ಏರ್ ಬ್ರಿಡ್ಜ್' ಸಜ್ಜುಗೊಳಿಸಿದ ಅಮೆರಿಕ 
ವಿದೇಶ

ಅಣು ಶಕ್ತಿ ಒಪ್ಪಂದ ಮಾತುಕತೆ ವಿಫಲ? ಇರಾನ್ ಕಡೆಗೆ ಮಿಲಿಟರಿ ವಿಮಾನ, ಬೃಹತ್ 'ಏರ್ ಬ್ರಿಡ್ಜ್' ಸಜ್ಜುಗೊಳಿಸಿದ ಅಮೆರಿಕ! Video

ಇರಾನ್ ಕಡೆಗೆ ಸಿಬ್ಬಂದಿ, ಯುದ್ಧ ಸಾಮಗ್ರಿ ಮತ್ತು ಉಪಕರಣಗಳನ್ನು ನಿರಂತರವಾಗಿ ಸಾಗಿಸುತ್ತಿರುವ ವಿಮಾನಗಳ ದೃಶ್ಯವನ್ನು ಫ್ಲೈಟ್ ಟ್ರ್ಯಾಕಿಂಗ್ ಡೇಟಾ ಬಹಿರಂಗಪಡಿಸಿದೆ.

ವಾಷಿಂಗ್ಟನ್: ಇರಾನ್‌ನೊಂದಿಗಿನ ಸಂಭಾವ್ಯ ಅಣುಶಕ್ತಿ ಒಪ್ಪಂದದ ಮಾತುಕತೆ ದುರ್ಬಲವಾಗಿರುವಂತೆಯೇ ಯಾವಾಗ ಬೇಕಾದರೂ ಯುದ್ಧ ಆರಂಭವಾಗುವ ಸಾಧ್ಯತೆಯಿದ್ದು, ಅಮೆರಿಕ, ಮಧ್ಯಪ್ರಾಚ್ಯದ ಕಡೆಗೆ ಮಿಲಿಟರಿ ವಿಮಾನಗಳ ಹಾರಾಟವನ್ನು ಗಣನೀಯವಾಗಿ ಹೆಚ್ಚಿಸಿದೆ.

ಇರಾನ್ ಕಡೆಗೆ ಸಿಬ್ಬಂದಿ, ಯುದ್ಧಸಾಮಗ್ರಿ ಮತ್ತು ಉಪಕರಣಗಳನ್ನು ನಿರಂತರವಾಗಿ ಸಾಗಿಸುತ್ತಿರುವ ವಿಮಾನಗಳ ದೃಶ್ಯವನ್ನು ಫ್ಲೈಟ್ ಟ್ರ್ಯಾಕಿಂಗ್ ಡೇಟಾ ಬಹಿರಂಗಪಡಿಸಿದೆ.

ಜಾಗತಿಕ ನಕ್ಷೆಯೊಂದಿಗೆ ಫ್ಲೈಟ್‌ ರಾಡಾರ್ ವಿಡಿಯೋ ಓಪನ್ ಆಗುತ್ತದೆ. ಯುಎಸ್ ಮತ್ತು ಮಧ್ಯಪ್ರಾಚ್ಯದಲ್ಲಿ ಜೂಮ್ ಇನ್ ಆಗುತ್ತದೆ. ಫೈಟರ್ ಜೆಟ್‌ಗಳು, ಇಂಧನ ತುಂಬುವ ಟ್ಯಾಂಕರ್‌ಗಳು ಮತ್ತು ಯುಎಸ್ ನೆಲೆಗಳನ್ನು ತೊರೆಯುವ ಸಾರಿಗೆ ವಿಮಾನಗಳನ್ನು ಪ್ರತಿನಿಧಿಸುವ ಐಕಾನ್‌ಗಳನ್ನು ಪರದೆ ಮೇಲೆ ಪ್ರದರ್ಶಿಸುತ್ತದೆ.

ವಿಮಾನ ಮಾರ್ಗಗಳು ನಿರಂತರ ಸ್ಟ್ರೀಮ್ ಆಗಿ ಗೋಚರಿಸುತ್ತವೆ. ಅಟ್ಲಾಂಟಿಕ್‌ನಾದ್ಯಂತ ಡಿಜಿಟಲ್ 'ಏರ್ ಬ್ರಿಡ್ಜ್' ಎಂದು ವಿವರಿಸಲಾಗಿದ್ದು, ಇದು ಯುರೋಪ್ ಮತ್ತು ಮೆಡಿಟರೇನಿಯನ್ ಮೇಲೆ ಹಾದುಹೋಗುತ್ತದೆ.

ಹಲವಾರು ರೀತಿಯ ಯುದ್ಧ ವಿಮಾನಗಳನ್ನು ನಿಯೋಜಿಸಲಾಗಿದೆ. ಏರ್ ಮತ್ತು ಬಾಹ್ಯಾಕಾಶ ಪಡೆಗಳ ವರದಿಯ ಪ್ರಕಾರ, ಜರ್ಮನಿಯ ಸ್ಪಂಗ್ಡಾಹ್ಲೆಮ್ ಏರ್ ಬೇಸ್, ಇಟಲಿಯ ಅವಿಯಾನೋ ಏರ್ ಬೇಸ್ ಮತ್ತು ದಕ್ಷಿಣ ಕೆರೊಲಿನಾದ ಮೆಕ್‌ಇಂಟೈರ್ ಜಂಟಿ ರಾಷ್ಟ್ರೀಯ ಗಾರ್ಡ್ ಬೇಸ್‌ನಿಂದ ಎಫ್-16 ಫೈಟಿಂಗ್ ಫಾಲ್ಕಾನ್‌ಗಳು ಮಧ್ಯಪ್ರಾಚ್ಯದತ್ತ ಸಾಗಿವೆ. ಯುಕೆಯ RAF ಲೇಕನ್‌ಹೀತ್‌ನಿಂದ F-15E ಸ್ಟ್ರೈಕ್ ಈಗಲ್ಸ್ ಮತ್ತು ವರ್ಜೀನಿಯಾದ ಜಾಯಿಂಟ್ ಬೇಸ್ ಲ್ಯಾಂಗ್ಲೆ-ಯುಸ್ಟಿಸ್‌ನಿಂದ F-22 ರಾಪ್ಟರ್‌ಗಳನ್ನು ಸಹ ನಿಯೋಜಿಸಲಾಗಿದೆ.

ಈ ವಿಮಾನಗಳು ಈ ಹಿಂದೆ ಇರಾನಿನ ಅಣುಶಕ್ತಿ ಕೇಂದ್ರಗಳ ಮೇಲಿನ ದಾಳಿಗಳಲ್ಲಿ ಮತ್ತು ಕಳೆದ ವರ್ಷದ ಆಪರೇಷನ್ ಮಿಡ್‌ನೈಟ್ ಹ್ಯಾಮರ್ ಸೇರಿದಂತೆ ವಿಶೇಷ ಕಾರ್ಯಾಚರಣೆಗಳಲ್ಲಿ ಭಾಗವಹಿಸಿದ್ದವು.

ಬಹು ಇಂಧನ ತುಂಬುವ ವಿಮಾನಗಳು, ವಾಯುಗಾಮಿ ಕಮಾಂಡ್ ಮತ್ತು ಕಂಟ್ರೋಲ್ ಪ್ಲೇನ್‌ಗಳು ಮತ್ತು ಎಲೆಕ್ಟ್ರಾನಿಕ್ ಸಂವಹನ ವಿಮಾನಗಳನ್ನು ಸಹ ನಿಯೋಜಿಸಲಾಗುತ್ತಿದೆ.ಯುಎಸ್ ನೌಕಪಡೆಯ ವಿಮಾನಗಳನ್ನು ಸಹ ಹೆಚ್ಚಿಸಲಾಗಿದೆ ಎಂದು Haaretz ವರದಿ ಮಾಡಿದೆ. ಇತ್ತೀಚೆಗೆ ಕೆರಿಬಿಯನ್‌ನಲ್ಲಿ ಕಾರ್ಯಾಚರಣೆ ನಡೆಸಿದ USS ಜೆರಾಲ್ಡ್ ಆರ್ ಫೋರ್ಡ್ ವಿಮಾನ ಪೂರ್ವ ಮೆಡಿಟರೇನಿಯನ್ ಕಡೆಗೆ ಚಲಿಸುತ್ತಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

5 ದಶಕಗಳ ಬಳಿಕ ದಾಖಲೆ ನಿರ್ಮಿಸಿದ ಚಂದ್ರಯಾನ: ಯಶಸ್ವಿಯಾಗಿ ಭೂಮಿಗೆ ಮರಳಿದ Artemis II ಗಗನ ಯಾತ್ರಿಗಳು-Video

ಲೋಕಭವನ -ಸರ್ಕಾರದ ನಡುವೆ ಮತ್ತೊಂದು ಸುತ್ತಿನ ಸಂಘರ್ಷ: ಮತ ಪತ್ರ ಬಳಕೆ ಮಸೂದೆಗೆ ರಾಜ್ಯಪಾಲರ ತಡೆ

ಧಾರವಾಡ: ಯುವ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಫೈರೋಜ್‌ ಪಠಾಣ್‌ ಹತ್ಯೆ; ಸ್ವಗೃಹದಲ್ಲೇ ಅಟ್ಟಾಡಿಸಿ ಬರ್ಬರ ಕೊಲೆ

ಲೆಬನಾನ್‌ನಲ್ಲಿ ನಾಗರಿಕರ ಸಾವಿನ ಘಟನೆಗಳ ಬಗ್ಗೆ ಭಾರತ ಕಳವಳ; ಇಸ್ರೇಲ್ ಗೆ ತೀವ್ರ ಹಿನ್ನಡೆ!

Hormuz ಮೇಲೆ ಹಾರುತ್ತಿದ್ದ 200 ಮಿಲಿಯನ್ ಡಾಲರ್ ಮೌಲ್ಯದ ಅಮೆರಿಕ ಡ್ರೋನ್ ದಿಢೀರ್ ನಾಪತ್ತೆ; ಯುದ್ಧಕ್ಕೆ ಪ್ರತಿ ದಿನದ US ಖರ್ಚು 3,040 ಕೋಟಿ ರೂ!

SCROLL FOR NEXT