ಅಲಿ ಅಹ್ಮದ್ ಅಸ್ಲಾಮ್ 
ವಿದೇಶ

ಚಿಕನ್ ಟಿಕ್ಕಾ ಮಸಾಲಾ ಕಂಡುಹಿಡಿದ ಅಲಿ ಅಹ್ಮದ್ ಅಸ್ಲಾಮ್ ನಿಧನ

ಅತ್ಯಂತ ಜನಪ್ರಿಯ ಖಾದ್ಯ ಚಿಕನ್ ಟಿಕ್ಕಾ ಮಸಾಲಾವನ್ನು ಕಂಡುಹಿಡಿದ ಖ್ಯಾತ ಬಾಣಸಿಗ ಅಲಿ ಅಹ್ಮದ್ ಅಸ್ಲಾಮ್ ಅವರು ನಿಧನರಾಗಿದ್ದಾರೆ.

ನವದೆಹಲಿ: ಅತ್ಯಂತ ಜನಪ್ರಿಯ ಖಾದ್ಯ ಚಿಕನ್ ಟಿಕ್ಕಾ ಮಸಾಲಾವನ್ನು ಕಂಡುಹಿಡಿದ ಖ್ಯಾತ ಬಾಣಸಿಗ ಅಲಿ ಅಹ್ಮದ್ ಅಸ್ಲಾಮ್ ಅವರು ನಿಧನರಾಗಿದ್ದಾರೆ.

'ಮಿಸ್ಟರ್ ಅಲಿ' ಎಂದು ಖ್ಯಾತಿ ಪಡೆದಿದ್ದ ಅಲಿ ಅಹ್ಮದ್ ಅಸ್ಲಾಮ್ ಅವರು 77 ನೇ ವಯಸ್ಸಿನಲ್ಲಿ ನಿಧನರಾಗಿದ್ದು, ಐದು ಮಕ್ಕಳನ್ನು ಅಗಲಿದ್ದಾರೆ. ಡಿಸೆಂಬರ್ 22 ರಂದು ಗ್ಲ್ಯಾಸ್ಗೋ ಸೆಂಟ್ರಲ್ ಮಸೀದಿಯಲ್ಲಿ ನಡೆದ ಅವರ ಅಂತ್ಯಕ್ರಿಯೆಯನ್ನು ಕುಟುಂಬ ಮತ್ತು ಸ್ನೇಹಿತರು ಭಾಗವಹಿಸಿದ್ದರು.

ಗ್ಲ್ಯಾಸ್ಗೋದ ವೆಸ್ಟ್ ಎಂಡ್‌ನಲ್ಲಿರುವ ಶಿಶ್ ಮಹಲ್ ಹೋಟೆಲ್ ಅನ್ನು ಅವರು 1964 ರಲ್ಲಿ ಚಿಕ್ಕ ಹುಡುಗನಾಗಿದ್ದಾಗ ಆರಂಭಿಸಿದ್ದರು. ಹೀಗಾಗಿ ಶಿಶ್ ಮಹಲ್ ಹೋಟೆಲ್ ಅನ್ನು ಗೌರವ ಸೂಚಕವಾಗಿ 48 ಗಂಟೆಗಳ ಕಾಲ ಬಂದ್ ಮಾಡಲಾಗಿದೆ.

 ಅಲಿ ಅಹ್ಮದ್ ಅಸ್ಲಾಮ್ ಅವರು 1970 ರ ದಶಕದಲ್ಲಿ ತಮ್ಮ ರೆಸ್ಟೋರೆಂಟ್ ಶಿಶ್ ಮಹಲ್‌ನಲ್ಲಿ ಟೊಮೆಟೊ ಸೂಪ್‌ನಿಂದ ತಯಾರಿಸಿದ ಸಾಸ್ ಅನ್ನು ಸುಧಾರಿಸುವ ಮೂಲಕ ಸಂಶೋಧಕ ಚಿಕನ್ ಟಿಕ್ಕಾ ಮಸಾಲಾ ಖಾದ್ಯವನ್ನು ಕಂಡುಹಿಡಿದರು.

ಚಿಕನ್ ಟಿಕ್ಕಾ ಮಸಾಲಾ ಬ್ರಿಟನ್ ರೆಸ್ಟೋರೆಂಟ್ ಗಳಲ್ಲಿ ಭಾರೀ ಜನಮನ್ನಣೆ ಪಡೆದಿದೆ. ಈ ಹಿಂದೆ ಬ್ರಿಟನ್ ವಿದೇಶಾಂಗ ಕಾರ್ಯದರ್ಶಿಯಾಗಿದ್ದ ರಾಬಿನ್ ಕುಕ್ ಚಿಕನ್ ಟಿಕ್ಕಾ ಮಸಾಲವನ್ನು "ನಿಜವಾದ ಬ್ರಿಟಿಷ್ ರಾಷ್ಟ್ರೀಯ ಭಕ್ಷ್ಯ" ಎಂದು ಘೋಷಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಜನರು ಬಿಜೆಪಿ, ಮೋದಿ ಅವರೊಂದಿಗಿದ್ದಾರೆ': 2029ರ ಚುನಾವಣೆಯಲ್ಲಿ ಮತ್ತೊಂದು 'ಭಾರಿ ಸೋಲಿಗೆ' ಸಿದ್ಧರಾಗಿ: ರಾಹುಲ್ ಗಾಂಧಿ ವಿರುದ್ಧ ಅಮಿತ್ ಶಾ ವಾಗ್ದಾಳಿ

'ನನ್ನ ಜೊತೆ ಮಲಗಿದ್ರೆ ಸಿನಿಮಾ ಅವಕಾಶ’: ಚಿಕ್ಕ ವಯಸ್ಸಿಗೆ ಚಿತ್ರರಂಗ ಬಿಟ್ಟಿದ್ದೇಕೆ; ಸೌಥ್ ನಿರ್ದೇಶಕನ ಬಗ್ಗೆ ನಟಿ ಶಾಕಿಂಗ್ ಹೇಳಿಕೆ!

3 ಬಾರಿ ಸಿಎಂ ಕೂಡ ಸುರಕ್ಷಿತವಾಗಿಲ್ಲ: ಮಮತಾ ಬ್ಯಾನರ್ಜಿ ಮೇಲೆ ಚಾಕುವಿನಿಂದ ದಾಳಿಗೆ ಯತ್ನ; ಮಹಿಳೆ ಬಂಧನ

ವಿಚಿತ್ರವಾದ್ರೂ ಸತ್ಯ: ಅಪ್ರಾಪ್ತೆಯನ್ನು ಹಿಂಬಾಲಿಸಿ ಲೈಂಗಿಕ ದೌರ್ಜನ್ಯ; ರೋಬೋಟ್ ವಶಕ್ಕೆ ಪಡೆದ ಪೊಲೀಸರು!

'ಏನೇನ್ ದಾಖಲೆ ಇದೆ ಎಲ್ಲಾ ತರಿಸುತ್ತೇನೆ': HDK 'ಸ್ಟಿಂಗ್' ಆರೋಪಕ್ಕೆ CM ಡಿಕೆಶಿ ಶಾಕಿಂಗ್ ರಿಯಾಕ್ಷನ್!