ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ 
ವಿದೇಶ

ಭಾರತದೊಂದಿಗೆ ಯುದ್ಧ ಮಾಡಲು ಪಾಕಿಸ್ತಾನ ಯಾಕೆ ಮುಂದಾಗಲಿಲ್ಲ? ಬೆಟ್ಟದಷ್ಟು ಕಾರಣಗಳು!

ಖಾಲಿಯಾಗುತ್ತಿರುವ ವಿದೇಶಿ ಮೀಸಲು, ದೀರ್ಘಕಾಲದ ವ್ಯಾಪಾರ ಕೊರತೆ, ತೆರಿಗೆಯಿಂದ ಕಡಿಮೆ ಆದಾಯ, ಹದಗೆಟ್ಟ ಪಾವತಿ ಬಿಕ್ಕಟ್ಟು, ಹೆಚ್ಚಿನ ನಿರುದ್ಯೋಗ ಮತ್ತು ಹಣದುಬ್ಬರ ಕಾರಣವಿರಬಹುದು.

ನವದೆಹಲಿ: ಭಾರತದೊಂದಿಗೆ ಯುದ್ಧ ಮಾಡುವಷ್ಟು ಶಕ್ತಿ, ಸಾಮರ್ಥ್ಯ, ತಾಕತ್ತು ಯಾವುದು ಪಾಕಿಸ್ತಾನಕ್ಕೆ ಇಲ್ಲ. ಅದಕ್ಕೆ ಬೆಟ್ಟದಷ್ಟು ಕಾರಣಗಳಿವೆ. ಆರ್ಥಿಕವಾಗಿ ದೇಶ ದಿವಾಳಿಯಾಗಿದೆ. ಅವರಿಗೆ ಬಂದೂಕು ಖರೀದಿಸುವಷ್ಟು ಸಾಮರ್ಥ್ಯವೂ ಇಲ್ಲ. ಅಂತಮವಾಗಿ ಶನಿವಾರ ಅಚ್ಚರಿ ರೀತಿಯಲ್ಲಿ ಕದನ ವಿರಾಮ ಘೋಷಣೆಯಾಗಿದೆ.

ಸಾಲದ ಶೂಲಕ್ಕೇರುವ ಭೀತಿ: ಹೆಚ್ಚುತ್ತಿರುವ ಬಾಹ್ಯ ಸಾಲವನ್ನು ಗಮನಿಸಿದರೆ, ಸಾಲ ಶೂಲಕ್ಕೇರಿಸಬಹುದೆಂಬ ಭಯ ಹೆಚ್ಚಾಗಿರುವಂತೆ ಕಾಣುತ್ತದೆ. ಇದಲ್ಲದೆ ಖಾಲಿಯಾಗುತ್ತಿರುವ ವಿದೇಶಿ ಮೀಸಲು, ದೀರ್ಘಕಾಲದ ವ್ಯಾಪಾರ ಕೊರತೆ, ತೆರಿಗೆಯಿಂದ ಕಡಿಮೆ ಆದಾಯ, ಹದಗೆಟ್ಟ ಪಾವತಿ ಬಿಕ್ಕಟ್ಟು, ಹೆಚ್ಚಿನ ನಿರುದ್ಯೋಗ ಮತ್ತು ಹಣದುಬ್ಬರ, ಈ ಎಲ್ಲಾ ಅಂಶಗಳು ಪಾಕಿಸ್ತಾನದಲ್ಲಿ ಶೂನ್ಯದಂತೆ ಕಾಣುತ್ತಿದೆ.

ಪಾಕ್ ಡ್ರೋನ್, ಕ್ಷಿಪಣಿ ಹೊಡೆದುರುಳಿಸಿದ ಭಾರತ: ಪಾಕ್ ಡ್ರೋನ್, ಕ್ಷಿಪಣಿ ಹೊಡೆದುರುಳಿಸಿದ ಭಾರತ: ಇಂತಹ ಪರಿಸ್ಥಿತಿಯಲ್ಲಿ, ಸರಿಯಾದ ಮನಸ್ಥಿತಿಯಲ್ಲಿರುವ ಯಾವುದೇ ದೇಶ ದುಸ್ಸಾಹಸಕ್ಕೆ ಮುಂದಾಗಲ್ಲ. ಸಿಂಹದ ಬಾಲದ ಮೇಲೆ ಕುಣಿಯುವುದಿಲ್ಲ. ಆದರೂ, ಪಾಕಿಸ್ತಾನ ಆರಂಭದಲ್ಲಿ ಅದನ್ನೇ ಮಾಡಿತು. ತನ್ನ ಡ್ರೋನ್‌ಗಳು, ಜೆಟ್‌ಗಳು ಮತ್ತು ತನ್ನ ಎಲ್ಲಾ ಆಯುಧಗಳನ್ನು ಭಾರತದ ಕಡೆಗೆ ತಿರುಗಿಸಿತು. ಆದರೆ ಭಾರತ ಯಾವುದಕ್ಕೂ ಜಗಲಿಲ್ಲ, ಬಗ್ಗಲಿಲ್ಲ, ಎಲ್ಲಾ ಡ್ರೋನ್, ಕ್ಷಿಪಣಿಗಳನ್ನು ಹೊಡೆದುರುಳಿಸಿತು. ಯಾವುದೇ ಸಂದರ್ಭದಲ್ಲಿ ಭಾರತಕ್ಕೆ ಸರಿಸಮನವಾಗಿ ಪಾಕಿಸ್ತಾನ ತನ್ನ ಹೋರಾಟ ತೋರಿಸಲಿಲ್ಲ.

ವಿಶ್ವದ 5ನೇ ಅತಿದೊಡ್ಡ ಆರ್ಥಿಕತೆ ಭಾರತ: ಭಾರತ ವಿಶ್ವದ ಐದನೇ ಅತಿದೊಡ್ಡ ಮತ್ತು ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿದೆ. ಮಿಲಿಟರಿ ಸಾಮರ್ಥ್ಯ ಅತ್ಯುನ್ನತ ಮಟ್ಟದಲ್ಲಿದೆ. ಇದಕ್ಕೆ ವ್ಯತಿರಿಕ್ತವಾಗಿ ಪಾಕಿಸ್ತಾನದ ಆರ್ಥಿಕತೆಯು ಪಾತಾಳಕ್ಕೆ ಕುಸಿದಿದೆ. ಬಿಗಿಯಾದ ಜಾಗತಿಕ ಆರ್ಥಿಕ ಪರಿಸ್ಥಿತಿ ಮತ್ತು ಏರುತ್ತಿರುವ ಬೆಲೆಗಳ ನಡುವೆ ಅತ್ಯಾಧುನಿಕ ಬಂದೂಕು, ಫಿರಂಗಿ ಮತ್ತಿತರ ಯುದ್ಧೋಪಕರಣ ಖರೀದಿಸಲು ಅವರ ಬಳಿ ದುಡ್ಡು ಇಲ್ಲ. ಎಲ್ಲಕ್ಕಿಂತ ಹೆಚ್ಚಾಗಿ, ಭಾರತವು ದಿವಾಳಿಯಾದ ರಾಷ್ಟ್ರಗಳಿಗೆ ಅನಾಯಾಸವಾಗಿ ನೆರವಾಗುತ್ತದೆ. ಆದರೆ ಪಾಕಿಸ್ತಾನ ಒಂದು ಬೇಲ್‌ಔಟ್‌ನಿಂದ ಬದುಕುಳಿಯುತ್ತಿದೆ. ಆದರೆ ಪೂರ್ಣ ಪ್ರಮಾಣದ ಯುದ್ಧ ನಡೆದರೆ ಅದು ಯಾವುದಕ್ಕೂ ಸಾಕಾಗುವುದಿಲ್ಲ.

ಭಾರತದ ವಿರೋಧ ನಡುವೆ IMF ಸಾಲ: ನೆನಪಿಡಿ, ಭಾರತದ ತೀವ್ರ ವಿರೋಧದ ನಡುವೆ IMF ಶುಕ್ರವಾರ ಇಸ್ಲಾಮಾಬಾದ್‌ಗೆ 2.3 ಶತಕೋಟಿ ಡಾಲರ್ ನಷ್ಟು ಹೊಸ ಸಾಲಗಳನ್ನು ನೀಡಿದೆ. ಭಾರತ ಮತ್ತು ಪಾಕ್ ನಡುವೆ ಉದ್ವಿಗ್ನತೆ ಹೆಚ್ಚಾಗಿರುವ ಸಂದರ್ಭದಲ್ಲಿಯೇ IMF ಪಾಕಿಸ್ತಾನಕ್ಕೆ ಸಾಲ ನೀಡಿದ್ದು, ಉಗ್ರರನ್ನು ಪೋಷಿಸುತ್ತಿರುವ ರಾಷ್ಟ್ರಕ್ಕೆ ನೆರವು ನೀಡಿರುವುದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿದ್ದು, ಅಂತಾರಾಷ್ಟ್ರೀಯ ಮುಜಾಹಿದ್ದೀನ್ ಫಂಡ್ ಎಂದು ಲೇವಡಿ ಮಾಡುತ್ತಿದ್ದಾರೆ. ಪಾಕಿಸ್ತಾನ 1950 ರಲ್ಲಿ IMF ಸದಸ್ಯ ರಾಷ್ಟ್ರವಾದ ನಂತರ ಇಲ್ಲಿಯವರೆಗೂ 25 ಬಾರಿ ಸಾಲ ದೊರಕಿದೆ. ಅದಲ್ಲದೇ ವಿಶ್ವ ಬ್ಯಾಂಕ್ ನಿಂದ 48 ಬಿಲಿಯನ್ ಡಾಲರ್, ಚೀನಾ ಮತ್ತಿತರ ರಾಷ್ಟ್ರಗಳಿಂದಲೂ ಕೋಟ್ಯಂತರ ರೂಪಾಯಿ ಸಾಲ ಪಡೆದಿದೆ.

ಎಲ್ಲಕ್ಕಿಂತ ಹೆಚ್ಚಾಗಿ ಪಾಕಿಸ್ತಾನ ಸಾಲ ನೀಡುವ ರಾಷ್ಟ್ರಗಳ ಪೈಕಿ ಚೀನಾ ಮುಂಚೂಣಿಯಲ್ಲಿದೆ. ಫಿಚ್ ಪ್ರಕಾರ, ಪಾಕಿಸ್ತಾನದ forex reserves ಹಣ 15ಬಿಲಿಯನ್ ಡಾಲರ್ ಕೇವಲ ಮೂರು ತಿಂಗಳ ಆಮದುಗಳನ್ನು ಸರಿದೂಗಿಸಲು ಸಾಕಾಗುತ್ತದೆ. ಇದಲ್ಲದೆ, ದ್ವಿಪಕ್ಷೀಯ ಠೇವಣಿಗಳಲ್ಲಿ $13 ಶತಕೋಟಿ ಸೇರಿದಂತೆ ಸುಮಾರು 22 ಬಿಲಿಯನ್ ಡಾಲರ್ ಸಾರ್ವಜನಿಕ ಬಾಹ್ಯ ಸಾಲವು ಶೀಘ್ರದಲ್ಲೇ ಮುಕ್ತಾಯಗೊಳ್ಳಲಿದೆ.

ಮೂಡೀಸ್ ರೇಟಿಂಗ್ಸ್ ಎಚ್ಚರಿಕೆ: ವಾಸ್ತವವಾಗಿ ಭಾರತದೊಂದಿಗಿನ ಉದ್ವಿಗ್ನತೆಯು ಪಾಕಿಸ್ತಾನದ ಬೆಳವಣಿಗೆಯ ಮೇಲೆ ತೀವ್ರ ಪರಿಣಾಮ ಬೀರಲಿದ್ದು, ಹಣಕಾಸಿನ ಬಲವರ್ಧನೆಗೆ ಅಡ್ಡಿಪಡಿಸುತ್ತದೆ ಎಂದು ಇತ್ತೀಚೆಗೆ ಮೂಡೀಸ್ ರೇಟಿಂಗ್ಸ್ ಎಚ್ಚರಿಸಿದೆ. ಇದು ಸ್ಥೂಲ ಆರ್ಥಿಕ ಸ್ಥಿರತೆ ಸಾಧಿಸುವಲ್ಲಿ ಇಸ್ಲಾಮಾಬಾದ್‌ನ ಪ್ರಗತಿಗೆ ಹಿನ್ನೆಡೆ ಉಂಟು ಮಾಡುತ್ತದೆ ಎಂದು ತಜ್ಞರು ಹೇಳಿದ್ದಾರೆ.

ಶೇ. 3.1 ರಷ್ಟು ಆರ್ಥಿಕ ಪ್ರಗತಿ: ಇನ್ನೂ 2026ನೇ ಆರ್ಥಿಕ ವರ್ಷದಲ್ಲಿ ಪಾಕಿಸ್ತಾನದ ಆರ್ಥಿಕ ಬೆಳವಣಿಗೆ ಶೇ. 3.1 ರಷ್ಟು ಇರಲಿದೆ ಎಂದು IMF ಅಂದಾಜಿಸಿದೆ. 2025ರಲ್ಲಿ ಇದು ಶೇ. 2.7 ರಷ್ಟಿತ್ತು. 2026ರಲ್ಲಿ ಆರ್ಥಿಕ ಪ್ರಗತಿ ಶೇ. 3.2 ರಷ್ಟು ಇರಲಿದೆ ಎಂದು ವಿಶ್ವ ಬ್ಯಾಂಕ್ ಅಂದಾಜಿಸಿದೆ.

ಇವೆಲ್ಲಾ ಕಾರಣಗಳಿಂದ ಪಾಕಿಸ್ತಾನದ ಹಣಕಾಸು ವಿಸ್ತೃತ ಮಿಲಿಟರಿ ಸಂಘರ್ಷದಲ್ಲಿ ತೊಡಗಿಸಿಕೊಳ್ಳುವಷ್ಟು ಬಲಶಾಲಿಯಾಗಿಲ್ಲ. ಪಾಕಿಸ್ತಾನ ಸಾಲ ಪಡೆದ ಹಣದಿಂದ ಯುದ್ಧದಲ್ಲಿ ತೊಡಗಿಸಿಕೊಂಡರೂ ಅದು ಎಷ್ಟು ದಿನ ಮುಂದುವರಿಯಬಹುದು ಎಂಬುದು ಸರಳ ಪ್ರಶ್ನೆಯಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮತ್ತೊಂದು F-18 ಫೈಟರ್ ಜೆಟ್ ಹೊಡೆದುರುಳಿಸಿದ್ದೇವೆ ಎಂದ Iran, ಬೆಚ್ಚಿದ ಅಮೆರಿಕದಿಂದ Fact-Check

ಯುದ್ದದಲ್ಲಿ ಗೆದ್ದು ಕೂಡ ಸೋಲುತ್ತಿರುವ ಅಮೇರಿಕಾ ಮತ್ತು ಚೀನಾ! (ಹಣಕ್ಲಾಸು)

ಮಾನಸಿಕ ನೆಮ್ಮದಿಗೆ 10 ಸಾವಿರ ರೂ, ಸ್ವಯಂ ಆರೈಕೆಗೆ 10 ಸಾವಿರ: 22 ವರ್ಷದ ಬೆಂಗಳೂರು Gen Z ಯುವತಿಯ ಮಾಸಿಕ ಖರ್ಚುವೆಚ್ಚ ವೈರಲ್!

ವಿವಾದದ ನಡುವೆ ಮೈಸೂರಿನ ಮುಕ್ತ ವಿವಿಯಲ್ಲಿ RSS ಕಾರ್ಯಕ್ರಮ ಉದ್ಘಾಟಿಸಿದ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್

'ಜೀವ ಬಾಯಿಗೆ ಬಂದಿತ್ತು': ಆಗಸದಲ್ಲೇ ಗಿರಕಿ ಹೊಡೆದ ಡಿಕೆ ಶಿವಕುಮಾರ್, ರೇವಣ್ಣ ಪ್ರಯಾಣಿಸುತ್ತಿದ್ದ ವಿಮಾನ, ಕೆಲಕಾಲ ಆತಂಕ! ಆಗಿದ್ದೇನು?

SCROLL FOR NEXT