ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಮೊದಲ ಫಲಿತಾಂಶ 
ವಿದೇಶ

ಅಮೆರಿಕ ಅಧ್ಯಕ್ಷೀಯ ಚುನಾವಣೆ 2024: ಮೊದಲ ಫಲಿತಾಂಶ ಪ್ರಕಟ

ಡಿಕ್ಸ್‌ವಿಲ್ಲೆ ನಾಚ್ ನಲ್ಲಿ ಆರು ನೋಂದಾಯಿತ ಮತದಾರರು ಮಧ್ಯರಾತ್ರಿಯಲ್ಲಿ ಮತದಾನ ಮಾಡಿದರು. ಇಲ್ಲಿ ಈ ಸಂಪ್ರದಾಯ 1960ಕ್ಕೂ ಹಿಂದಿನಿಂದಲೂ ಮುಂದುವರೆದುಕೊಂಡು ಬಂದಿದೆ.

ನ್ಯೂ ಹ್ಯಾಂಪ್ ಶೈರ್: ಜಗತ್ತಿನಾದ್ಯಂತ ತೀವ್ರ ಕುತೂಹಲ ಕೆರಳಿಸಿರುವ ಅಮೆರಿಕ ಅಧ್ಯಕ್ಷೀಯ ಚುನಾವಣೆ 2024ರ ಮೊದಲ ಫಲಿತಾಂಶ ಪ್ರಕಟವಾಗಿದೆ. ಹೌದು. ಅಮೆರಿಕದ ನ್ಯೂ ಹ್ಯಾಂಪ್‌ಶೈರ್ ರಾಜ್ಯದ ಒಂದು ಸಣ್ಣ ಪಟ್ಟಣವಾದ ಡಿಕ್ಸ್‌ವಿಲ್ಲೆ ನಾಚ್ ನ ಮತದಾನ ಮುಗಿದಿದ್ದು, ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಕಮಲಾ ಹ್ಯಾರಿಸ್ ಮತ್ತು ರಿಪಬ್ಲಿಕನ್ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ತಲಾ ಮೂರು ಮತಗಳನ್ನು ಪಡೆದಿದ್ದಾರೆ.

ಡಿಕ್ಸ್‌ವಿಲ್ಲೆ ನಾಚ್ ನಲ್ಲಿ ಆರು ನೋಂದಾಯಿತ ಮತದಾರರು ಮಧ್ಯರಾತ್ರಿಯಲ್ಲಿ ಮತದಾನ ಮಾಡಿದರು. ಇಲ್ಲಿ ಈ ಸಂಪ್ರದಾಯ 1960ಕ್ಕೂ ಹಿಂದಿನಿಂದಲೂ ಮುಂದುವರೆದುಕೊಂಡು ಬಂದಿದೆ.

ಈ ವಿಶಿಷ್ಟ ಮತದಾನದಲ್ಲಿ ಕಮಲಾ ಹ್ಯಾರಿಸ್ ಮತ್ತು ಡೊನಾಲ್ಡ್ ಟ್ರಂಪ್ ಇಬ್ಬರೂ ತಲಾ ಮೂರು ಮತಗಳನ್ನು ಪಡೆದಿದ್ದರಿಂದ ಶ್ವೇತಭವನದ ರೇಸ್ ನಲ್ಲಿ ಉಭಯ ನಾಯಕರಲ್ಲಿ ಪೈಪೋಟಿ ಕಂಡುಬರುತ್ತಿರುವುದನ್ನು ಈ ಮತದಾನ ಪ್ರತಿಬಿಂಬಿಸಿತು. ಗಡಿಯಾರ ಹನ್ನೆರಡು ಹೊಡೆಯುತ್ತಿದ್ದಂತೆ ಮತದಾನದ ಫಲಿತಾಂಶ ಹೊರಬಿದ್ದರು. ಪತ್ರಕರ್ತರು ಈ ಕ್ಷಣಕ್ಕೆ ಸಾಕ್ಷಿಸಿದರು.

100 ಕ್ಕಿಂತ ಕಡಿಮೆ ನಿವಾಸಿಗಳನ್ನು ಹೊಂದಿರುವ ಮುನ್ಸಿಪಾಲಿಟಿಗಳಲ್ಲಿ ಮಧ್ಯರಾತ್ರಿಯಲ್ಲಿ ಮತದಾನ ಕೇಂದ್ರಗಳನ್ನು ತೆರೆಯಲು ಮತ್ತು ಎಲ್ಲಾ ನೋಂದಾಯಿತ ಮತದಾರರು ಮತದಾನ ಮಾಡಿದ ಅವುಗಳನ್ನು ಮುಚ್ಚಲು ನ್ಯೂ ಹ್ಯಾಂಪ್‌ಶೈರ್‌ನ ಚುನಾವಣಾ ಕಾನೂನುಗಳು ಅನುವು ಮಾಡಿಕೊಡುತ್ತದೆ.

ಡಿಕ್ಸ್‌ವಿಲ್ಲೆ ನಾಚ್‌ನ ನಿವಾಸಿಗಳು 2020 ರ ಚುನಾವಣೆಯಲ್ಲಿ ಜೋ ಬೈಡನ್ ಸರ್ವಾನುಮತದಿಂದ ಮತ ಹಾಕಿದ್ದರು. ಈ ಮೂಲಕ ಬೈಡನ್ ಸಂಪ್ರದಾಯ ಪ್ರಾರಂಭವಾದಾಗಿನಿಂದ ಎಲ್ಲಾ ಮತಗಳನ್ನು ಪಡೆದ ಎರಡನೇ ಅಭ್ಯರ್ಥಿಯಾಗಿ ಇತಿಹಾಸ ನಿರ್ಮಿಸಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಬೂಕರ್ ಪ್ರಶಸ್ತಿ ಮಹತ್ವ ತಿಳಿದಿದ್ದರೆ ನನ್ನನ್ನು ಟೀಕಿಸುತ್ತಿರಲಿಲ್ಲ, ಸಾಹಿತ್ಯ ಸಮ್ಮೇಳನದ ವಿಡಿಯೋ ತಿರುಚಲಾಗಿದೆ: ಬಾನು ಮುಷ್ತಾಕ್

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

ಕೃಷ್ಣಾ ಮೇಲ್ದಂಡೆ ಯೋಜನೆ-3: ಸರ್ವಪಕ್ಷ ನಾಯಕರೊಂದಿಗೆ ಶೀಘ್ರದಲ್ಲೇ ಸಭೆ; ಡಿಕೆ.ಶಿವಕುಮಾರ್

SCROLL FOR NEXT