ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ದುಷ್ಕರ್ಮಿ 
ವಿದೇಶ

Video: ಶಾಪಿಂಗ್ ಮಾಡುತ್ತಿದ್ದ ಮಹಿಳೆಗೆ ಪ್ಯಾಂಟ್ ಬಿಚ್ಚಿ ಮರ್ಮಾಂಗ ಸ್ಪರ್ಶ; ಕೀಚಕನ ಸೆರೆಗೆ ವ್ಯಾಪಕ ಬಲೆ

ಲಾಸ್ ಏಂಜಲೀಸ್​ನ ಸೂಪರ್ ಮಾರ್ಕೆಟ್​ನಲ್ಲಿ ಈ ಘಟನೆ ನಡೆದಿದ್ದು, ದುಷ್ಕರ್ಮಿ ತನ್ನ ಪ್ಯಾಂಟ್ ಸಡಿಲಿಸಿ ಗುಪ್ತಾಂಗವನ್ನು ಯುವತಿಯೊಬ್ಬಳ ಕಿವಿಗೆ ತಾಗಿಸಿರುವ ವಿಡಿಯೋ ವೈರಲ್ ಆಗುತ್ತಿದೆ.

ಲಾಸ್ ಎಂಜಲೀಸ್: ಸೂಪರ್ ಮಾರ್ಕೆಟ್ ನಲ್ಲಿ ಶಾಪಿಂಗ್ ಮಾಡುತ್ತಿದ್ದ ಮಹಿಳೆ ಬಳಿ ಬಂದ ದುಷ್ಕರ್ಮಿಯೋರ್ವ ತನ್ನ ಪ್ಯಾಂಟ್ ಬಿಚ್ಚಿ ಆಕೆಗೆ ತನ್ನ ಮರ್ಮಾಂಗ ಸ್ಪರ್ಶ ಮಾಡಿ ವಿಕೃತಿ ಮೆರೆದಿರುವ ವಿಡಿಯೋವೊಂದು ವ್ಯಾಪಕ ವೈರಲ್ ಆಗುತ್ತಿದೆ.

ಲಾಸ್ ಏಂಜಲೀಸ್​ನ ಸೂಪರ್ ಮಾರ್ಕೆಟ್​ನಲ್ಲಿ ಈ ಘಟನೆ ನಡೆದಿದ್ದು, ದುಷ್ಕರ್ಮಿ ತನ್ನ ಪ್ಯಾಂಟ್ ಸಡಿಲಿಸಿ ಗುಪ್ತಾಂಗವನ್ನು ಯುವತಿಯೊಬ್ಬಳ ಕಿವಿಗೆ ತಾಗಿಸಿರುವ ವಿಡಿಯೋ ವೈರಲ್ ಆಗುತ್ತಿದೆ.

ದುಷ್ಕರ್ಮಿಯ ಬಂಧನಕ್ಕೆ ಲಾಸ್ ಎಂಜಲೀಸ್ ಪೊಲೀಸರು ಬಲೆ ಬೀಸಿದ್ದು, ವ್ಯಾಪಕ ಶೋಧ ನಡೆಸಿದ್ದಾರೆ.

ಲಾಸ್ ಏಂಜಲೀಸ್ ಕೌಂಟಿಯ ಹೋಲ್ ಫುಡ್ಸ್ ಮಾರುಕಟ್ಟೆಯಲ್ಲಿ ಯುವತಿಯೊಬ್ಬಳುಮನೆಗೆ ಬೇಕಾದ ವಸ್ತುಗಳನ್ನು ಹುಡುಕುತ್ತಿದ್ದಾಗ ಹಿಂದಿನಿಂದ ಬಂದ ಈ ದುಷ್ಕರ್ಮಿ ಆಕೆಗೆ ನೆರವು ನೀಡುವ ನೆಪದಲ್ಲಿ ವಿಕೃತಿ ಮೆರೆದಿದ್ದಾನೆ.

ಪ್ಯಾಂಟ್ ಜಿಪ್ ತೆರೆದು ತನ್ನ ಮರ್ಮಾಂಗವನ್ನು ಹೊರಕ್ಕೆ ತೆರೆದು ಆಕೆಯ ಕಿವಿಗೆ ಗುಪ್ತಾಂಗವನ್ನು ತಾಕಿಸಿದ್ದಾನೆ. ಕೂಡಲೇ ಎಚ್ಚೆತ್ತುಕೊಂಡ ಯುವತಿ ಅಲ್ಲಿಂದ ಓಡಿ ಹೋಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ. ಅಧಿಕಾರಿಗಳು ಬರುವಷ್ಟರಲ್ಲಿ ದುಷ್ಕರ್ಮಿ ಪರಾರಿಯಾಗಿದ್ದ.

ಪೊಲೀಸ್ ಮೂಲಗಳ ಪ್ರಕಾರ ಈ ಘಟನೆ ಮಾರ್ಚ್ 23 ರಂದು ನಡೆದಿದ್ದು, ಆವರಣದಲ್ಲಿ ಅಳವಡಿಸಲಾದ ಸಿಸಿಟಿವಿಯಲ್ಲಿ ವಿಡಿಯೋ ಸೆರೆಯಾಗಿದೆ.

ಮೊಬೈಲ್ ನಲ್ಲಿ ವಿಡಿಯೋ ರೆಕಾರ್ಡ್

ಇನ್ನೂ ಆಘಾತಕಾರಿ ಎಂದರೆ ಆತ ಕೃತ್ಯ ಎಸಗುವ ಸಮಯದಲ್ಲಿ ಆತನ ಕೈಯಲ್ಲಿ ಫೋನ್ ಕೂಡ ಇತ್ತು. ತನ್ನ ಮೊಬೈಲ್ ನಲ್ಲಿ ತನ್ನ ಕುಕೃತ್ಯದ ವಿಡಿಯೋ ರೆಕಾರ್ಡ್ ಮಾಡಿಕೊಳ್ಳುತ್ತಿದ್ದ ಎಂದು ಸಂತ್ರಸ್ಥ ಯುವತಿ ತಿಳಿಸಿದ್ದಾಳೆ.

ಬಂಧನಕ್ಕೆ ವ್ಯಾಪಕ ಬಲೆ

ಆ ವ್ಯಕ್ತಿಯ ವಯಸ್ಸು 30ರ ಆಸುಪಾಸಿರಬಹುದು ಎಂದು ಅಂದಾಜಿಸಲಾಗಿದೆ. ಗಡ್ಡ, ನೀಲಿ ಬಣ್ಣದ ಶರ್ಟ್​ ಹರಿದ ಜೀನ್ಸ್​ ತೊಟ್ಟಿದ್ದ.ದೃಶ್ಯಾವಳಿಗಳು ಮತ್ತು ಲಭ್ಯವಿರುವ ಇತರ ಸುಳಿವುಗಳನ್ನು ಬಳಸಿಕೊಂಡು ಆರೋಪಿಯನ್ನು ಗುರುತಿಸಲು ಮತ್ತು ಪತ್ತೆಹಚ್ಚಲು ಅಧಿಕಾರಿಗಳು ಈಗ ಕೆಲಸ ಮಾಡುತ್ತಿದ್ದಾರೆ. ಅಂಗಡಿಯ ಆಡಳಿತ ಮಂಡಳಿಯು ತನಿಖೆಗೆ ಸಹಕರಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ತಮಿಳುನಾಡಿಗೆ ಕಾವೇರಿ, ಕನ್ನಡಿಗರಿಗೆ ಮತ್ತೆ ಚೊಂಬು: ನಿತ್ಯ 9,000 ಕ್ಯೂಸೆಕ್ ನೀರು ಬಿಡಲು CWRC ಸೂಚನೆ!

Biggboss Kannada ಅಗ್ನಿಪರೀಕ್ಷೆ: ಗೆಟ್ ಔಟ್, ಇದೆಲ್ಲಾ ಬೇಡ ಬ್ರೇ; ವಿನಯ್ ಗೌಡಗೆ ಸ್ಪರ್ಧಿ ತಿರುಗೇಟು, Video ವೈರಲ್!

SIR ಮೊದಲ ಕರಡು ಮತದಾರರ ಪಟ್ಟಿ ಪ್ರಕಟ: 1 ಕೋಟಿ, 7 ಲಕ್ಷ ಮತದಾರರ ಹೆಸರು ಡಿಲೀಟ್, ಬೆಂಗಳೂರಲ್ಲೇ ಅತಿ ಹೆಚ್ಚು!

ಕೊಲಂಬೊ ಟೆಸ್ಟ್‌ನಲ್ಲಿ ಭಾರತದ ಅಬ್ಬರ: 503/9ಕ್ಕೆ ಇನ್ನಿಂಗ್ಸ್ ಡಿಕ್ಲೇರ್, ಲಂಕಾ ಇನ್ನಿಂಗ್ಸ್ ಗೆ ಮಳೆ ಅಡ್ಡಿ

ಬೆಂಗಳೂರಿನಲ್ಲಿ ಜಪಾನಿಗನ ಬಂಧನ: 19 ದಿನ ಜೈಲುವಾಸ, 7 ವರ್ಷಗಳ ಬಳಿಕ ಕರ್ನಾಟಕ ಸರ್ಕಾರದಿಂದ 75 ಸಾವಿರ ಪರಿಹಾರ!