ವಾಷಿಂಗ್ಟನ್‌ನಲ್ಲಿರುವ ಶ್ವೇತಭವನದಲ್ಲಿ ನಡೆದ ಔತಣಕೂಟ 
ವಿದೇಶ

ಟೆಕ್ ದೈತ್ಯರಿಗೆ ಶ್ವೇತಭವನದಲ್ಲಿ Donald Trump ಔತಣಕೂಟ; Elon Musk ಗೈರು; Video

ಟ್ರಂಪ್ ಅವರ ಬಲಭಾಗದಲ್ಲಿ ಕುಳಿತಿದ್ದ ಮೆಟಾದ ಮಾರ್ಕ್ ಜುಕರ್‌ಬರ್ಗ್ 600 ಬಿಲಿಯನ್ ಡಾಲರ್ ಹೂಡಿಕೆ ಬಗ್ಗೆ ಹೇಳಿದರು. ಆಪಲ್‌ನ ಟಿಮ್ ಕುಕ್ ಕೂಡ ಇದೇ ಮಾತುಗಳನ್ನು ನುಡಿದರು. ಗೂಗಲ್‌ನ ಸುಂದರ್ ಪಿಚೈ 250 ಬಿಲಿಯನ್ ಡಾಲರ್ ಎಂದು ಹೇಳಿದರು.

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶ್ವೇತಭವನದಲ್ಲಿ ಉನ್ನತ ಮಟ್ಟದ ತಂತ್ರಜ್ಞಾನ ಕಾರ್ಯನಿರ್ವಾಹಕರ ಗುಂಪಿಗೆ ನಿನ್ನೆ ಔತಣಕೂಟ ಏರ್ಪಡಿಸಿದ್ದರು. ಈ ಸಂದರ್ಭದಲ್ಲಿ ಕೃತಕ ಬುದ್ಧಿಮತ್ತೆಯ ಕುರಿತು ದೇಶದಲ್ಲಿ ನಡೆಯುತ್ತಿರುವ ಸಂಶೋಧನೆಯನ್ನು ಪ್ರದರ್ಶಿಸಿದರು. ಯುನೈಟೆಡ್ ಸ್ಟೇಟ್ಸ್‌ನಾದ್ಯಂತ ಕಂಪನಿಗಳು ಮಾಡುತ್ತಿರುವ ಹೂಡಿಕೆಗಳ ಬಗ್ಗೆ ಹೆಮ್ಮೆಪಟ್ಟರು.

ಇದು ನಮ್ಮ ದೇಶವನ್ನು ಹೊಸ ಮಟ್ಟಕ್ಕೆ ಕೊಂಡೊಯ್ಯುತ್ತಿದೆ ಎಂದು ಅವರು ಹೆಚ್ಚಿನ ಐಕ್ಯೂ ಜನರು ನಮ್ಮಲ್ಲಿದ್ದಾರೆ ಎಂದರು. ಟ್ರಂಪ್ ಮತ್ತು ತಂತ್ರಜ್ಞಾನ ನಾಯಕರ ನಡುವಿನ ಸೂಕ್ಷ್ಮವಾದ ದ್ವಿಮುಖ ಪ್ರಣಯದ ಇತ್ತೀಚಿನ ಉದಾಹರಣೆ ಇದು, ನಿನ್ನೆ ಔತಣಕೂಟದಲ್ಲಿ ಭಾಗವಹಿಸಿದ ಹಲವರು ಟ್ರಂಪ್ ಅವರ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಿದ್ದರು.

ಟ್ರಂಪ್ ಅವರ ಬಲಭಾಗದಲ್ಲಿ ಕುಳಿತಿದ್ದ ಮೆಟಾದ ಮಾರ್ಕ್ ಜುಕರ್‌ಬರ್ಗ್ 600 ಬಿಲಿಯನ್ ಡಾಲರ್ ಹೂಡಿಕೆ ಬಗ್ಗೆ ಹೇಳಿದರು. ಆಪಲ್‌ನ ಟಿಮ್ ಕುಕ್ ಕೂಡ ಇದೇ ಮಾತುಗಳನ್ನು ನುಡಿದರು. ಗೂಗಲ್‌ನ ಸುಂದರ್ ಪಿಚೈ 250 ಬಿಲಿಯನ್ ಡಾಲರ್ ಎಂದು ಹೇಳಿದರು.

"ಮೈಕ್ರೋಸಾಫ್ಟ್ ಬಗ್ಗೆ ಏನು?" ಎಂದು ಟ್ರಂಪ್ ಕೇಳಿದಾಗ ಸಿಇಒ ಸತ್ಯ ನಡೆಲ್ಲಾ ಇದು ವರ್ಷಕ್ಕೆ 80 ಬಿಲಿಯನ್ ಡಾಲರ್ ವರೆಗೆ ಎಂದು ಹೇಳಿದರು. ಅದಕ್ಕೆ ಟ್ರಂಪ್ "ಒಳ್ಳೆಯದು, ತುಂಬಾ ಉತ್ತಮ ಎಂದು ಪ್ರತಿಕ್ರಿಯಿಸಿದರು.

ನಿನ್ನೆ ಡೊನಾಲ್ಡ್ ಟ್ರಂಪ್ ಅವರ ಅತಿಥಿಗಳ ಪಟ್ಟಿಯಲ್ಲಿ ಮುಖ್ಯವಾಗಿ ಎದ್ದುಕಾಣುತ್ತಿದ್ದುದು ಎಲೋನ್ ಮಸ್ಕ್ ಅವರ ಅನುಪಸ್ಥಿತಿ. ಒಂದು ಕಾಲದಲ್ಲಿ ಟ್ರಂಪ್ ಅವರ ಆಪ್ತ ಮಿತ್ರರಾಗಿದ್ದರು, ಅವರು ಸರ್ಕಾರದ ದಕ್ಷತೆಯ ಇಲಾಖೆಯನ್ನು ನಡೆಸುವ ಕಾರ್ಯವನ್ನು ವಹಿಸಿದ್ದರು. ಈ ವರ್ಷದ ಆರಂಭದಲ್ಲಿ ಮಸ್ಕ್ ಟ್ರಂಪ್ ಅವರ ಸಾರ್ವಜನಿಕ ಸಂಬಂಧ ಮುರಿದುಬಿತ್ತು.

ಬದಲಿಗೆ ಕೃತಕ ಬುದ್ಧಿಮತ್ತೆಯಲ್ಲಿ ಮಸ್ಕ್ ಅವರ ಪ್ರತಿಸ್ಪರ್ಧಿಗಳಲ್ಲಿ ಒಬ್ಬರಾದ ಓಪನ್ ಎಐನ ಸ್ಯಾಮ್ ಆಲ್ಟ್‌ಮನ್ ಇದ್ದರು. ಟ್ರಂಪ್ ಜಗತ್ತಿನಲ್ಲಿ ಬದಲಾಗುತ್ತಿರುವ ನಿಷ್ಠೆಯ ಮತ್ತೊಂದು ಪ್ರತಿಬಿಂಬವಾಗಿ, ಪಾವತಿ ಸಂಸ್ಕರಣಾ ಕಂಪನಿ Shift4 ನ್ನು ಸ್ಥಾಪಿಸಿದ ಜೇರೆಡ್ ಐಸಾಕ್‌ಮನ್ ಔತಣಕೂಟದಲ್ಲಿ ಹಾಜರಿದ್ದರು.

ನಾಸಾವನ್ನು ಮುನ್ನಡೆಸಲು ಟ್ರಂಪ್ ಆಯ್ಕೆ ಮಾಡಿದ ಐಸಾಕ್‌ಮನ್ ಮಸ್ಕ್ ಅವರ ಮಿತ್ರರಾಗಿದ್ದರು. ಆದರೆ ಟ್ರಂಪ್ ಅವರ ಮಾತಿನಲ್ಲಿ ಹೇಳುವುದಾದರೆ, ಅವರು "ಸಂಪೂರ್ಣವಾಗಿ ಡೆಮೋಕ್ರಾಟ್" ಆಗಿದ್ದರಿಂದ ಅವರ ನಾಮನಿರ್ದೇಶನವನ್ನು ಹಿಂತೆಗೆದುಕೊಳ್ಳಲಾಯಿತು.

ಟ್ರಂಪ್ ಫ್ಲೋರಿಡಾದ ಪಾಮ್ ಬೀಚ್‌ನಲ್ಲಿರುವ ಅವರ ಮಾರ್-ಎ-ಲಾಗೊ ಕ್ಲಬ್‌ನಲ್ಲಿ ಹೊರಾಂಗಣ ಸೆಟಪ್‌ಗೆ ಹೋಲುವ ಟೇಬಲ್‌ಗಳು, ಕುರ್ಚಿಗಳು ಮತ್ತು ಛತ್ರಿಗಳನ್ನು ಸ್ಥಾಪಿಸಿದ ರೋಸ್ ಗಾರ್ಡನ್‌ನಲ್ಲಿ ಔತಣಕೂಟ ನಡೆಯಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಪ್ರತಿಕೂಲ ಹವಾಮಾನದಿಂದಾಗಿ, ಅಧಿಕಾರಿಗಳು ಕಾರ್ಯಕ್ರಮವನ್ನು ವೈಟ್ ಹೌಸ್ ಸ್ಟೇಟ್ ಡೈನಿಂಗ್ ರೂಮ್‌ಗೆ ಸ್ಥಳಾಂತರಿಸಲು ನಿರ್ಧರಿಸಿದರು.

ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್ ಅಧ್ಯಕ್ಷತೆಯಲ್ಲಿ ನಡೆದ ಶ್ವೇತಭವನದ ಹೊಸ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಎಜುಕೇಶನ್ ಟಾಸ್ಕ್ ಫೋರ್ಸ್‌ನ ಮಧ್ಯಾಹ್ನದ ಸಭೆಯ ನಂತರ ಈ ಕಾರ್ಯಕ್ರಮ ನಡೆಯಿತು ಮತ್ತು ಕೆಲವು ತಾಂತ್ರಿಕ ನಾಯಕರು ಭಾಗವಹಿಸಿದ್ದರು.

ಔತಣಕೂಟದ ಅತಿಥಿಗಳ ಪಟ್ಟಿಯಲ್ಲಿ ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್; ಗೂಗಲ್ ಸಂಸ್ಥಾಪಕ ಸೆರ್ಗೆ ಬ್ರಿನ್; ಓಪನ್‌ಎಐ ಸಂಸ್ಥಾಪಕ ಗ್ರೆಗ್ ಬ್ರಾಕ್‌ಮನ್; ಒರಾಕಲ್ ಸಿಇಒ ಸಫ್ರಾ ಕ್ಯಾಟ್ಜ್; ಬ್ಲೂ ಒರಿಜಿನ್ ಸಿಇಒ ಡೇವಿಡ್ ಲಿಂಪ್; ಮೈಕ್ರಾನ್ ಸಿಇಒ ಸಂಜಯ್ ಮೆಹ್ರೋತ್ರಾ; ಟಿಐಬಿಸಿಒ ಸಾಫ್ಟ್‌ವೇರ್ ಅಧ್ಯಕ್ಷ ವಿವೇಕ್ ರಣದಿವೆ; ಪಳಂತಿರ್ ಕಾರ್ಯನಿರ್ವಾಹಕ ಶ್ಯಾಮ್ ಶಂಕರ್; ಸ್ಕೇಲ್ ಎಐ ಸಂಸ್ಥಾಪಕ ಅಲೆಕ್ಸಾಂಡರ್ ವಾಂಗ್; ಮತ್ತು ಶಿಫ್ಟ್ 4 ಪೇಮೆಂಟ್ಸ್ ಸಿಇಒ ಜೇರೆಡ್ ಐಸಾಕ್‌ಮನ್ ಇದ್ದರು ಎಂದು ಶ್ವೇತಭವನ ದೃಢಪಡಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಹಿಂದೂ ಬೆಳವಣಿಗೆ ದರ' ಧರ್ಮ ಕೆಣಕುವ ಒಂದು ಮಾರ್ಗವಾಗಿತ್ತು: ಪ್ರಧಾನಿ ಮೋದಿ

ದೆಹಲಿಯಲ್ಲಿ 2ನೇ ಮದುವೆಗೆ ಪತಿಯ ಸಿದ್ಧತೆ: ನ್ಯಾಯಕ್ಕಾಗಿ ಪ್ರಧಾನಿ ಮೋದಿ ಬೇಡಿದ ಪಾಕ್ ಮಹಿಳೆ!

'ಜನ ಸಾಮಾನ್ಯರಿಗಾಗಿ ಸುಪ್ರೀಂಕೋರ್ಟ್' : ಬಲವಾದ ಸಂದೇಶ ರವಾನಿಸಿದ CJI ಸೂರ್ಯಕಾಂತ್!

ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ 9 ವಿಕೆಟ್ ಭರ್ಜರಿ ಜಯ: 2-1 ಅಂತರದಲ್ಲಿ ಸರಣಿ ಕೈ ವಶ!

Puri Jagannath Temple: ಒಡಿಶಾ ಅಲ್ಲದೇ ಇತರ ಆರು ರಾಜ್ಯಗಳಲ್ಲಿ ಎಕರೆಗಟ್ಟಲೇ ಜಮೀನು! ಒಟ್ಟು ಎಷ್ಟಿದೆ ಗೊತ್ತಾ?

SCROLL FOR NEXT