ಸಹರ್ ತಬರ್ 
ವಿದೇಶ

ಧರ್ಮನಿಂದನೆ ಪ್ರಕರಣ: ಜೈಲಿನಿಂದ ಹೊರಬಂದಿರುವ ಇರಾನ್‌ನ 'ಝಾಂಬಿ ಏಂಜಲೀನಾ ಜೋಲಿ' ನೈಜ ಮುಖ ಬಹಿರಂಗ!

ಸೋಶಿಯಲ್ ಮೀಡಿಯಾದಲ್ಲಿ ತನ್ನ ಭಯಾನಕ ಫೋಟೋಗಳಿಂದಾಗಿ ಇರಾನ್‌ನ 'ಝಾಂಬಿ ಏಂಜಲೀನಾ ಜೋಲಿ' ಎಂದು ಕರೆಯಲ್ಪಡುತ್ತಿದ್ದ 21 ವರ್ಷದ ಸಹರ್ ತಬರ್ ತನ್ನ ನಿಜವಾದ ಮುಖವನ್ನು ಬಹಿರಂಗಪಡಿಸಿದ್ದಾರೆ.

ನವದೆಹಲಿ: ಸೋಶಿಯಲ್ ಮೀಡಿಯಾದಲ್ಲಿ ತನ್ನ ಭಯಾನಕ ಫೋಟೋಗಳಿಂದಾಗಿ ಇರಾನ್‌ನ 'ಝಾಂಬಿ ಏಂಜಲೀನಾ ಜೋಲಿ' ಎಂದು ಕರೆಯಲ್ಪಡುತ್ತಿದ್ದ 21 ವರ್ಷದ ಸಹರ್ ತಬರ್ ತನ್ನ ನಿಜವಾದ ಮುಖವನ್ನು ಬಹಿರಂಗಪಡಿಸಿದ್ದಾರೆ.

2017ರಲ್ಲಿ ಹಾಲಿವುಡ್ ತಾರೆ ಏಂಜಲೀನಾ ಜೋಲಿ ಅವರ ಝಾಂಬಿ ಆವೃತ್ತಿಯಂತೆ ಕಾಣುವ ಚಿತ್ರಗಳನ್ನು ಪೋಸ್ಟ್ ಮಾಡಿದ ನಂತರ ಸಹರ್ ತಬರ್ ಅವರ ನಿಜವಾದ ಹೆಸರು ಫತೇಮೆ ಖಿಶ್ವಂದ್ ಖ್ಯಾತಿಗೆ ಏರಿತು. ಈ ಹಿಂದೆ ಏಂಜಲೀನಾ ಜೋಲಿಯಂತೆ ಕಾಣುವ ಪ್ರಯತ್ನದಲ್ಲಿ ಆಕೆ 50ಕ್ಕೂ ಹೆಚ್ಚು ಶಸ್ತ್ರಚಿಕಿತ್ಸೆಗಳಿಗೆ ಒಳಗಾಗಿದ್ದಾಗಿ ಹೇಳಿಕೊಂಡಿದ್ದರು.

ವರದಿಯ ಪ್ರಕಾರ, ಫತೇಮೆ ತನ್ನ ಮೂಗು, ಲಿಪ್ ಫಿಲ್ಲರ್‌ಗಳು ಮತ್ತು ಲಿಪೊಸಕ್ಷನ್ ಸೇರಿದಂತೆ ಕೆಲವು ಕಾಸ್ಮೆಟಿಕ್ ಕಾರ್ಯವಿಧಾನಗಳಿಗೆ ಒಳಗಾಗಿದ್ದರು. ಆದಾಗ್ಯೂ, ಅವರು ತಮ್ಮ ನೋಟ ಫೋಟೋಶಾಪ್‌ನಲ್ಲಿ ಮೇಕಪ್ ಮತ್ತು ಎಡಿಟಿಂಗ್‌ನ ಫಲಿತಾಂಶವಾಗಿದೆ ಎಂದು ಒತ್ತಿ ಹೇಳಿದರು.

ಕಳೆದ 2019ರ ಅಕ್ಟೋಬರ್ ನಲ್ಲಿ 'ಭ್ರಷ್ಟಾಚಾರ' ಮತ್ತು 'ದೇವನಿಂದೆ'ಗಾಗಿ ಬಂಧಿಸಲಾಗಿತ್ತು. ಅಲ್ಲದೆ ಆಕೆಗೆ ಹತ್ತು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು. ಈ ಬಗ್ಗೆ ಕಾರ್ಯಕರ್ತೆ ಮಸಿಹ್ ಅಲಿನೆಜಾದ್ ಟ್ವೀಟ್ ಮಾಡಿದ್ದು ಸಹರ್ ತಬರ್ ಗೆ ಕೇವಲ 19. ಅವಳ ತಮಾಷೆ ಅವಳನ್ನು ಜೈಲಿಗೆ ತಳ್ಳಿತು. ಆಕೆಯ ತಾಯಿ ತನ್ನ ಮಗಳನ್ನು ಬಿಡುಗಡೆ ಮಾಡಲು ಪ್ರತಿದಿನ ಅಳುತ್ತಾಳೆ. ಪ್ರಿಯ ಏಂಜಲೀನಾ ಜೋಲೀ, ನಮಗೆ ಇಲ್ಲಿ ನಿಮ್ಮ ಧ್ವನಿ ಬೇಕು. ನಮಗೆ ಸಹಾಯ ಮಾಡಿ ಎಂದು ಟ್ವೀಟಿಸಿದ್ದರು. 

ಇನ್ನು ಕಳೆದ ತಿಂಗಳು ಕಸ್ಟಡಿಯಲ್ಲಿದ್ದ ಮಹ್ಸಾ ಅಮಿನಿಯ ಸಾವಿನ ಬಳಿಕ ದೇಶದಲ್ಲಿ ವ್ಯಾಪಕ ಪ್ರತಿಭಟನೆಗಳು ನಡೆಯುತ್ತಿದ್ದು ಇದೇ ಸಮಯದಲ್ಲಿ ಆಕೆಯನ್ನು 14 ತಿಂಗಳಿಗೆ ಜೈಲಿನಿಂದ ಬಿಡುಗಡೆ ಮಾಡಲಾಗಿದೆ. 

ಜೈಲಿನಿಂದ ಬಿಡುಗಡೆಯಾದ ನಂತರ, ತಬರ್ ಟಿವಿ ಸಂದರ್ಶನದಲ್ಲಿ ಕಾಣಿಸಿಕೊಂಡ ಸಹರ್ ತಬರ್ ತಮ್ಮ ನೈಜ ಮುಖವನ್ನು ಬಹಿರಂಗಪಡಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಜರ್ಮನಿಯ ವಸತಿ ಕಟ್ಟಡದಲ್ಲಿ ಶಂಕಿತ ಬೆಂಕಿ ಅವಘಡ: 3 ಭಾರತೀಯರು ಸಾವು!

ಕಾಂಗ್ರೆಸ್‌ನ ಆಂತರಿಕ ಕಲಹದಿಂದ 'ಮೂರನೇ ಮುಖ್ಯಮಂತ್ರಿ' ಬಂದರೂ ಅಚ್ಚರಿ ಇಲ್ಲ: ಬಿ.ವೈ ವಿಜಯೇಂದ್ರ; Video

ಯೂಟ್ಯೂಬರ್ ಧ್ರುವ್ ರಾಠಿಗೆ ಸಂಕಷ್ಟ: 8 ವರ್ಷಗಳ ಹಿಂದಿನ ಪ್ರಕರಣಕ್ಕೆ ಮರುಜೀವ; ದೆಹಲಿ ಕೋರ್ಟ್ ಸಮನ್ಸ್!

"ತಿರಂಗಾ ಹಾರಿಸುವುದು ಅಪರಾಧವಲ್ಲ ಎಂಬುದನ್ನು ತೋರಿಸುತ್ತೇವೆ": ಅಕ್ಟೋಬರ್ 16ಕ್ಕೆ ತ್ರಿವರ್ಣ ಧ್ವಜದೊಂದಿಗೆ ಬನ್ನಿ- ಅಭಿಜಿತ್ ದೀಪ್ಕೆ ಕರೆ

ಸುಪ್ರೀಂಕೋರ್ಟ್​ಗೆ ನನ್ನ ಬಗ್ಗೆ ತಪ್ಪು ಮಾಹಿತಿ: ಸರ್ಕಾರದ ವಿರುದ್ಧ ಡಿಜಿಪಿ ಅಲೋಕ್ ಕುಮಾರ್ ಅಸಮಾಧಾನ!