ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ವಿದೇಶ

ಗಾಜಾ ಪಟ್ಟಿ ಇಸ್ರೇಲ್ ಸೇನೆ ವಶಕ್ಕೆ; ಪ್ಯಾಲೆಸ್ತೀನ್ ಬೆನ್ನಲ್ಲೇ ಲೆಬನಾನ್, ಸಿರಿಯಾದಿಂದಲೂ ದಾಳಿ!

ಹಮಾಸ್ ಉಗ್ರರ ದಾಳಿ ಬೆನ್ನಲ್ಲೇ ಪ್ಯಾಲೆಸ್ತೀನ್ ಮೇಲೆ ಮುಗಿಬಿದ್ದಿರುವ ಇಸ್ರೇಲ್ ಸೇನೆ ಯುದ್ಧ ಆರಂಭವಾದ 5 ದಿನಗಳಲ್ಲೇ ಗಾಜಾ ಪಟ್ಟಿಯನ್ನು ತನ್ನ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದೆ.

ಗಾಜಾಪಟ್ಟಿ ಇಸ್ರೇಲ್ ವಶಕ್ಕೆ
Srinivasa Murthy VN
Updated On : 11 Oct 2023, 5:25 pm

ಟೆಲ್ ಅವೀವ್: ಹಮಾಸ್ ಉಗ್ರರ ದಾಳಿ ಬೆನ್ನಲ್ಲೇ ಪ್ಯಾಲೆಸ್ತೀನ್ ಮೇಲೆ ಮುಗಿಬಿದ್ದಿರುವ ಇಸ್ರೇಲ್ ಸೇನೆ ಯುದ್ಧ ಆರಂಭವಾದ 5 ದಿನಗಳಲ್ಲೇ ಗಾಜಾ ಪಟ್ಟಿಯನ್ನು ತನ್ನ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದೆ.

ಪ್ಯಾಲೆಸ್ತೀನ್ ನ ಹಮಾಸ್ ಉಗ್ರರ ದಾಳಿಯಿಂದ ಕಂಗೆಟ್ಟಿರುವ ಇಸ್ರೇಲ್ ಮೇಲೆ ಇದೀಗ ಬಹು ರಾಷ್ಟ್ರೀಯ ದಾಳಿ ನಡೆಯುತ್ತಿದ್ದು, ಪ್ಯಾಲೆಸ್ತೀನ್ ನೊಂದಿಗಿನ ಯುದ್ಧ ಚಾಲ್ತಿಯಲ್ಲಿರುವಂತೆ ಮತ್ತೊಂದು ಬದಿಯಲ್ಲಿ ಲೆಬನಾನ್ ಮತ್ತು ಸಿರಿಯಾ ದೇಶಗಳೂ ಕೂಡ ಗಡಿಯಲ್ಲಿ ಇಸ್ರೇಲ್ ಸೇನೆ ಮೇಲೆ ದಾಳಿ ನಡೆಸಿವೆ.

ಇದನ್ನೂ ಓದಿ: ಹಮಾಸ್ ಉಗ್ರಗಾಮಿಗಳಿಂದ ಕನಿಷ್ಠ 14 ಮಂದಿ ಅಮೆರಿಕನ್ನರ ಸಾವು; ಹಲವರು ಒತ್ತೆಯಾಳು

Advertisement

Advertisement

ಇಸ್ರೇಲ್‌ ಹಾಗೂ ಹಮಾಸ್‌ ಉಗ್ರರ ನಡುವಿನ ಸಮರವು ದಿನೇದಿನೆ (Israel Palestine War) ಕಾವೇರುತ್ತಿದೆ. ಇಸ್ರೇಲ್‌ ಮೇಲೆ ಪ್ಯಾಲೆಸ್ತೀನ್‌ ಉಗ್ರರು, ಗಾಜಾ ಪಟ್ಟಿ ಮೇಲೆ ಇಸ್ರೇಲ್‌ ಸೇನೆಯು ನಿರಂತರವಾಗಿ ದಾಳಿ ನಡೆಸುತ್ತಿದೆ. ಹಮಾಸ್‌ ಉಗ್ರರನ್ನು (Hamas Terrorists) ನಿರ್ನಾಮ ಮಾಡಿಯೇ ತೀರುತ್ತೇವೆ ಎಂದು ಪಣ ತೊಟ್ಟಿರುವ ಇಸ್ರೇಲ್‌ ಈಗ ತನ್ನ ದಾಳಿ ತೀವ್ರಗೊಳಿಸಿದೆ.

ಹಮಾಸ್ ಉಗ್ರರಿಂದ ಗಡಿ ತೆಕ್ಕೆಗೆ ಪಡೆದ ಇಸ್ರೇಲ್ ಸೇನೆ
ಇದೀಗ ತಾಜಾ ಬೆಳವಣಿಗೆಯಲ್ಲಿ ಗಾಜಾಪಟ್ಟಿಯನ್ನು ನಾವು ವಶಪಡಿಸಿಕೊಂಡಿದ್ದೇವೆ ಎಂದು ಇಸ್ರೇಲ್ ಘೋಷಿಸಿದೆ. ರಾತ್ರೋರಾತ್ರಿ ಸುಮಾರು 200 ಕಟ್ಟಡಗಳನ್ನು ಗುರಿಯಾಗಿಸಿ ಇಸ್ರೇಲ್‌ನ ಯುದ್ಧವಿಮಾನಗಳು ಗಾಜಾಪಟ್ಟಿ ಮೇಲೆ ದಾಳಿ ನಡೆಸಿದ್ದು, ಇಡೀ ಗಾಜಾ ನಮ್ಮ ವಶವಾಗಿದೆ ಎಂದು ಇಸ್ರೇಲ್‌ ತಿಳಿಸಿದೆ. ಹಮಾಸ್‌ ಉಗ್ರರ ಕಟ್ಟಡಗಳು ಸೇರಿ ಪ್ರಮುಖ ಕಟ್ಟಡಗಳನ್ನು ಇಸ್ರೇಲೆ ಧರೆಗುರುಳಿಸಿದೆ. ಮತ್ತೊಂದೆಡೆ, ಗಾಜಾ ಪಟ್ಟಿ ಮೇಲೆ ಇಸ್ರೇಲ್‌ ನಡೆಸಿದ ದಾಳಿಗೆ 1.8 ಲಕ್ಷ ನಾಗರಿಕರು ನಿರಾಶ್ರಿತರಾಗಿದ್ದಾರೆ ಎಂದು ವಿಶ್ವಸಂಸ್ಥೆ ತಿಳಿಸಿದೆ. ಇದು ಇಸ್ರೇಲ್‌ ದಾಳಿಯ ತೀವ್ರತೆಗೆ ಸಾಕ್ಷಿಯಾಗಿದೆ. 

ಇದನ್ನೂ ಓದಿ: ಇಸ್ರೇಲ್ ನಲ್ಲಿ 40 ಶಿಶುಗಳ ಶಿರಚ್ಛೇದ ಮಾಡಿದ ಹಮಾಸ್ ಉಗ್ರರು

3 ಸಾವಿರ ದಾಟಿದ ಸಾವಿನ ಸಂಖ್ಯೆ
ಎರಡೂ ದೇಶಗಳಲ್ಲಿ ನಡೆಯುತ್ತಿರುವ ದಾಳಿಯಿಂದಾಗಿ ಮೃತಪಟ್ಟವರ ಸಂಖ್ಯೆ 3 ಸಾವಿರ ದಾಟಿದೆ ಎಂದು ತಿಳಿದುಬಂದಿದೆ. ಗಾಜಾ ಪಟ್ಟಿ ಮೇಲೆ ಇಸ್ರೇಲ್‌ ನಿರಂತರವಾಗಿ ದಾಳಿ ನಡೆಸುತ್ತಿರುವ ಕಾರಣ ಸಾವಿನ ಸಂಖ್ಯೆ ದಿಢೀರ್‌ ಏರಿಕೆಯಾಗಿದೆ ಎನ್ನಲಾಗಿದೆ. ಇಸ್ರೇಲ್‌ನಲ್ಲೂ ಸಾವಿರಕ್ಕೂ ಅಧಿಕ ನಾಗರಿಕರು ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ. “ನಾವು ಯುದ್ಧ ಆರಂಭಿಸಿಲ್ಲ. ಆದರೆ ಮುಗಿಸುತ್ತೇವೆ” ಎಂದು ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಈಗಾಗಲೇ ಘೋಷಿಸಿದ್ದಾರೆ. 

ಲೆಬನಾನ್, ಸಿರಿಯಾದಿಂದಲೂ ಇಸ್ರೇಲ್ ಮೇಲೆ ದಾಳಿ
ಪ್ಯಾಲೆಸ್ತೀನ್ ನ ಹಮಾಸ್ ಉಗ್ರರ ಮೇಲಿನ ಇಸ್ರೇಲ್ ಸೇನಾ ದಾಳಿ ಮುಂದುವರೆದಿರುವಂತೆಯೇ ಇತ್ತ ನಿನ್ನೆ ಸಂಜೆ ಸಿರಿಯಾ ಮತ್ತು ಲೆಬನಾನ್ ಪಡೆಗಳ ನಡುವೆಯೂ ತೀವ್ರ ಗುಂಡಿನ ಚಕಮಕಿ ನಡೆದಿದೆ. ಅಂತೆಯೇ ಸಿರಿಯಾದಿಂದ ಇಸ್ರೇಲಿ ಭೂಪ್ರದೇಶದ ಮೇಲೆ ಹಲವು ರಾಕೆಟ್ ದಾಳಿಗಳು ಕೂಡ ನಡೆಯುತ್ತಿದ್ದು, ಸಿರಿಯಾ ದಾಳಿಗೆ ಇಸ್ರೇಲ್ ಸೇನೆ ಕೂಡ ತನ್ನ ಫಿರಂಗಿ ಮತ್ತು ಮಾರ್ಟರ್ ಶೆಲ್‌ಗಳೊಂದಿಗೆ ತಕ್ಕ ಉತ್ತರ ನೀಡುತ್ತಿದ್ದಾರೆ ಎಂದು ಇಸ್ರೇಲಿ ಸೇನೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments