ಸಂಗ್ರಹ ಚಿತ್ರ 
ವಿದೇಶ

300ಕ್ಕೂ ಹೆಚ್ಚು ಪತ್ರಕರ್ತರ ಉದ್ಯೋಗಕ್ಕೆ ಕತ್ತರಿ: ಆಕ್ರೋಶ ಬೆನ್ನಲ್ಲೇ The Washington Post ಸಿಇಒ ವಿಲ್ ಲೂಯಿಸ್ ರಾಜೀನಾಮೆ

ಸುಮಾರು 300ಕ್ಕೂ ಹೆಚ್ಚು ಪತ್ರಕರ್ತರನ್ನು (ಸುಮಾರು ಮೂರನೇ ಒಂದು ಭಾಗದಷ್ಟು ಸಿಬ್ಬಂದಿ) ಕೆಲಸದಿಂದ ತೆಗೆದ ಹಿನ್ನೆಲೆಯಲ್ಲಿ ಆಕ್ರೋಶಗಳು ವ್ಯಕ್ತವಾಗಿದ್ದವು. ಇದರ ಬೆನ್ನಲ್ಲೇ ವಿಲ್ ಲೂಯಿಸ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ವಾಷಿಂಗ್ಟನ್: ದಿ ವಾಷಿಂಗ್ಟನ್ ಪೋಸ್ಟ್‌ನ ಸಿಇಒ ಮತ್ತು ಪ್ರಕಾಶಕ ವಿಲ್ ಲೂಯಿಸ್ (Will Lewis) ಫೆಬ್ರವರಿ 7, 2026 ರಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಸುಮಾರು 300ಕ್ಕೂ ಹೆಚ್ಚು ಪತ್ರಕರ್ತರನ್ನು (ಸುಮಾರು ಮೂರನೇ ಒಂದು ಭಾಗದಷ್ಟು ಸಿಬ್ಬಂದಿ) ಕೆಲಸದಿಂದ ತೆಗೆದ ಹಿನ್ನೆಲೆಯಲ್ಲಿ ಆಕ್ರೋಶಗಳು ವ್ಯಕ್ತವಾಗಿದ್ದವು. ಇದರ ಬೆನ್ನಲ್ಲೇ ವಿಲ್ ಲೂಯಿಸ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆಂದು ತಿಳಿದುಬಂದಿದೆ.

ಪತ್ರಿಕೆಯ ಸುಸ್ಥಿರ ಭವಿಷ್ಯವನ್ನು ಖಚಿತಪಡಿಸಿಕೊಳ್ಳಲು ಇದು ಸರಿಯಾದ ಸಮಯ ಎಂದು ಹೇಳಿದ್ದ ವಿಲ್ ಲೂಯಿಸ್ ಅವರು, ಪತ್ರಿಕೆಯ 300ಕ್ಕೂ ಹೆಚ್ಚು ಪತ್ರಕರ್ತರನ್ನು ಉದ್ಯೋಗದಿಂದ ತೆಗೆದಿದ್ದರು. ಇದರ ಬೆನ್ನಲ್ಲೇ ಆಡಳಿತ ವೈಖರಿ ಬಗ್ಗೆ ಸಿಬ್ಬಂದಿ ಹಾಗೂ ಓದುಗರಿಂದ ತೀವ್ರ ಆಕ್ರೋಶಗಳು ವ್ಯಕ್ತವಾಗಿದ್ದವು.

ಈ ಬೆಳವಣಿಗೆಯ ಬೆನ್ನಲ್ಲೇ ಲೂಯಿಸ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಲೂಯಿಸ್ ಅವರ ರಾಜೀನಾಮೆಯು ತಕ್ಷಣದಿಂದಲೇ ಜಾರಿಗೆ ಬಂದಿದ್ದು, ಅವರ ಸ್ಥಾನಕ್ಕೆ ಪತ್ರಿಕೆಯ ಮುಖ್ಯ ಹಣಕಾಸು ಅಧಿಕಾರಿ (CFO) ಜೆಫ್ ಡೊನೊಫ್ರಿಯೊ (Jeff D'Onofrio) ಅವರನ್ನು ಹಂಗಾಮಿ ಸಿಇಒ ಆಗಿ ನೇಮಿಸಲಾಗಿದೆ.

2024 ರಲ್ಲಿ ಅಧಿಕಾರ ವಹಿಸಿಕೊಂಡಿದ್ದ ಲೂಯಿಸ್ ಅವರ ಎರಡು ವರ್ಷಗಳ ಅವಧಿಯು ಹಲವಾರು ವಿವಾದಗಳು ಮತ್ತು ಆರ್ಥಿಕ ನಷ್ಟಗಳನ್ನು ಸರಿಪಡಿಸುವ ಪ್ರಯತ್ನಗಳ ನಡುವೆ ಸಾಗಿತ್ತು. ಜೆಫ್ ಡೊನೊಫ್ರಿಯೊ ಈ ಹಿಂದೆ Tumblr ನ ಸಿಇಒ ಆಗಿ ಕಾರ್ಯನಿರ್ವಹಿಸಿದ್ದರು.

ಏತನ್ಮಧ್ಯೆ ವಾಷಿಂಗ್ಟನ್ ಪೋಸ್ಟ್ ಗಿಲ್ಡ್ (Union) ವಿಲ್ ಲೂಯಿಸ್ ಅವರ ರಾಜೀನಾಮೆಯನ್ನು ಸ್ವಾಗತಿಸಿದ್ದು, ಇತ್ತೀಚೆಗೆ ಮಾಡಲಾದ 300ಕ್ಕೂ ಹೆಚ್ಚು ಸಿಬ್ಬಂದಿಗಳ ವಜಾವನ್ನು ಕೂಡಲೇ ರದ್ದುಗೊಳಿಸಬೇಕು ಅಥವಾ ಪತ್ರಿಕೆಯನ್ನು ಸರಿಯಾದ ಹೂಡಿಕೆದಾರರಿಗೆ ಮಾರಾಟ ಮಾಡಬೇಕು ಎಂದು ಬೆಜೋಸ್ ಅವರ ಮೇಲೆ ಒತ್ತಡ ಹೇರುತ್ತಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Hormuz ಅಷ್ಟೇ ಅಲ್ಲ.. ಬಾಲ ಬಿಚ್ಚಿದ್ರೆ Bab al mandeb ಜಲಸಂಧಿಯನ್ನೂ ಮುಚುತ್ತೇವೆ: ಹೌತಿಗಳು ಬರ್ತಾರೆ ಎಂದು Iran ಎಚ್ಚರಿಕೆ

ಮತ್ತೊಂದು F-18 ಫೈಟರ್ ಜೆಟ್ ಹೊಡೆದುರುಳಿಸಿದ್ದೇವೆ ಎಂದ Iran, ಬೆಚ್ಚಿದ ಅಮೆರಿಕದಿಂದ Fact-Check

ಉಗ್ರರೊಂದಿಗೆ ನಂಟು ಆರೋಪ: ಬಳ್ಳಾರಿ ಯುವಕ ಸೇರಿ ದೇಶಾದ್ಯಂತ 12 ಮಂದಿ ಬಂಧನ

ಯುದ್ದದಲ್ಲಿ ಗೆದ್ದು ಕೂಡ ಸೋಲುತ್ತಿರುವ ಅಮೇರಿಕಾ ಮತ್ತು ಚೀನಾ! (ಹಣಕ್ಲಾಸು)

ಮಾನಸಿಕ ನೆಮ್ಮದಿಗೆ 10 ಸಾವಿರ ರೂ, ಸ್ವಯಂ ಆರೈಕೆಗೆ 10 ಸಾವಿರ: 22 ವರ್ಷದ ಬೆಂಗಳೂರು Gen Z ಯುವತಿಯ ಮಾಸಿಕ ಖರ್ಚುವೆಚ್ಚ ವೈರಲ್!

SCROLL FOR NEXT