ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ವಿದೇಶ

ಸಿಂಗಾಪುರ: ಶಾಪಿಂಗ್ ಮಾಲ್‌ನ ಹೊರಗೆ ಮೆಟ್ಟಿಲ ಮೇಲಿಂದ ತಳ್ಳಿ ಭಾರತ ಮೂಲದ ವ್ಯಕ್ತಿ ಹತ್ಯೆ!

ಸಿಂಗಾಪುರದ ಶಾಪಿಂಗ್ ಮಾಲ್‌ ನಲ್ಲಿ ದುರಂತ ಸಂಭವಿಸಿದ್ದು, ಮೆಟ್ಟಿಲ ಮೇಲಿಂದ ಕೆಳಗೆ ತಳ್ಳಿ ಭಾರತ ಮೂಲದ ವ್ಯಕ್ತಿಯೊಬ್ಬರನ್ನು ಹತ್ಯೆ ಮಾಡಲಾಗಿದೆ ಎಂದು ಹೇಳಲಾಗಿದೆ.

ಸಾಂದರ್ಭಿಕ ಚಿತ್ರ
Srinivasa Murthy VN
Updated On : 8 Apr 2023, 5:22 pm

ಸಿಂಗಾಪುರ: ಸಿಂಗಾಪುರದ ಶಾಪಿಂಗ್ ಮಾಲ್‌ ನಲ್ಲಿ ದುರಂತ ಸಂಭವಿಸಿದ್ದು, ಮೆಟ್ಟಿಲ ಮೇಲಿಂದ ಕೆಳಗೆ ತಳ್ಳಿ ಭಾರತ ಮೂಲದ ವ್ಯಕ್ತಿಯೊಬ್ಬರನ್ನು ಹತ್ಯೆ ಮಾಡಲಾಗಿದೆ ಎಂದು ಹೇಳಲಾಗಿದೆ.

ಸಿಂಗಾಪುರದ ಆರ್ಚರ್ಡ್ ರಸ್ತೆಯಲ್ಲಿರುವ ಕಾಂಕಾರ್ಡ್ ಶಾಪಿಂಗ್ ಮಾಲ್‌ನಲ್ಲಿ ಈ ಘಟನೆ ನಡೆದಿದ್ದು, ಭಾರತ ಮೂಲದ 34 ವರ್ಷದ ದೇವೇಂದ್ರನ್ ಷಣ್ಮುಗಂ ಎಂಬ ವ್ಯಕ್ತಿ ಸಾವನ್ನಪ್ಪಿದ್ದು, ಪೊಲೀಸ್ ಮೂಲಗಳು ತಿಳಿಸಿರುವಂತೆ 27 ವರ್ಷದ ಮುಹಮ್ಮದ್ ಅಜ್ಫಾರಿ ಅಬ್ದುಲ್ ಕಹಾ ಎಂಬಾತ ಷಣ್ಮುಗಂರನ್ನು ಮೆಟ್ಟಿಲ ಮೇಲಿಂದ ತಳ್ಳಿ ಕೆಳಗೆ ಬೀಳಿಸಿದ್ದಾರೆ.

ಇದನ್ನೂ ಓದಿ: ಬಿಂದ್ರನ್ ವಾಲೆ ರೀತಿ ಕಾಣಲು ಜಾರ್ಜಿಯಾದಲ್ಲಿ ಶಸ್ತ್ರಚಿಕಿತ್ಸೆಗೊಳಗಾಗಿದ್ದ ಖಲೀಸ್ಥಾನಿ ಪ್ರತ್ಯೇಕತಾವಾದಿ ಅಮೃತ್ ಪಾಲ್ ಸಿಂಗ್!

Advertisement

Advertisement

ಈ ವೇಳೆ ಕೆಳಗೆ ಬಿದ್ದ ಷಣ್ಮುಗಂ ಪ್ರಜ್ಞಾಹೀನರಾಗಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಅವರು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಶುಕ್ರವಾರ ಮಂಡೈ ಸ್ಮಶಾನದಲ್ಲಿ ಅಂತ್ಯಸಂಸ್ಕಾರ ಮಾಡಲಾಯಿತು ಹೇಳಲಾಗಿದೆ.

ಆಸ್ಪತ್ರೆ ಮೂಲಗಳು ತಿಳಿಸಿರುವಂತೆ ಕೆಳಗೆ ಬಿದ್ದ ರಭಸಕ್ಕೆ ಷಣ್ಮುಗಂ ಅವರ ತಲೆಬುರುಡೆಯಲ್ಲಿ ಮೂಳೆ ಮುರಿತವಾಗಿದ್ದು, ಸ್ಥಳದಲ್ಲೇ ಸಾವನ್ನಪ್ಪಿರುವ ಸಾಧ್ಯತೆ ಇದೆ ಎಂದು ಶಂಕಿಸಿದ್ದಾರೆ.

ಇದನ್ನೂ ಓದಿ: ಅರುಣಾಚಲದ ಸ್ಥಳಗಳ ಮರುನಾಮಕರಣಕ್ಕೆ ಭಾರತ ವಿರೋಧ; ನಮ್ಮ 'ಸಾರ್ವಭೌಮತ್ವ' ಎಂದ ಚೀನಾ

ಇನ್ನು ಸಿಂಗಾಪುರ ಕಾನೂನಿನ ಪ್ರಕಾರ ಆರೋಪಿ ಮುಹಮ್ಮದ್ ಅಜ್ಫಾರಿ ಅಬ್ದುಲ್ ಕಹಾಗೆ 10 ವರ್ಷಗಳ ಜೈಲು ಶಿಕ್ಷೆ ಜೊತೆಗೆ ದಂಡ ಕೂಡ ವಿಧಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಪ್ರಸ್ತುತ ಪ್ರಕರಣ ದಾಖಲಿಸಿಕೊಂಡಿರುವ ಸ್ಥಳೀಯ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸಿದ್ದಾರೆ.
 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement