ಹೆಜ್ಬುಲ್ಲಾ ಉಗ್ರರ ರಾಕೆಟ್ ಲಾಂಚರ್‌ಗಳ ನಾಶಗೊಳಿಸಿದ ಇಸ್ರೇಲ್ 
ವಿದೇಶ

Israel vs Hezbollah: ಹೆಜ್ಬುಲ್ಲಾ ಉಗ್ರರ ಸಾವಿರಾರು ರಾಕೆಟ್ ಲಾಂಚರ್‌ ನಾಶಗೊಳಿಸಿದ ಇಸ್ರೇಲ್

ದಕ್ಷಿಣ ಲೆಬನಾನ್ ಮೇಲೆ ಹೆಜ್ಬುಲ್ಲಾ ಉಗ್ರರ ನೆಲೆಗಳನ್ನು ಗುರಿಯಾಗಿಸಿ ದೊಡ್ಡ ಪ್ರಮಾಣದಲ್ಲಿ ದಾಳಿ ನಡೆಸಲಾಗಿದೆ ಎಂದು ಇಸ್ರೇಲ್‌ನ ಮಿಲಿಟರಿ ತಿಳಿಸಿದೆ. ದಕ್ಷಿಣ ಲೆಬನಾನ್‌ನಲ್ಲಿ ನೆಲೆಗೊಂಡಿದ್ದ ಇರಾನ್ ಬೆಂಬಲಿತ ಹಿಜ್ಬುಲ್ಲಾದ ಸಾವಿರಾರು ರಾಕೆಟ್ ಲಾಂಚರ್‌ಗಳನ್ನು ಇಸ್ರೇಲ್‌ನ ನೂರಾರು ಐಎಎಫ್ ಫೈಟರ್ ಜೆಟ್‌ಗಳು ನಾಶಗೊಳಿಸಿದೆ.

ಟೆಲ್ ಅವೀವ್: ಹೆಜ್ಬುಲ್ಲಾ ಉಗ್ರರ ವಿರುದ್ಧ ಕಾರ್ಯಾಚರಣೆ ಆರಂಭಿಸಿರುವ ಇಸ್ರೇಲ್ ಸೇನೆ ಹೆಜ್ಬುಲ್ಲಾ ಉಗ್ರರ ಸಾವಿರಾರು ರಾಕೆಟ್ ಲಾಂಚರ್‌ಗಳ ಘಟಕಗಳನ್ನು ನಾಶಪಡಿಸಿದೆ ಎಂದು ಇಸ್ರೇಲ್ ಡಿಫೆನ್ಸ್ ಫೋರ್ಸ್ ಮಾಹಿತಿ ನೀಡಿದೆ.

ದಕ್ಷಿಣ ಲೆಬನಾನ್ ಮೇಲೆ ಹೆಜ್ಬುಲ್ಲಾ ಉಗ್ರರ ನೆಲೆಗಳನ್ನು ಗುರಿಯಾಗಿಸಿ ದೊಡ್ಡ ಪ್ರಮಾಣದಲ್ಲಿ ದಾಳಿ ನಡೆಸಲಾಗಿದೆ ಎಂದು ಇಸ್ರೇಲ್‌ನ ಮಿಲಿಟರಿ ತಿಳಿಸಿದೆ.

ದಕ್ಷಿಣ ಲೆಬನಾನ್‌ನಲ್ಲಿ ನೆಲೆಗೊಂಡಿದ್ದ ಇರಾನ್ ಬೆಂಬಲಿತ ಹಿಜ್ಬುಲ್ಲಾದ ಸಾವಿರಾರು ರಾಕೆಟ್ ಲಾಂಚರ್‌ಗಳನ್ನು ಇಸ್ರೇಲ್‌ನ ನೂರಾರು ಐಎಎಫ್ ಫೈಟರ್ ಜೆಟ್‌ಗಳು ನಾಶಗೊಳಿಸಿದೆ. ಉತ್ತರ ಹಾಗೂ ಕೇಂದ್ರ ಇಸ್ರೇಲ್ ಗುರಿಯಾಗಿಸಿಡಲಾಗಿದ್ದ ರಾಕೆಟ್ ಲಾಂಚರ್‌ಗಳನ್ನು ಧ್ವಂಸ ಮಾಡಲಾಗಿದೆ.

ಸುಮಾರು 100 ಇಸ್ರೇಲಿ ಏರ್ ಫೋರ್ಸ್ ಫೈಟರ್ ಜೆಟ್‌ಗಳು ಸಾವಿರಾರು ಹೆಜ್ಬೊಲ್ಲಾ ರಾಕೆಟ್ ಲಾಂಚರ್ ಬ್ಯಾರೆಲ್‌ಗಳನ್ನು ಹೊಡೆದು ನಾಶಪಡಿಸಿವೆ. 40 ಕ್ಕೂ ಹೆಚ್ಚು ಹೆಜ್ಬೊಲ್ಲಾ ರಾಕೆಟ್ ಲಾಂಚರ್ ವ್ಯವಸ್ಥೆಗಳನ್ನು ಹೊಡೆದುರುಳಿಸಲಾಗಿದೆ.

ಹಿಜ್ಬುಲ್ಲಾ ದೊಡ್ಡ ಮಟ್ಟದಲ್ಲಿ ದಾಳಿ ನಡೆಸುವ ಸಾಧ್ಯತೆಯ ಹಿನ್ನೆಲೆಯಲ್ಲಿ ಇಸ್ರೇಲ್‌ನಲ್ಲಿ 48 ತಾಸಿನ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿದೆ.

ದೇಶದ ರಕ್ಷಣೆಗೆ ಏನು ಬೇಕಾದರೂ ಮಾಡಲು ಸಿದ್ಧ: ನೆತನ್ಯಾಹು

ಏತನ್ಮಧ್ಯೆ ಹೆಜ್ಬುಲ್ಲಾ ಉಗ್ರರ ಹಾವಳಿ ಕುರಿತು ಮಾತನಾಡಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು, "ನಮ್ಮ ನಾಗರಿಕರನ್ನು ಮತ್ತು ಇಸ್ರೇಲ್ ರಾಜ್ಯವನ್ನು ರಕ್ಷಿಸಲು ನಾವು ಏನು ಬೇಕಾದರೂ ಮಾಡುತ್ತೇವೆ" ಎಂದು ಘೋಷಿಸಿದ್ದಾರೆ.

ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ನೆತನ್ಯಾಹು, 'ದೇಶದ ಜನರ ರಕ್ಷಣೆಗೆ ಅಗತ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುತ್ತೇನೆ. ಯಾರೇ ನಮಗೆ ಹಾನಿ ಮಾಡಿದರೂ ಅವರ ವಿರುದ್ಧ ಪ್ರತಿದಾಳಿ ನಡೆಸಲಿದ್ದೇವೆ. ದೇಶ ರಕ್ಷಣೆಗಾಗಿ ಎಲ್ಲವನ್ನೂ ಮಾಡಲಿದ್ದೇವೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಭಾನುವಾರ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಇರಾನ್ ನಮಗೆ ಬೆದರಿಕೆಯೊಡ್ಡಿತ್ತು, ಆದರೆ ಈಗ ಬದುಕುಳಿಯಲು ಹೋರಾಡುತ್ತಿದೆ': ಶಾಂತಿ ಮಾತುಕತೆ ವಿಫಲದ ಬಳಿಕ ಇಸ್ರೇಲ್!

"Bad News": ಅಮೆರಿಕದ ಷರತ್ತುಗಳನ್ನು ಇರಾನ್ ಒಪ್ಪುತ್ತಿಲ್ಲ- ಜೆಡಿ ವ್ಯಾನ್ಸ್!

ಪಾಕಿಸ್ತಾನ ಮಧ್ಯಸ್ಥಿಕೆಯಲ್ಲಿ ನೇರ ಮಾತುಕತೆ; ಅಮೆರಿಕದ ಬೇಡಿಕೆ ಅತಿಯಾಗಿದೆ ಎಂದು ಇರಾನ್ ಮಾಧ್ಯಮಗಳ ಆರೋಪ

ಅಂತಿಮಗೊಳ್ಳದ ಹಾರ್ಮುಜ್ ಜಲಸಂಧಿ ಬಿಕ್ಕಟ್ಟು: 2 ನೇ ದಿನವಾದ ಇಂದು ಕೂಡಾ ಯುಎಸ್- ಇರಾನ್ ಮಾತುಕತೆ ಮುಂದುವರಿಕೆ!

PM Modi- Rahul: ರಾಜಕೀಯ ಬದ್ಧ ವೈರಿಗಳ ಅಪರೂಪದ ಚುಟುಕು ಸಂಭಾಷಣೆ- ವಿಡಿಯೋ ವೈರಲ್!

SCROLL FOR NEXT