ವಿದೇಶ

ತನಿಖೆ ನಡೆಸದೆ ನಿಜ್ಜರ್ ಹತ್ಯೆಯಲ್ಲಿ ಭಾರತವನ್ನು ದೋಷಿ ಎಂದು ಪರಿಗಣಿಸಲಾಗಿದೆ: ಭಾರತೀಯ ರಾಯಭಾರಿ

Vishwanath S

ಒಟ್ಟಾವಾ: ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ನನ್ನು ಭಾರತ ಹತ್ಯೆ ಮಾಡಿಸಿದೆ ಎಂದು ಕೆನಡಾ ಆರೋಪಿಸಿದ್ದು ಅಂದಿನಿಂದ ಕೆನಡಾ ಮತ್ತು ಭಾರತ ನಡುವಿನ ಸಂಬಂಧ ಹಳಸಿದೆ. 

ಇನ್ನು ಕೆನಡಾದ ಸುದ್ದಿವಾಹಿನಿ ಸಿಟಿವಿ ನ್ಯೂಸ್‌ಗೆ ನೀಡಿದ ಸಂದರ್ಶನದ ವೇಳೆ ಭಾರತೀಯ ಹೈಕಮಿಷನರ್ ಸಂಜಯ್ ವರ್ಮಾ ಅವರು, ಯಾವುದೇ ತನಿಖೆಯಿಲ್ಲದೆ ನಿಜ್ಜರ್ ಹತ್ಯೆಯಲ್ಲಿ ಭಾರತವನ್ನು ತಪ್ಪಿತಸ್ಥರೆಂದು ಪರಿಗಣಿಸಲಾಗಿದೆ. ಇದು ಕಾನೂನಿನ ನಿಯಮವೇ? ಎಂದು ಪ್ರಶ್ನಿಸಿದ್ದಾರೆ.

ಈ ಘಟನೆ ನಂತರ ತನಿಖೆಗೆ ಸಹಕರಿಸಲು ಭಾರತವನ್ನು ಕೇಳಲಾಯಿತು. ಕ್ರಿಮಿನಲ್ ಗಳನ್ನು ನೋಡುವಂತೆ ಭಾರತವನ್ನು ನೋಡಲಾಯಿತು. ಇನ್ನು ಕೆನಡಾ ಹೇಳಿದಂತೆ ಕೆಲವು ಸಾಕ್ಷ್ಯಗಳಿದ್ದರೆ ಅದನ್ನು ಪ್ರಸ್ತುತಪಡಿಸಬೇಕು ಎಂದು ಭಾರತ ಅಂದಿನಿಂದಲೂ ಹೇಳುತ್ತಿದೆ ಎಂದು ಹೇಳಿದರು.

ಭಾರತ-ಕೆನಡಾ ಸಂಬಂಧಗಳು ಸೆಪ್ಟೆಂಬರ್‌ನಲ್ಲಿ ಮೊದಲಿಗಿಂತ ಉತ್ತಮವಾಗಿವೆ. ಕೆಲವು ಕೆನಡಾದ ನಾಗರಿಕರು ಭಾರತದಲ್ಲಿ ಭಯೋತ್ಪಾದನೆಯನ್ನು ಹರಡಲು ತಮ್ಮ ಭೂಮಿಯನ್ನು ಬಳಸುತ್ತಿದ್ದಾರೆ ಎಂಬುದು ಭಾರತದ ದೊಡ್ಡ ಆತಂಕವಾಗಿದೆ. ಭಾರತೀಯ ರಾಜತಾಂತ್ರಿಕರು ಮತ್ತು ಇತರ ಅಧಿಕಾರಿಗಳ ಸುರಕ್ಷತೆಯು ನಮಗೆ ಪ್ರಮುಖ ವಿಷಯವಾಗಿದೆ ಎಂದು ಹೇಳಿದರು.

ಭಾರತ ಸರ್ಕಾರವು ಖಲಿಸ್ತಾನಿ ಭಯೋತ್ಪಾದಕರ ವಿರುದ್ಧ ಹಲವು ದಾಖಲೆಗಳನ್ನು ಕೆನಡಾಕ್ಕೆ ಹಸ್ತಾಂತರಿಸಿದೆ. ಖಲಿಸ್ತಾನಿಗಳು ಭಾರತ ಮತ್ತು ಕೆನಡಾದಲ್ಲಿ ಅಪರಾಧಗಳನ್ನು ಎಸಗಿರುವ ಪುರಾವೆಗಳಿವೆ ಎಂದರು.

ಪಿಎಂ ಟ್ರುಡೊ ಭಾರತದ ವಿರುದ್ಧ ಆರೋಪ ಮಾಡಿದ್ದಲ್ಲದೆ ನಮ್ಮ ರಾಜತಾಂತ್ರಿಕರಲ್ಲಿ ಒಬ್ಬರನ್ನು ಹೊರಹಾಕಿದ್ದು ನಮಗೆ ದೊಡ್ಡ ವಿಷಯವಾಯಿತು. ಆದ್ದರಿಂದ, ನಾವು ಕೆನಡಾದ ರಾಜತಾಂತ್ರಿಕರನ್ನು ಹೊರಹಾಕುವ ಮೂಲಕ ಪ್ರತಿಕ್ರಿಯಿಸಿದ್ದೇವೆ ಎಂದರು.

SCROLL FOR NEXT