ಡೊನಾಲ್ಡ್ ಟ್ರಂಪ್‌ 
ವಿದೇಶ

One Big Beautiful Bill: ಅಮೆರಿಕಾ ಸೆನೆಟ್‌ನಲ್ಲಿ ಕೊನೆಗೂ ಮಸೂದೆ ಪಾಸ್‌; ಟೈ-ಬ್ರೇಕಿಂಗ್ ಮತ ಚಲಾಯಿಸಿದ ಜೆಡಿ ವ್ಯಾನ್ಸ್!

940 ಪುಟಗಳ ಶಾಸನವನ್ನು 51-50 ಮತಗಳಲ್ಲಿ ಅಂಗೀಕರಿಸಲಾಯಿತು. ಉಪಾಧ್ಯಕ್ಷ ಜೆಡಿ ವ್ಯಾನ್ಸ್ ರಾತ್ರಿಯ ತೀವ್ರ ಚರ್ಚೆಯ ನಂತರ ಟೈ-ಬ್ರೇಕಿಂಗ್ ಮತ ಚಲಾಯಿಸಿದರು.

ವಾಷಿಂಗ್ಟನ್: ಅಮೆರಿಕದ ಸಂಸತ್ತಿನ ಸದನವಾದ ಸೆನೆಟ್‌ನಲ್ಲಿ ಡೊನಾಲ್ಡ್ ಟ್ರಂಪ್‌ ಮಹತ್ವಾಕಾಂಕ್ಷಿ ತೆರಿಗೆ ಹಾಗೂ ಖರ್ಚು ಕಡಿತ ಮಸೂದೆ ಪಾಸಾಗಿದೆ. ಇದು 50:50 ಮತದಿಂದ ಟೈ ಆಗಿತ್ತು. ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಮಸೂದೆ ಪರ ಮತ ಹಾಕುವ ಮೂಲಕ ಪಾಸಾಗಿದೆ.

940 ಪುಟಗಳ ಶಾಸನವನ್ನು 51-50 ಮತಗಳಲ್ಲಿ ಅಂಗೀಕರಿಸಲಾಯಿತು. ಉಪಾಧ್ಯಕ್ಷ ಜೆಡಿ ವ್ಯಾನ್ಸ್ ರಾತ್ರಿಯ ತೀವ್ರ ಚರ್ಚೆಯ ನಂತರ ಟೈ-ಬ್ರೇಕಿಂಗ್ ಮತ ಚಲಾಯಿಸಿದರು. ಅಮೆರಿಕಾ ಸೆನೆಟ್ ನಲ್ಲಿ ಅಂಗೀಕಾರಗೊಂಡಿರುವ ಈ ಮಸೂದೆಯು ಭಾರತ ಸೇರಿದಂತೆ ಬಹುತೇಕ ದೇಶಗಳ ಮೇಲೆ ಬಹಳ ಪರಿಣಾಮ ಬೀರಲಿದೆ ಎಂದು ಹೇಳಲಾಗುತ್ತಿದೆ.

ಮಸೂದೆಗೆ 50-50 ಮತಗಳ ನಂತರ ಅಮೆರಿಕ ಸೆನೆಟ್​ನಲ್ಲಿ ಕೋಲಾಹಲ ಸೃಷ್ಟಿಯಾಗಿತ್ತು. ಆದರೆ, ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಟ್ರಂಪ್ ಅವರ ಮಸೂದೆಯ ಪರವಾಗಿ ಮತ ಚಲಾಯಿಸುವ ಮೂಲಕ ಕೇವಲ 1 ಮತದ ಅಂತರದಲ್ಲಿ ಈ ಮಸೂದೆ ಅಂಗೀಕಾರವಾಗುವಂತೆ ಮಾಡಿದರು. ಈ ಮಸೂದೆ ಈಗ ಪ್ರತಿನಿಧಿಗಳ ಸಭೆಗೆ ಮರಳುತ್ತದೆ.

ಅಮೆರಿಕದ ಸೆನೆಟ್ ಮಹಡಿಯಲ್ಲಿ ದಾಖಲೆಯ 24 ಗಂಟೆಗಳ ಅಧಿವೇಶನದಲ್ಲಿ ರಿಪಬ್ಲಿಕನ್ ನಾಯಕರು ಈ ಮಸೂದೆಗೆ ಬೆಂಬಲವನ್ನು ಒಟ್ಟುಗೂಡಿಸಲು ಹೆಣಗಾಡಬೇಕಾಯಿತು.

ಡೊನಾಲ್ಡ್‌ ಟ್ರಂಪ್‌ ಅವರ “ಒನ್‌ ಬ್ಯೂಟಿಫುಲ್‌ ಬಿಲ್”‌ ಮಸೂದೆಯ ಜಾರಿಯಾಗುವುದರಿಂದ ಅಮೆರಿಕದಲ್ಲಿದ್ದುಕೊಂಡು ಭಾರತದಲ್ಲಿನ ತಮ್ಮ ಕುಟುಂಬಕ್ಕೆ ಹಣ ವರ್ಗಾವಣೆ ಮಾಡುವ ವಲಸಿಗರು ಸಂಕಷ್ಟ ಎದುರಿಸಲಿದ್ದಾರೆ.

ಈ ಮಸೂದೆ ಎಲ್ಲಾ ಹೊರಹೋಗುವ ಹಣ ವರ್ಗಾವಣೆಗಳ ಮೇಲೆ, ಪ್ರಸ್ತಾವಿತ ಶೇ. 3.5ರಷ್ಟು ತೆರಿಗೆಯನ್ನು ವಿಧಿಸುವ ಅವಕಾಶವನ್ನು ಒದಗಿಸಿದೆ. ಇದು ವಿಶ್ವದ ಪ್ರಮುಖ ಹಣ ವರ್ಗಾವಣೆ ಸ್ವೀಕರಿಸುವ ದೇಶವಾದ ಭಾರತದ ಮೇಲೂ ಕೆಟ್ಟ ಪರಿಣಾಮವನ್ನು ಬೀರುವ ಸಾಧ್ಯತೆ ಇದೆ. ಹಾಗೆಯೇ ಇತರೆ ದೇಶಗಳ ಮೇಲೂ ಇದರ ಪರಿಣಾಮ ಉಂಟಾಗಲಿದೆ.

ಈ ಮಸೂದೆಯು 2017ರಲ್ಲಿ ಡೊನಾಲ್ಡ್ ಟ್ರಂಪ್ ಅವರ ಮೊದಲ ಅವಧಿಯಲ್ಲಿ ಅಂಗೀಕರಿಸಲಾದ ಕಾರ್ಪೊರೇಟ್ ಮತ್ತು ವೈಯಕ್ತಿಕ ತೆರಿಗೆ ಕಡಿತಗಳನ್ನು ವಿಸ್ತರಿಸುತ್ತದೆ. ಟಿಪ್ಸ್ ಮತ್ತು ಕಾರು ಸಾಲಗಳ ಮೇಲೆ ಹೊಸ ತೆರಿಗೆ ವಿನಾಯಿತಿಗಳನ್ನು ಪರಿಚಯಿಸುತ್ತದೆ. ಇದು ಆಹಾರ ಮತ್ತು ಆರೋಗ್ಯ ರಕ್ಷಣಾ ನೆರವು ಕಾರ್ಯಕ್ರಮಗಳಿಗೆ ಅರ್ಹತೆಯನ್ನು ಬಿಗಿಗೊಳಿಸುತ್ತದೆ ಮತ್ತು ಗಡಿ ಜಾರಿಗೊಳಿಸುವಿಕೆಯನ್ನು ಗಮನಾರ್ಹವಾಗಿ ವಿಸ್ತರಿಸುತ್ತದೆ. ಇದರಲ್ಲಿ ಹತ್ತಾರು ಸಾವಿರ ಹೊಸ ಏಜೆಂಟ್‌ಗಳ ನೇಮಕ ಮತ್ತು ವಾರ್ಷಿಕವಾಗಿ ಒಂದು ಮಿಲಿಯನ್ ಜನರನ್ನು ಗಡೀಪಾರು ಮಾಡುವ ನಿಬಂಧನೆಗಳು ಸೇರಿವೆ. ಈ ಪ್ರಸ್ತಾವನೆಯ ಅಡಿಯಲ್ಲಿ ಮಿಲಿಟರಿ ವೆಚ್ಚವೂ ಹೆಚ್ಚಾಗುತ್ತದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತ- ಫಿಜಿ ರಕ್ಷಣಾ ಸಹಕಾರ ಕ್ರಿಯಾ ಯೋಜನೆ ಸಿದ್ಧ: ಇಂಡೋ ಪೆಸಿಫಿಕ್‌ ವಲಯದಲ್ಲಿ ಚೀನಾದ ಪ್ರಾಬಲ್ಯ ತಡೆಗೆ ಮಾಸ್ಟರ್ ಪ್ಲಾನ್!

US tariff deadline: ಅಮೆರಿಕದ ಶೇ. 50 ರಷ್ಟು ಸುಂಕ ಆಗಸ್ಟ್ 27 ರಿಂದ ಜಾರಿ; ಮಂಗಳವಾರ ಮಹತ್ವದ PMO ಸಭೆ; ಮೋದಿ ಹೇಳಿದ್ದೇನು? Video

ಕಾರುಗಳ ಬೆಲೆಯಲ್ಲಿ ಆಗಲಿದೆ ಭಾರಿ ಇಳಿಕೆ: GST ಪರಿಷ್ಕರಣೆಗಾಗಿ ಕಾದು ಕುಳಿತ ಗ್ರಾಹಕರು!

IADWS: ಭಾರತೀಯ ಸೇನೆ ಬತ್ತಳಿಕೆಗೆ 'ಲೇಸರ್ ನಿರ್ದೇಶಿತ ಹೊಸ ಅಸ್ತ್ರ': ದಂಗಾದ ಚೀನಾ, ಹೇಳಿದ್ದು ಏನು?

ಗೌರಿ-ಗಣೇಶ ಹಬ್ಬ: ಪರಿಸರ ಕಾಳಜಿ ಮರೆಯದಿರೋಣ, ಜನತೆಗೆ ಸಿಎಂ ಸಿದ್ದರಾಮಯ್ಯ ಕರೆ! Video

SCROLL FOR NEXT