ಗಾಜಾದಲ್ಲಿ ಇಸ್ರೇಲ್ ದಾಳಿಯಿಂದ ಆಗಸದಲ್ಲಿ ಉಂಟಾದ ಹೊಗೆಯ ಚಿತ್ರ 
ವಿದೇಶ

Israeli strikes: ಗಾಜಾದಲ್ಲಿ ನಿಲ್ಲದ ಇಸ್ರೇಲ್ ವೈಮಾನಿಕ ದಾಳಿ; 52 ಜನರ ಹತ್ಯೆ!

ಬೆಳಗ್ಗೆಯಿಂದ ಗಾಜಾ ಪಟ್ಟಿಯ ಮೇಲೆ ನಿರಂತರ ಇಸ್ರೇಲಿ ಬಾಂಬ್ ಸ್ಫೋಟಗಳಿಂದ ಈ ಸಾವು ಆಗಿದ್ದು, ಗಾಜಾ ನಗರದಲ್ಲಿ ಒಂದು ಮಗು ಸೇರಿದಂತೆ 10 ಜನರು ಸಾವನ್ನಪ್ಪಿದ್ದಾರೆ ಎಂದು ಹಮಾಸ್ ನಲ್ಲಿ ಆಡಳಿತದಡಿ ಕಾರ್ಯನಿರ್ವಹಿಸುತ್ತಿರುವ ರಕ್ಷಣಾ ಪಡೆಯೊಂದು ತಿಳಿಸಿದೆ.

ನುಸೇರತ್: ಗಾಜಾದಾದ್ಯಂತ ಇಸ್ರೇಲ್ ಗುರುವಾರ ನಡೆಸಿದ ವೈಮಾನಿಕ ದಾಳಿಯಲ್ಲಿ ಕನಿಷ್ಠ 52 ಜನರ ಹತ್ಯೆಯಾಗಿದೆ ಎಂದು ಅಲ್ಲಿನ ನಾಗರಿಕ ರಕ್ಷಣಾ ಸಂಸ್ಥೆ ಮತ್ತು ಆಸ್ಪತ್ರೆಗಳು ತಿಳಿಸಿವೆ. ಇದರಲ್ಲಿ ಫ್ರೆಂಚ್ ಚಾರಿಟಿ ಡಾಕ್ಟರ್ಸ್ ವಿಥೌಟ್ ಬಾರ್ಡರ್ಸ್‌ನ ಉದ್ಯೋಗಿಯೊಬ್ಬರು ಸೇರಿದ್ದಾರೆ ಎನ್ನಲಾಗಿದೆ.

ಬೆಳಗ್ಗೆಯಿಂದ ಗಾಜಾ ಪಟ್ಟಿಯ ಮೇಲೆ ನಿರಂತರ ಇಸ್ರೇಲಿ ಬಾಂಬ್ ಸ್ಫೋಟಗಳಿಂದ ಈ ಸಾವು ಆಗಿದ್ದು, ಗಾಜಾ ನಗರದಲ್ಲಿ ಒಂದು ಮಗು ಸೇರಿದಂತೆ 10 ಜನರು ಸಾವನ್ನಪ್ಪಿದ್ದಾರೆ ಎಂದು ಹಮಾಸ್ ನಲ್ಲಿ ಆಡಳಿತದಡಿ ಕಾರ್ಯನಿರ್ವಹಿಸುತ್ತಿರುವ ರಕ್ಷಣಾ ಪಡೆಯೊಂದು ತಿಳಿಸಿದೆ.

ಗಾಜಾ ನಗರದಲ್ಲಿ 10, ಮಧ್ಯ ಗಾಜಾದಲ್ಲಿ 14 ಮತ್ತು ದಕ್ಷಿಣದ ಪ್ರಾಂತ್ಯದಲ್ಲಿ 28 ಮೃತ ದೇಹಗಳನ್ನು ಸ್ವೀಕರಿಸಲಾಗಿದೆ ಎಂದು ಹಲವಾರು ಆಸ್ಪತ್ರೆಗಳು ಸುದ್ದಿಸಂಸ್ಥೆ AFP ಗೆ ದೃಢಪಡಿಸಿವೆ. ಕೆಲವರು ವೈಮಾನಿಕ ದಾಳಿಯಲ್ಲಿ, ಇತರರು ಡ್ರೋನ್ ಬೆಂಕಿ ಮತ್ತು ಗುಂಡಿನ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಅದು ವರದಿ ಮಾಡಿದೆ. ಈ ವಿಚಾರವನ್ನು ಪರಿಶೀಲಿಸುತ್ತಿರುವುದಾಗಿ ಇಸ್ರೇಲ್ ಸೇನೆ ತಿಳಿಸಿದೆ.

ಅಲ್-ಟಿನಾ ಮತ್ತು ಮೊರಾಗ್ ಪ್ರದೇಶಗಳಲ್ಲಿ ಆಹಾರ ವಿತರಣೆಗಾಗಿ ಕಾಯುತ್ತಿದ್ದ ಪ್ಯಾಲೆಸ್ಟೀನಿಯನ್ನರನ್ನು ಗುರಿಯಾಗಿಸಿಕೊಂಡು ಇಸ್ರೇಲ್ ನಡೆಸಿದ ಗುಂಡೇಟಿನಿಂದ 14 ಮಂದಿ ಸೇರಿದಂತೆ ಸುಮಾರು 30 ಮಂದಿ ಸಾವನ್ನಪ್ಪಿರುವುದಾಗಿ ಖಾನ್ ಯುನಿಸ್‌ನಲ್ಲಿರುವ ನಾಸರ್ ಆಸ್ಪತ್ರೆ ಮಾಹಿತಿ ಹಂಚಿಕೊಂಡಿದೆ.

ಅನೇಕ ಬಾರಿ ನಡೆದ ಗುಂಡಿನ ದಾಳಿಯಿಂದ ಒಂಬತ್ತು ಶವಗಳನ್ನು ಸ್ವೀಕರಿಸಲಾಗಿದೆ ಎಂದು ಡೀರ್ ಎಲ್-ಬಾಲಾಹ್‌ನಲ್ಲಿರುವ ಅಲ್-ಅಕ್ಸಾ ಹುತಾತ್ಮರ ಆಸ್ಪತ್ರೆ ಹೇಳಿದೆ.

ಮೃತರಲ್ಲಿ ಡಾಕ್ಟರ್ಸ್ ವಿದೌಟ್ ಬಾರ್ಡರ್ಸ್ (ಎಂಎಸ್‌ಎಫ್) ಸಿಬ್ಬಂದಿ ಓಮರ್ ಅಲ್-ಹಯೆಕ್ (26) ಸೇರಿದ್ದಾರೆ. "ನಮ್ಮ ಕೆಲವು ಸಿಬ್ಬಂದಿ ಗಾಯಗೊಂಡಿದ್ದು, ಅವರನ್ನು ಅಲ್-ಅಕ್ಸಾ ಹುತಾತ್ಮರ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂಬ ಮಾಹಿತಿ ತಿಳಿದುಬಂದಿರುವುದಾಗಿ ಗಾಜಾದ ಎಂಎಸ್‌ಎಫ್ ವೈದ್ಯಕೀಯ ತಂಡದ ಮುಖ್ಯಸ್ಥ ಕರಿನ್ ಹಸ್ಟರ್ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Madhya Pradesh: ದುರ್ಗಾದೇವಿ ಮೂರ್ತಿ ವಿಸರ್ಜನೆ ವೇಳೆ ದುರಂತ, ಮಹಿಳೆಯರು, ಮಕ್ಕಳು ಸೇರಿದಂತೆ 14 ಮಂದಿ ಸಾವು!Video

ಈ ಬಾರಿ 'ಮೈಸೂರು ದಸರಾ' ಯಶಸ್ವಿ; ಬೆಳೆ ಹಾನಿಯಾದ ಎಲ್ಲ 10 ಲಕ್ಷ ಹೆಕ್ಟೇರ್ ಗೂ ಸಮೀಕ್ಷೆ ನಂತರ ಪರಿಹಾರ: ಸಿಎಂ ಸಿದ್ದರಾಮಯ್ಯ

'RSS ನಲ್ಲಿ ಒಬ್ಬ ವ್ಯಕ್ತಿಯೂ ಇಲ್ಲ': ಪ್ರಧಾನಿ ಮೋದಿ ಹೇಳಿಕೆಗೆ ಓವೈಸಿ ತಿರುಗೇಟು!

2026 T20 World Cup: ಅರ್ಹತೆ ಪಡೆದ ನಮೀಬಿಯಾ, ಜಿಂಬಾಬ್ವೆ!

ಅಂಬೇಡ್ಕರ್ ಸಿದ್ಧಾಂತದಂತೆ ಬದುಕಿದ್ದೇವೆ; RSS ಕಾರ್ಯಕ್ರಮಕ್ಕೆ ಹೋಗಲ್ಲ: CJI ಗವಾಯಿ ತಾಯಿ ಪತ್ರ

SCROLL FOR NEXT