿಗೆ ಸೆಕ್ಸ್ ಸಂಭಾಷಣೆ ನಡೆಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರಾಜೀನಾಮೆ ಬಗ್ಗೆ ಖುದ್ದು ಸುಳಿವು ನೀಡಿದ CM ಸಿದ್ದರಾಮಯ್ಯ; ಸಾಮಾಜಿಕ ಮಾಧ್ಯಮದಲ್ಲಿ ಮಹತ್ವದ ಪೋಸ್ಟ್​!

ಹೈಕಮಾಂಡ್ ಅದೇಶ ಪಾಲನೆ: ಗುರುವಾರ ಬೆಳಗ್ಗೆ 10.30ಕ್ಕೆ ರಾಜ್ಯಪಾಲರ ಭೇಟಿಗೆ ಸಮಯ ಕೇಳಿದ ಸಿಎಂ ಸಿದ್ದರಾಮಯ್ಯ; Video

ಗಡಿಯಲ್ಲಿ ಕಟ್ಟುನಿಟ್ಟಿನ ಕ್ರಮ: 15 ಕಿ.ಮೀ. ಒಳಗಿನ ಅಕ್ರಮ ನಿರ್ಮಾಣ ಕೆಡವಲು ಅಮಿತ್ ಶಾ ಸೂಚನೆ

SIR ಪ್ರಕ್ರಿಯೆಗೆ ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್; ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗೆ ಅಗತ್ಯ ಎಂದ ನ್ಯಾಯಪೀಠ..!

ಸಿಎಂ ಸಿದ್ದರಾಮಯ್ಯ ಪದತ್ಯಾಗ; ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಹತ್ವದ ಸಭೆ

SCROLL FOR NEXT