ಡೊನಾಲ್ಡ್ ಟ್ರಂಪ್ 
ವಿದೇಶ

“Tuesday, 8:00 P.M. Eastern Time"!: ಇರಾನ್'ಗೆ ಮತ್ತೊಂದು ಎಚ್ಚರಿಕೆ ಕೊಟ್ಟ ಟ್ರಂಪ್; ಸರ್ವನಾಶದ ಸುಳಿವು..!

ಮಂಗಳವಾರ ಸಂಜೆ (ಅಮೆರಿಕ ಕಾಲಮಾನ ರಾತ್ರಿ 8:00 ಗಂಟೆ, ಅಂದರೆ ಭಾರತೀಯ ಕಾಲಮಾನ ಬುಧವಾರ ಬೆಳಗ್ಗೆ) ಯೊಳಗೆ ಜಲಮಾರ್ಗವನ್ನು ಸಾಗರ ಸಂಚಾರಕ್ಕೆ ಮುಕ್ತಗೊಳಿಸಬೇಕು. ಇಲ್ಲದಿದ್ದರೆ ಇರಾನ್ ಅನ್ನು ನರಕವನ್ನಾಗಿಸುತ್ತೇವೆ.

ಅಮೆರಿಕ-ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧದ ಕಾರ್ಮೋಡ ಮತ್ತಷ್ಟು ಬಿಗಡಾಯಿಸಿದೆ. 'ಹಾರ್ಮುಜ್ ಜಲಸಂಧಿ' (Strait of Hormuz) ವಿಚಾರವಾಗಿ ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷ ತಾರಕಕ್ಕೇರಿದ್ದು, ಇರಾನ್‌ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮತ್ತೊಂಡು ಕಠಿಣ ಎಚ್ಚರಿಕೆ ನೀಡಿದ್ದಾರೆ.

ಭಾನುವಾರ (ಏಪ್ರಿಲ್ 5) ಇರಾನ್ ವಿರುದ್ಧ ಅತ್ಯಂತ ತೀಕ್ಷ್ಣ ಹಾಗೂ ಆಕ್ರಮಣಕಾರಿ ಪದಗಳನ್ನು ಬಳಸಿದ್ದ ಡೊನಾಲ್ಡ್ ಟ್ರಂಪ್ ಅವರು, ಹಾರ್ಮುಜ್ ಜಲಸಂಧಿಯನ್ನು ಕೂಡಲೇ ತೆರೆಯುವಂತೆ ಗಡುವು ನೀಡಿದ್ದರು.

ಒಂದು ವೇಳೆ ಇರಾನ್ ನಮ್ಮ ಜೊತೆ ಒಪ್ಪಂದಕ್ಕೆ ಬರದಿದ್ದರೆ, ಆ ಇಡೀ ದೇಶವನ್ನೇ ನಾವು ಸರ್ವನಾಶ ಮಾಡಬಲ್ಲೆವು ಎಂದು ಹೇಳಿದ್ದರು. ಅಲ್ಲದೆ, ಇರಾನ್‌ನ ವಿದ್ಯುತ್ ಸ್ಥಾವರಗಳು ಮತ್ತು ಸೇತುವೆಗಳ ಮೇಲೆ ದಾಳಿ ಮಾಡುವ ಮುನ್ಸೂಚನೆಯನ್ನೂ ನೀಡಿದ್ದರು.

ಇದೀಗ 'ಟ್ರುತ್' (Truth) ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಮಾಡಿರುವ ಟ್ರಂಪ್, ಇರಾನ್ ಮೇಲಿನ ಸಂಭಾವ್ಯ ದಾಳಿಯ ಸಮಯವನ್ನು ಹಂಚಿಕೊಂಡಿದ್ದಾರೆ.

ಮಂಗಳವಾರ ಸಂಜೆ (ಅಮೆರಿಕ ಕಾಲಮಾನ ರಾತ್ರಿ 8:00 ಗಂಟೆ, ಅಂದರೆ ಭಾರತೀಯ ಕಾಲಮಾನ ಬುಧವಾರ ಬೆಳಗ್ಗೆ) ಯೊಳಗೆ ಜಲಮಾರ್ಗವನ್ನು ಸಾಗರ ಸಂಚಾರಕ್ಕೆ ಮುಕ್ತಗೊಳಿಸಬೇಕು. ಇಲ್ಲದಿದ್ದರೆ ಇರಾನ್ ಅನ್ನು ನರಕವನ್ನಾಗಿಸುತ್ತೇವೆ ಎಂದು ಎಚ್ಚರಿಸಿದ್ದಾರೆ.

ರಾಜಿ ಮಾಡಿಕೊಳ್ಳಲು ಟೆಹ್ರಾನ್‌ಗೆ ಸಾಕಷ್ಟು ಸಮಯವಿದೆ. ಹಾಗೆ ಮಾಡದಿದ್ದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಗುಡುಗಿದ್ದಾರೆ.

ಟ್ರಂಪ್ ಬೆದರಿಕೆಗೆ ಇರಾನ್ ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಾಕರ್ ಖಾಲಿಬಾಫ್ 'ಎಕ್ಸ್' (X) ಖಾತೆಯಲ್ಲಿ ತಿರುಗೇಟು ನೀಡಿದ್ದಾರೆ.

ಟ್ರಂಪ್ ಅವರೇ, ನಿಮ್ಮ ಬೇಜವಾಬ್ದಾರಿ ಹೆಜ್ಜೆಗಳು ಅಮೆರಿಕವನ್ನು ನರಕಕ್ಕೆ ತಳ್ಳುತ್ತಿವೆ. ಇಸ್ರೇಲ್ ಪ್ರಧಾನಿ ನೆತನ್ಯಾಹು ಅವರ ಆದೇಶಗಳನ್ನು ಪಾಲಿಸುತ್ತಿರುವ ನೀವು ಇಡೀ ಮಧ್ಯಪ್ರಾಚ್ಯ ವಲಯವನ್ನು ಬೆಂಕಿಗೆ ದೂಡುತ್ತಿದ್ದೀರಿ. ಯುದ್ಧಾಪರಾಧಗಳಿಂದ ನಿಮಗೆ ಏನೂ ಸಿಗುವುದಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.

ಉಭಯ ರಾಷ್ಟ್ರಗಳ ಉದ್ನಿಗ್ನತೆ ಸಾಮಾನ್ಯ ನಾಗರಿಕರ ಬದುಕಿನ ಮೇಲೆ ನೇರ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಂಭೀರ ಚಿಂತೆಗೆ ಕಾರಣವಾಗಿದೆ.

ಅಮೆರಿಕಾ ಬೆದರಿಗೆ ನಡುವಲ್ಲೇ ಇರಾನ್ ಕಠಿಣ ನಿಲುವು ತಾಳಿದ್ದು, ಅಮೆರಿಕಾದ ಪ್ರತೀ ರಕ್ಷಣಾ ಕಾರ್ಯಾಚರಣೆಯನ್ನೂ ವಿಫಲಗೊಳಿಸಿದ್ದೇವೆ ಎಂದು ಹೇಳಿದೆ.

ಅಮೆರಿಕಾ F-15 ಯುದ್ಧವಿಮಾನ ಪತನಗೊಂಡ ಬಳಿಕ ಪೈಲಟ್ ರಕ್ಷಣೆಗೆ ನಡೆಸಿದ ಕಾರ್ಯಾಚರಣೆ ಸಂಪೂರ್ಣ ವಿಫಲವಾಗಿದೆ ಎಂದು ಇರಾನ್ ಸೇನೆ ಘೋಷಿಸಿದೆ.

ಈ ಸಂದರ್ಭದಲ್ಲಿ 1980ರ “Operation Eagle Claw” ಎಂಬ ಅಮೆರಿಕಾದ ಸೇನಾ ಕಾರ್ಯಾಚರಣೆಯನ್ನು ಸ್ಮರಸಿ, ಇತಿಹಾಸ ಮರುಕಳಿಸುತ್ತಿದೆ ಎಂದು ವ್ಯಂಗ್ಯವಾಡಿದೆ.

ಇದರ ಜೊತೆಗೆ, ಇರಾನ್ ಸಂಯುಕ್ತ ಕಮಾಂಡ್ ಮತ್ತೊಂದು ಎಚ್ಚರಿಕೆ ನೀಡಿದ್ದು, ಅಮೆರಿಕಾ ಅಥವಾ ಇಸ್ರೇಲ್ ಇರಾನ್‌ನ ನಾಗರಿಕ ಮೂಲಸೌಕರ್ಯಗಳ ಮೇಲೆ ದಾಳಿ ನಡೆಸಿದರೆ, ನಾವು ಇನ್ನಷ್ಟು ಭೀಕರ ಪ್ರತಿದಾಳಿ ನಡೆಸುತ್ತೇವೆಂದು ಘೋಷಿಸಿದೆ.

ಇಸ್ರೇಲ್ ದಾಳಿ ನಂತರ ಗಲ್ಫ್ ದೇಶಗಳು ಮತ್ತು ಇಸ್ರೇಲ್‌ನ ತೈಲ ಮತ್ತು ಮೂಲಸೌಕರ್ಯಗಳ ಮೇಲೆ ದಾಳಿ ನಡೆಸಿದ್ದೇವೆ ಎಂದು ಇರಾನ್ ಸರ್ಕಾರ ಹೇಳಿಕೊಂಡಿದೆ.

ನೀವು ಮತ್ತೆ ನಾಗರಿಕ ಸೌಲಭ್ಯಗಳನ್ನು ಗುರಿಯಾಗಿಸಿದರೆ, ನಮ್ಮ ಪ್ರತಿಕ್ರಿಯೆ ಇನ್ನಷ್ಟು ಭೀಕರವಾಗಿರುತ್ತದೆ” ಎಂದು ಎಚ್ಚರಿಸಿದೆ.

ಫೆಬ್ರವರಿ 28ರಂದು ಆರಂಭವಾದ ಅಮೆರಿಕಾ-ಇಸ್ರೇಲ್ ಸಂಯುಕ್ತ ದಾಳಿಯಿಂದ ಈ ಸಂಘರ್ಷ ಪ್ರಾರಂಭವಾಗಿದ್ದು, ಈಗಾಗಲೇ ಸಾವಿರಾರು ಮಂದಿ ಸಾವನ್ನಪ್ಪಿದ್ದಾರೆ. ಜಾಗತಿಕ ಮಾರುಕಟ್ಟೆಗಳು ಅಸ್ಥಿರಗೊಂಡಿದ್ದು, ಹಾರ್ಮುಜ್ ಮಾರ್ಗದ ಅಡಚಣೆಯಿಂದ ತೈಲ ಸರಬರಾಜು ಕುಂಠಿತವಾಗಿದೆ. ಇದರ ಪರಿಣಾಮವಾಗಿ ಇಂಧನದ ಬೆಲೆ ಏರಿಕೆ ಕಂಡುಬಂದಿದ್ದು, ಅನೇಕ ದೇಶಗಳ ಆರ್ಥಿಕತೆ ಮೇಲೆ ಒತ್ತಡ ಹೆಚ್ಚಾಗಿದೆ.

ಈಗ “Tuesday 8 PM” ಎಂಬ ಟ್ರಂಪ್‌ ಅವರ ಸಂದೇಶವು ಯುದ್ಧದ ದಿಕ್ಕನ್ನು ನಿರ್ಧರಿಸುವ ಪ್ರಮುಖ ಘಟ್ಟವೆಂದು ಹೇಳಲಾಗುತ್ತಿದ್ದು, ಒಪ್ಪಂದದ ಘೋಷಣೆಯಾಗುತ್ತದೆಯೇ ಅಥವಾ ಭೀಕರ ದಾಳಿ ಆರಂಭವಾಗುತ್ತದೆಯೇ ಎಂಬ ಆತಂಕ ಜಗತ್ತಿನಾದ್ಯಂತ ಹೆಚ್ಚುತ್ತಿದೆ. ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಗರಿಷ್ಠ ಮಟ್ಟ ತಲುಪಿದ್ದು, ಯಾವುದೇ ಕ್ಷಣದಲ್ಲಿ ಪರಿಸ್ಥಿತಿ ಸಂಪೂರ್ಣ ಯುದ್ಧದ ರೂಪ ಪಡೆಯುವ ಸಾಧ್ಯತೆ ತೀವ್ರವಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್ ಮಾಡಿ ಟ್ರ್ಯಾಪ್​ ಮಾಡಲು ಯತ್ನ': ಡಿ ಕೆ ಶಿವಕುಮಾರ್ ಸ್ಫೋಟಕ ಆರೋಪ; Video

'Evil Dead': ನಟ ನಾನಾ ಪಾಟೇಕರ್ ಸಾವು, #MeToo ಆರೋಪ ಮಾಡಿದ್ದ ನಟಿ ತನುಶ್ರೀ ದತ್ತಾ ಹೇಳಿದ್ದೇನು? ವಿಚಿತ್ರ ಪೋಸ್ಟ್!

'SIR' ವಿರುದ್ಧ ಭಾರೀ ಪ್ರತಿಭಟನೆ: ಜ್ಞಾನೇಶ್ ಕುಮಾರ್ Z+ ಭದ್ರತೆ ಮತ್ತಷ್ಟು ಹೆಚ್ಚಿಸಿದ ಕೇಂದ್ರ ಸರ್ಕಾರ!

ಚಲಿಸುತ್ತಿದ್ದ ಬಸ್`ನಲ್ಲೇ ವೃದ್ಧನ 'ಮೈ ಬಿಸಿ ಏರಿಸಿ', 1 ಕೋಟಿ ರೂ ಮೌಲ್ಯದ ಚಿನ್ನ ಎಗರಿಸಿದ 'ಖತರ್ನಾಕ್ ಕಳ್ಳಿಯರು', Video

ಕಾವೇರಿ ವಿಚಾರದಲ್ಲಿ ಕರ್ನಾಟಕಕ್ಕೆ CWRC ಮತ್ತೆ ಶಾಕ್: ತಮಿಳುನಾಡಿಗೆ ನಿತ್ಯ 3,000 ಕ್ಯೂಸೆಕ್ ನೀರು ಹರಿಸಲು ಸೂಚನೆ