ಇರಾನ್ ಯುದ್ದ: ಶ್ರೀಲಂಕಾದಲ್ಲಿ 'ಇಂಧನ ತುರ್ತು ಪರಿಸ್ಥಿತಿ', ವಾರಕ್ಕೆ 4 ದಿನ ಕೆಲಸ, ನಾಳೆಯಿಂದಲೇ ಜಾರಿ!

ಶ್ರೀಲಂಕಾದಲ್ಲಿ ಇಂಧನ ಕೊರತೆ ಹಿನ್ನಲೆಯಲ್ಲಿ ತುರ್ತು ಕ್ರಮವಾಗಿ ನಾಲ್ಕು ದಿನಗಳ ಕೆಲಸದ ವಾರವನ್ನು ಘೋಷಿಸಲಾಗಿದೆ.
Sri Lanka announces 4-day working week as contingency measure
ಶ್ರೀಲಂಕಾದಲ್ಲಿ ಇಂಧನ ಕೊರತೆಯಿಂದ ಸಾಲುಗಟ್ಟಿ ನಿಂತಿರುವ ವಾಹನಗಳು
Updated on

ಕೊಲಂಬೋ: ಪಶ್ಚಿಮ ಏಷ್ಯಾದ ಇರಾನ್ ವಿರುದ್ಧ ನಡೆಯುತ್ತಿರುವ ಯುದ್ಧದ ಎಫೆರ್ಟ್ ನೆರೆಯ ಶ್ರೀಲಂಕಾದಲ್ಲಿ ಇಂಧನ ಕೊರತೆಯ ಗಂಭೀರ ಪರಿಸ್ಥಿತಿ ನಿರ್ಮಾಣವಾಗುವಂತೆ ಮಾಡಿದ್ದು, ಪರಿಸ್ಥಿತಿ ನಿಯಂತ್ರಣಕ್ಕೆ ಅಲ್ಲಿನ ಸರ್ಕಾರ ವಾರಕ್ಕೆ 4 ದಿನ ಮಾತ್ರ ಕೆಲಸ ಘೋಷಣೆ ಮಾಡಿದೆ.

ಹೌದು.. ಶ್ರೀಲಂಕಾದಲ್ಲಿ ಇಂಧನ ಕೊರತೆ ಹಿನ್ನಲೆಯಲ್ಲಿ ತುರ್ತು ಕ್ರಮವಾಗಿ ನಾಲ್ಕು ದಿನಗಳ ಕೆಲಸದ ವಾರವನ್ನು ಘೋಷಿಸಲಾಗಿದೆ.

ಪಶ್ಚಿಮ ಏಷ್ಯಾದಲ್ಲಿನ ಯುದ್ಧದ ಕಾರಣದಿಂದಾಗಿ ಇಂಧನ ಕೊರತೆ ಉಂಟಾಗಬಹುದಾಗಿದ್ದು, ತುರ್ತು ಕ್ರಮವಾಗಿ ಶ್ರೀಲಂಕಾ ಸೋಮವಾರ ನಾಲ್ಕು ದಿನಗಳ ಕೆಲಸದ ವಾರವನ್ನು ಘೋಷಿಸಿದ್ದು, ಪ್ರತಿ ಬುಧವಾರ ಸಾರ್ವಜನಿಕ ರಜೆಯನ್ನು ಘೋಷಿಸಿದೆ. ಪ್ರಸ್ತುತ, ದ್ವೀಪ ರಾಷ್ಟ್ರವು ಐದು ದಿನಗಳ ಕೆಲಸದ ವಾರವನ್ನು ಅನುಸರಿಸುತ್ತಿದೆ.

"ಮಾರ್ಚ್ 18 ರಿಂದ ಅಂದರೆ ನಾಳೆಯಿಂದಲೇ ಜಾರಿಗೆ ಬರುವಂತೆ ಪ್ರತಿ ಬುಧವಾರವನ್ನು ಸಾರ್ವಜನಿಕ ರಜಾದಿನವೆಂದು ಘೋಷಿಸಲು ನಿರ್ಧರಿಸಲಾಗಿದೆ" ಎಂದು ಅಗತ್ಯ ಸೇವೆಗಳ ಆಯುಕ್ತ ಜನರಲ್ ಪ್ರಭತ್ ಚಂದ್ರಕೀರ್ತಿ ಹೇಳಿದರು.

ಅಂತೆಯೇ ಇದು ಆರೋಗ್ಯ, ಬಂದರುಗಳು, ನೀರು ಸರಬರಾಜು ಮತ್ತು ಕಸ್ಟಮ್ಸ್‌ಗೆ ಅನ್ವಯಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ ಅವರು, "ಇದು ಶಾಲೆಗಳು, ವಿಶ್ವವಿದ್ಯಾಲಯಗಳು ಮತ್ತು ನ್ಯಾಯಾಂಗಕ್ಕೂ ಅನ್ವಯಿಸುತ್ತದೆ. ಖಾಸಗಿ ವಲಯವು ಅದೇ ಕ್ರಮವನ್ನು ಅನ್ವಯಿಸುತ್ತದೆ ಎಂದು ಸರ್ಕಾರ ನಿರೀಕ್ಷಿಸುತ್ತದೆ" ಎಂದು ಹೇಳಿದರು.

Sri Lanka announces 4-day working week as contingency measure
Iris Dena ನಾವಿಕರ ಹತ್ಯೆ: ಡೆಡ್ಲಿ ಪ್ರತೀಕಾರಕ್ಕಾಗಿ ಕಾಯುತ್ತಿದ್ದೇವೆ, ಯಾವಾಗ, ಏನು ಎಂಬ ಗುಟ್ಟು ಬಿಟ್ಟುಕೊಡದ ಇರಾನ್!

'ಮಧ್ಯಪ್ರಾಚ್ಯ ಸಂಘರ್ಷದಿಂದ ಉಂಟಾಗಿರುವ ಇಂಧನ ಅಡಚಣೆಯ ನಡುವೆ ಸಾರ್ವಜನಿಕ ಸೇವೆಗಳ ನಿರಂತರತೆಯನ್ನು ಖಚಿತಪಡಿಸಿಕೊಳ್ಳಲು ಕಾರ್ಯತಂತ್ರಗಳನ್ನು ಚರ್ಚಿಸಲು" ಪೂರ್ಣ ರಾಜ್ಯ ಯಂತ್ರೋಪಕರಣಗಳ ಭಾಗವಹಿಸುವಿಕೆಯೊಂದಿಗೆ ಅಧ್ಯಕ್ಷ ಅನುರ ಕುಮಾರ ದಿಸಾನಾಯಕೆ ಕರೆದ ವಿಶೇಷ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ' ಎಂದು ಅವರು ಹೇಳಿದರು.

ಕಳೆದ ವಾರ, ಶ್ರೀಲಂಕಾ ಇಂಧನ ಚಿಲ್ಲರೆ ಬೆಲೆಗಳನ್ನು ಹೆಚ್ಚಿಸಿ ಸಂಗ್ರಹಣೆಯನ್ನು ನಿಲ್ಲಿಸುವ ಪ್ರಯತ್ನದಲ್ಲಿತ್ತು. ಭಾನುವಾರದಿಂದ, ಬಳಕೆ ಮತ್ತು ಸಂಗ್ರಹಣೆಯನ್ನು ಕಡಿಮೆ ಮಾಡಲು ಇಂಧನ ಪಡಿತರ ವ್ಯವಸ್ಥೆಯನ್ನು ಪ್ರಾರಂಭಿಸಲಾಯಿತು.

ಆದರೆ ಸರ್ಕಾರವು ಇಂಧನದ ಮಿತವ್ಯಯದ ಬಳಕೆಗೆ ಮನವಿ ಮಾಡಿತು. ಆದಾಗ್ಯೂ, ಹೊಸ ಪಡಿತರ ವ್ಯವಸ್ಥೆಯ ಘೋಷಣೆಯೊಂದಿಗೆ ಭಾನುವಾರದಿಂದ ಇಂಧನ ಕೇಂದ್ರಗಳ ಬಳಿ ದೀರ್ಘ ಸರತಿ ಸಾಲುಗಳು ಸೃಷ್ಟಿಯಾದವು.

ಸರ್ಕಾರದ ಪ್ರಕಾರ, ನಿರಂತರ ಇಂಧನ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಭಾರತ ಮತ್ತು ರಷ್ಯಾ ಎರಡರೊಂದಿಗೂ ಮಾತುಕತೆ ನಡೆಯುತ್ತಿದೆ ಎಂದು ಹೇಳಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com