ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 
ವಿದೇಶ

ಮಿನಿಯಾಪೊಲಿಸ್ ಶೂಟಿಂಗ್: ICE ಅಧಿಕಾರಿಗಳಿಂದ ಗುಂಡಿಟ್ಟು ಮಹಿಳೆ ಹತ್ಯೆ; ‘ಸ್ವಯಂರಕ್ಷಣೆ ಕ್ರಮ’ ಎಂದು ಟ್ರಂಪ್ ಸಮರ್ಥನೆ; Video

ಮೃತಪಟ್ಟ ಮಹಿಳೆಯನ್ನು 37 ವರ್ಷದ ರಿನೀ ನಿಕೊಲೆ ಗುಡ್ ಎಂದು ಸ್ಥಳೀಯ ಮಾಧ್ಯಮಗಳು ಗುರುತಿಸಿವೆ. ಈಕೆ ಚಲಾಯಿಸುತ್ತಿದ್ದ ಕಾರನ್ನು ವಲಸೆ ಅಧಿಕಾರಿಗಳು ಸುತ್ತುವರಿದಾಗ ಅಲ್ಲಿಂದ ತಪ್ಪಿಸಿಕೊಂಡು ಹೋಗಲು ಪ್ರಯತ್ನಿಸಿದಾಗ ಅಧಿಕಾರಿಯೊಬ್ಬರು ತನ್ನ ಪಿಸ್ತೂಲಿನಿಂದ ಅತೀ ಹತ್ತಿರದಿಂದ ಗುಂಡು ಹಾರಿಸಿದ್ದಾರೆ.

ವಾಷಿಂಗ್ಟನ್: ಅಮೆರಿಕದ ಮಿನಿಸೋಟಾ ರಾಜ್ಯದ ಮಿನಿಯಾಪೊಲಿಸ್‌ನಲ್ಲಿ ವಲಸೆ ಮತ್ತು ಕಸ್ಟಮ್ಸ್ ಎನ್‌ಫೋರ್ಸ್‌ಮೆಂಟ್ (ICE) ಅಧಿಕಾರಿಯೊಬ್ಬರು 37 ವರ್ಷದ ಮಹಿಳೆಯೊಬ್ಬರನ್ನು ಗುಂಡಿಟ್ಟು ಹತ್ಯೆ ಮಾಡಿದ್ದು, ಈ ಘಟನೆ ಭಾರೀ ವಿವಾದಕ್ಕೆಕಾರಣಾಗಿದೆ.

ಮೃತಪಟ್ಟ ಮಹಿಳೆಯನ್ನು 37 ವರ್ಷದ ರಿನೀ ನಿಕೊಲೆ ಗುಡ್ ಎಂದು ಸ್ಥಳೀಯ ಮಾಧ್ಯಮಗಳು ಗುರುತಿಸಿವೆ. ಈಕೆ ಚಲಾಯಿಸುತ್ತಿದ್ದ ಕಾರನ್ನು ವಲಸೆ ಅಧಿಕಾರಿಗಳು ಸುತ್ತುವರಿದಾಗ ಅಲ್ಲಿಂದ ತಪ್ಪಿಸಿಕೊಂಡು ಹೋಗಲು ಪ್ರಯತ್ನಿಸಿದಾಗ ಅಧಿಕಾರಿಯೊಬ್ಬರು ತನ್ನ ಪಿಸ್ತೂಲಿನಿಂದ ಅತೀ ಹತ್ತಿರದಿಂದ ಗುಂಡು ಹಾರಿಸಿದ್ದಾರೆ.

ಮಾಸ್ಕ್ ಧರಿಸಿದ್ದ ವಲಸೆ ಮತ್ತು ಸುಂಕ ಜಾರಿ ಏಜೆನ್ಸಿ(ಐಸಿಇ) ಅಧಿಕಾರಿಯೊಬ್ಬರು ಹೋಂಡಾ ಕಾರಿನತ್ತ ಮೂರು ಸುತ್ತು ಗುಂಡು ಹಾರಿಸಿದಾಗ ಕಾರು ನಿಯಂತ್ರಣ ಕಳೆದುಕೊಂಡು ಪಲ್ಟಿಯಾಗುತ್ತಿರುವ, ಅಪಘಾತಕ್ಕೀಡಾದ ವಾಹನದಲ್ಲಿ ರಿನೀ ಅವರ ರಕ್ತಸಿಕ್ತ ದೇಹ ಬಿದ್ದಿರುವ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ.

ದುರಂತದ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಂತೆಯೇ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆ ನೀಡಿದ್ದು, ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದ್ದಾರೆಂದು ಸಮರ್ಥಿಸಿಕೊಂಡಿದ್ದಾರೆ.

ರಿನೀ ವಲಸೆ ಅಧಿಕಾರಿಯನ್ನು ಕೊಲ್ಲಲು ಪ್ರಯತ್ನಿಸಿದಾಗ ಅಧಿಕಾರಿ ಆತ್ಮರಕ್ಷಣೆಗೆ ಗುಂಡು ಹಾರಿಸಿರುವುದಾಗಿ ಪ್ರತಿಪಾದಿಸಿದ್ದಾರೆ.

ಓವಲ್ ಆಫೀಸ್‌ನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿರುವ ಟ್ರಂಪ್, ಆ ಮಹಿಳೆ ಭಯಾನಕವಾಗಿ ವರ್ತಿಸಿದರು. ಅಧಿಕಾರಿಗಳ ಮೇಲೆ ಕಾರು ಹತ್ತಿಸಲು ಪ್ರಯತ್ನಿಸಿದ್ದಾರೆ. ವಿಡಿಯೋ ದೃಶ್ಯಾವಳಿಗಳನ್ನು ನೋಡಿದ್ದೇನೆ. ಮಹಿಳೆ ತಪ್ಪು ಮಾಡಿದ್ದಾರೆ. ಇಂತಹ ಘಟನೆಗಳು ಸಂಭವಿಸುವುದು ದುಃಖಕರ ಎಂದು ಹೇಳಿದ್ದಾರೆ.

ಐಇಸಿ ಅಧಿಕಾರಿಗಳು Minneapolisನಲ್ಲಿ ಗುರಿನಿರ್ದೇಶಿತ ಕಾರ್ಯಾಚರಣೆ ನಡೆಸುತ್ತಿದ್ದಾಗ, ಐಸಿಇ ಅಧಿಕಾರಿಗಳನ್ನು ತಡೆಯುವ ಪ್ರಯತ್ನವನ್ನು ಮಹಿಳೆ ಮಾಡಿದ್ದಾರೆ. ಶಸ್ತ್ರಸಜ್ಜಿತ ವಾಹನದಲ್ಲಿದ್ದ ಮಹಿಳೆ ನಮ್ಮ ಕಾನೂನು ಜಾರಿ ಅಧಿಕಾರಿಗಳ ಮೇಲೆ ವಾಹನ ಚಲಾಯಿಸಿ ಅವರನ್ನು ಕೊಲ್ಲುವ ಪ್ರಯತ್ನ ಮಾಡಿದರು. ಇದು ದೇಶೀಯ ಭಯೋತ್ಪಾದನೆಯ ಕ್ರಮ ಎಂದು ತಿಳಿಸಿದ್ದಾರೆ.

ತಮ್ಮ ಹಾಗೂ ಸಹ ಕಾನೂನು ಜಾರಿ ಅಧಿಕಾರಿಗಳ ಪ್ರಾಣ ಭಯದಿಂದ ಹಾಗೂ ಸಾರ್ವಜನಿಕ ಸುರಕ್ಷತೆಯ ದೃಷ್ಟಿಯಿಂದ ಐಸಿಇ ಅಧಿಕಾರಿಯೊಬ್ಬರು, ಆತ್ಮರಕ್ಷಣೆಗಾಗಿ ಗುಂಡುಹಾರಿಸಿದ್ದಾರೆ. ತಮಗೆ ನೀಡಿದ ತರಬೇತಿಯ ಪ್ರಯೋಜನ ಪಡೆದು ತಮ್ಮನ್ನು ರಕ್ಷಿಸಿಕೊಳ್ಳುವ ಜೊತೆಗೆ ಸಹ ಅಧಿಕಾರಿಗಳನ್ನೂ ರಕ್ಷಿಸಿದ್ದಾರೆ. ಗಾಯಗೊಂಡಿರುವ ಐಸಿಇ ಅಧಿಕಾರಿ ಚೇತರಿಸಿಕೊಳ್ಳುವ ನಿರೀಕ್ಷೆ ಇದೆ ಎಂದು ಹೇಳಿದ್ದಾರೆ.

ಮಿನ್ನೆಸೋಟದಲ್ಲಿ ಸೋಮಾಲಿಯಾ ವ್ಯಕ್ತಿಗಳ ಕಲ್ಯಾಣ ಹಗರಣದ ಹಿನ್ನೆಲೆಯಲ್ಲಿ ಅಕ್ರಮ ವಲಸಿಗರ ಮೇಲೆ ದೊಡ್ಡ ಕಾರ್ಯಾಚರಣೆಗೆ ಮುಂದಾಗಿರುವ ಟ್ರಂಪ್ ಆಡಳಿತ, ಬುಧವಾರ ನೂರಾರು ಮಂದಿ ಭದ್ರತಾ ಸಿಬ್ಬಂದಿಯನ್ನು ಈ ಪ್ರದೇಶದಲ್ಲಿ ನಿಯೋಜಿಸಿದೆ.

ಇನ್ನು ಘಟನೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಮಿನ್ನಿಯಾಪೊಲೀಸ್ ನಗರದ ಮೇಯರ್ ಜಾಕೊಬ್ ಫ್ರೆ `ಐಸಿಇ ತಕ್ಷಣ ನಗರದಿಂದ ನಿರ್ಗಮಿಸಬೇಕು' ಎಂದು ಆಗ್ರಹಿಸಿದ್ದಾರೆ. ಬಳಿಕ ಸಾವಿರಾರು ಮಂದಿ ರಸ್ತೆಗಿಳಿದು ಪ್ರತಿಭಟನೆ ನಡೆಸಿದ್ದು ಐಸಿಇ ವಿರುದ್ದ ಘೋಷಣೆ ಕೂಗಿದ್ದಾರೆ.

ಏತನ್ಮಧ್ಯೆ ವಾಹನವು ನಿಜವಾಗಿಯೂ ಅಧಿಕಾರಿಗೆ ಡಿಕ್ಕಿ ಹೊಡೆದಿದೆಯೇ ಎಂಬುದು ವಿಡಿಯೋಗಳಲ್ಲಿ ಸ್ಪಷ್ಟವಾಗಿಲ್ಲ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದು, ಈ ಕಾರಣದಿಂದ ಫೆಡರಲ್ ಅಧಿಕಾರಿಗಳು ಮತ್ತು ಮಿನಿಯಾಪೊಲಿಸ್ ನಗರ ಆಡಳಿತದ ನಡುವೆ ಭಿನ್ನಾಭಿಪ್ರಾಯ ಉಂಟಾಗಿದೆ.

ಮೃತ ಮಹಿಳೆ ಕವಯತ್ರಿ, ಲೇಖಕಿ ಎಂದು ಸಾಮಾಜಿಕ ಜಾಲತಾಣಗಳಲ್ಲಿರುವ ಆಕೆಯ ಖಾತೆಗಳಿಂದ ತಿಳಇದುಬಂದಿದೆ. ಪತಿ ಮತ್ತು 6 ವರ್ಷದ ಮಗುವಿನೊಂದಿಗೆ ಇತ್ತೀಚೆಗೆ ಮಿನಿಸೋಟಾಕ್ಕೆ ಬಂದಿದ್ದರು ಎಂದು ತಿಳಿದುಬಂದಿದೆ.

ಈ ಘಟನೆಯ ನಂತರ ಮಿನಿಯಾಪೊಲಿಸ್‌ನಲ್ಲಿ ಉದ್ರಿಕ್ತ ವಾತಾವರಣ ನಿರ್ಮಾಣವಾಗಿದೆ. ಪ್ರತಿಭಟನಾಕಾರರು ಐಸಿಇ ವಿರುದ್ಧ ಘೋಷಣೆ ಕೂಗಿದ್ದು, ಫೆಡರಲ್ ಕಟ್ಟಡದ ಬಳಿ ಪ್ರತಿಭಟನೆ ನಡೆಸಿದರು. ಬಳಿಕ ಭದ್ರತಾ ಪಡೆಗಳು ಪೆಪ್ಪರ್ ಸ್ಪ್ರೇ ಮತ್ತು ಅಶ್ರುವಾಯು ಬಳಸಿ ಜನರನ್ನು ಚದುರಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕೇರಳದ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಮಲಯಾಳಂ ಕಡ್ಡಾಯ: ಮಸೂದೆ ವಿರುದ್ಧ ರಾಷ್ಟ್ರಪತಿಗೆ ನಿಯೋಗ; ರಾಜ್ಯ ಸರ್ಕಾರ

ಮಲಯಾಳಂ ಭಾಷಾ ಮಸೂದೆಯಿಂದ ಕಾಸರಗೋಡು ಕನ್ನಡಿಗರಿಗೆ ಧಕ್ಕೆ: ಕೇರಳ ಸಿಎಂಗೆ ಪತ್ರ ಬರೆದ ಸಿದ್ದರಾಮಯ್ಯ, ಪುನರ್ ಪರಿಶೀಲನೆಗೆ ಒತ್ತಾಯ

'ರಾಜಕೀಯ ದ್ವೇಷ, ಪೊಲೀಸರ ವೈಫಲ್ಯ' ಬಳ್ಳಾರಿ ಹಿಂಸಾಚಾರ ಘಟನೆಗೆ ಕಾರಣ: ಕಾಂಗ್ರೆಸ್ ಸಮಿತಿ

ಈ ಬಾರಿ ಫೆ.1ರ ಭಾನುವಾರ ಕೇಂದ್ರ ಬಜೆಟ್, ಜ. 29ಕ್ಕೆ ಆರ್ಥಿಕ ಸಮೀಕ್ಷೆ ಮಂಡನೆ!

'ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ವ್ಯಾಪಾರ ಒಪ್ಪಂದ ಹಳ್ಳ ಹಿಡಿದಿದೆ': ಲುಟ್ನಿಕ್ ಹೇಳಿಕೆ ತಳ್ಳಿಹಾಕಿದ MEA, ಹೇಳಿದ್ದೇನು?

SCROLL FOR NEXT