ಮಸೂದ್ ಅಜರ್ 
ವಿದೇಶ

Op Sindoor: ಮಸೂದ್ ಅಜಾರ್ ಕುಟುಂಬ ಹೇಗೆ ಛಿದ್ರಗೊಂಡಿದೆ ಅನ್ನೋದಕ್ಕೆ ಈ Video ಸಾಕ್ಷಿ! JeM ಕಮಾಂಡರ್ ಹೇಳಿದ್ದು ಏನು?

ತಮ್ಮ ಅಡಗುಣತಾಣಗಳ ಮೇಲೆ ಭಾರತೀಯ ಸಶಸ್ತ್ರ ಪಡೆಗಳು ಹೇಗೆ ಪ್ರವೇಶಿಸಿ ದಾಳಿ ಮಾಡಿದವು ಎಂಬುದರ ಕುರಿತು JeM ಕಮಾಂಡರ್ ಮಸೂದ್ ಇಲ್ಯಾಸ್ ಕಾಶ್ಮೀರಿ ವಿವರಿಸುವ ವಿಡಿಯೋವೊಂದು ಆನ್ ಲೈನ್ ನಲ್ಲಿ ಭಾರಿ ವೈರಲ್ ಆಗುತ್ತಿದೆ.

ಇಸ್ಲಾಮಾಬಾದ್: ಭಾರತ‘ ಆಪರೇಷನ್ ಸಿಂಧೂರ'ಕಾರ್ಯಾಚರಣೆಯಡಿ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ (POK) ಹಲವಾರು ಭಯೋತ್ಪಾದಕ ಮೂಲಸೌಕರ್ಯಗಳನ್ನು ನಾಶಪಡಿಸಿದ ಕೆಲ ತಿಂಗಳುಗಳ ನಂತರ ಬಹವಾಲ್ಪುರ ಮೇಲಿನ ದಾಳಿಯಲ್ಲಿ ಭಯೋತ್ಪಾದಕ ಗುಂಪಿನ ಉನ್ನತ ಕಮಾಂಡರ್ ಮಸೂದ್ ಅಜರ್ ಅವರ ಕುಟುಂಬ ಛಿದ್ರ ಛಿದ್ರವಾಗಿರುವುದನ್ನು ಜೈಶ್-ಎ-ಮೊಹಮ್ಮದ್ (JEM) ಕಮಾಂಡರ್ ಒಪ್ಪಿಕೊಂಡಿದ್ದಾರೆ.

ತಮ್ಮ ಅಡಗುಣತಾಣಗಳ ಮೇಲೆ ಭಾರತೀಯ ಸಶಸ್ತ್ರ ಪಡೆಗಳು ಹೇಗೆ ಪ್ರವೇಶಿಸಿ ದಾಳಿ ಮಾಡಿದವು ಎಂಬುದರ ಕುರಿತು JeM ಕಮಾಂಡರ್ ಮಸೂದ್ ಇಲ್ಯಾಸ್ ಕಾಶ್ಮೀರಿ ವಿವರಿಸುವ ವಿಡಿಯೋವೊಂದು ಆನ್ ಲೈನ್ ನಲ್ಲಿ ಭಾರಿ ವೈರಲ್ ಆಗುತ್ತಿದೆ.

"ಭಯೋತ್ಪಾದನೆಯನ್ನು ಅಪ್ಪಿಕೊಂಡು, ಈ ದೇಶದ ಗಡಿಗಳನ್ನು ರಕ್ಷಿಸಲು ನಾವು ದೆಹಲಿ, ಕಾಬೂಲ್ ಮತ್ತು ಕಂದಹಾರ್‌ನಲ್ಲಿ ಹೋರಾಡಿದ್ದೇವೆ. ಎಲ್ಲವನ್ನೂ ತ್ಯಾಗ ಮಾಡಿದ ನಂತರ, ಮೇ 7 ರಂದು ಮೌಲಾನಾ ಮಸೂದ್ ಅಜರ್‌ನ ಕುಟುಂಬವನ್ನು ಬಹವಾಲ್ಪುರ ಭಾರತೀಯ ಪಡೆಗಳು ಛಿದ್ರಗೊಳಿಸಿದವು" ಎಂದು ಕಾಶ್ಮೀರಿ ಉರ್ದುವಿನಲ್ಲಿ ಹೇಳಿದ್ದಾನೆ. ಬಂದೂಕು ಹಿಡಿದ ಹಲವು ಭದ್ರತಾ ಸಿಬ್ಬಂದಿ ಆತನನ್ನು ಸುತ್ತುವರೆದಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸಶಸ್ತ್ರ ಪಡೆಗಳು 'ಆಪರೇಷನ್ ಸಿಂಧೂರ' ಕಾರ್ಯಾಚರಣೆಯಡಿ ಜೈಶ್-ಎ-ಮೊಹಮ್ಮದ್ (JeM) ಮತ್ತು ಲಷ್ಕರ್-ಎ-ತೊಯ್ಬಾ (LeT) ಉಗ್ರ ಸಂಘಟನೆಗಳ ಮೂಲಸೌಕರ್ಯವನ್ನು ಗುರಿಯಾಗಿಟ್ಟುಕೊಂಡು ಪಾಕಿಸ್ತಾನ ಮತ್ತು ಪಿಒಕೆ ಒಳಗಿನ ಒಂಬತ್ತು ಭಯೋತ್ಪಾದಕ ಕೇಂದ್ರಗಳ ಮೇಲೆ ನಡೆಸಿ ಧ್ವಂಸಗೊಳಿಸದ್ದವು. ಬಹವಾಲ್ಪುರ್, ಕೋಟ್ಲಿ ಮತ್ತು ಮುರಿಡ್ಕೆಯಲ್ಲಿನ ಸ್ಥಳಗಳು ಸೇರಿದಂತೆ ಒಂಬತ್ತು ಉಗ್ರರ ಕೇಂದ್ರಗಳು ಹಾನಿಯಾಗಿರುವುದಾಗಿ ಪಾಕಿಸ್ತಾನ ಕೂಡಾ ಒಪ್ಪಿಕೊಂಡಿತ್ತು.

ಪಾಕಿಸ್ತಾನದ 12 ನೇ ಅತಿದೊಡ್ಡ ನಗರವಾದ ಬಹವಾಲ್ಪುರ ಲಾಹೋರ್‌ನಿಂದ ಸುಮಾರು 400 ಕಿಮೀ ದೂರದಲ್ಲಿದೆ. ಇದು ಉಸ್ಮಾನ್-ಒ-ಅಲಿ ಕ್ಯಾಂಪಸ್ ಎಂದೂ ಕರೆಯಲ್ಪಡುವ ಜಾಮಿಯಾ ಮಸೀದಿ ಸುಭಾನ್ ಅಲ್ಲಾ ಜೆಎಂ ಉಗ್ರ ಸಂಘಟನೆಯ ಕಾರ್ಯಾಚರಣೆಯ ಕೇಂದ್ರವಾಗಿದೆ. ಮಸೂದ್ ಅಜಾರ್ ನನ್ನು 2000ದಲ್ಲಿ ಜಾಗತಿಕ ಭಯೋತ್ಪಾದಕ ಎಂದು ವಿಶ್ವಸಂಸ್ಥೆ ಘೋಷಿಸಿತ್ತು. ಆಪರೇಷನ್ ಸಿಂಧೂರ ನಂತರ ತನ್ನ ಕುಟುಂಬದ 10 ಜನರು ಸಾವನ್ನಪ್ಪಿರುವುದಾಗಿ ಮಸೂದ್ ಅಜಾರ್ ಹೇಳಿರುವುದಾಗಿ ಪಾಕಿಸ್ತಾನ ಮಾಧ್ಯಮಗಳು ವರದಿ ಮಾಡಿದ್ದವು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

UKP 3ನೇ ಹಂತ: ನೀರಾವರಿ ಭೂಮಿಗೆ 40 ಲಕ್ಷ ರೂ. ಪರಿಹಾರ ನೀಡಲು ಸಚಿವ ಸಂಪುಟ ನಿರ್ಧಾರ

Devil ಸಿನಿಮಾ ಚಿತ್ರೀಕರಣದ ವೇಳೆ ಬೆನ್ನು ನೋವಿನಿಂದ ನೆಲದ ಮೇಲೆ ಬಿದ್ದು ನರಳಾಡಿದ Darshan: Video ನೋಡಿ ರೊಚ್ಚಿಗೆದ್ದ DBoss ಫ್ಯಾನ್ಸ್!

Asia Cup 2025: ಟೂರ್ನಿಯಿಂದ ಪಾಕಿಸ್ತಾನ ಹೊರನಡೆದರೆ ಏನಾಗಬಹುದು? ಯಾರಿಗೆ ನಷ್ಟ!

Yusuf Pathan 'ಭೂಗಳ್ಳ': ಸೆಲೆಬ್ರಿಟಿ ಆದರೇನು ಕ್ರಮಕೈಗೊಳ್ಳಿ; ಗುಜರಾತ್ ಹೈಕೋರ್ಟ್‌ನ ಮಹತ್ವದ ತೀರ್ಪು

Kothalavadi : ನಿರ್ಮಾಪಕಿ ರಾಕಿಂಗ್ ಸ್ಟಾರ್ 'ಯಶ್ ತಾಯಿ' ಪುಷ್ಪ ವಿರುದ್ಧ ಸಂಭಾವನೆ ನೀಡದ ಆರೋಪ!

SCROLL FOR NEXT