ಶೆಹಬಾಜ್ ಷರೀಫ್ 
ವಿದೇಶ

ಜಿನೀವಾದಲ್ಲಿ ಅಮೆರಿಕ-ಇರಾನ್ ಶಾಂತಿ ಒಪ್ಪಂದಕ್ಕೆ ಸಹಿ ಸಮಾರಂಭ ಆಯೋಜಿಸಿದ ಪಾಕಿಸ್ತಾನ; ಐತಿಹಾಸಿಕ ಮೈಲಿಗಲ್ಲು ಎಂದ ಶೆಹಬಾಜ್!

ಇಂದು ರಾಷ್ಟ್ರೀಯ ಅಸೆಂಬ್ಲಿಗೆ ಜಾಗತಿಕ ಇಂಧನ ಬಿಕ್ಕಟ್ಟಿಗೆ ಕಾರಣವಾದ ಸಂಘರ್ಷವನ್ನು ಕೊನೆಗೊಳಿಸಲು ಪಾಕಿಸ್ತಾನದ ಪ್ರಯತ್ನಗಳನ್ನು ವಿವರಿಸಿದ ಷರೀಫ್ ಅವರು, "ಇದು ಎರಡು ದೇಶಗಳ ನಡುವಿನ ಒಪ್ಪಂದವಲ್ಲ. ರಾಜತಾಂತ್ರಿಕ ಯಶಸ್ಸು" ಎಂದು ಬಣ್ಣಿಸಿದರು.

ಇಸ್ಲಾಮಾಬಾದ್: ಪಾಕಿಸ್ತಾನವು ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ಅಮೆರಿಕ ಮತ್ತು ಇರಾನ್ ನಡುವಿನ ಶಾಂತಿ ಒಪ್ಪಂದಕ್ಕೆ ಸಹಿ ಹಾಕುವ ಸಮಾರಂಭವನ್ನು ಆಯೋಜಿಸಲಿದೆ ಎಂದು ಸೋಮವಾರ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಅವರು ಹೇಳಿದ್ದಾರೆ.

ಇಂದು ರಾಷ್ಟ್ರೀಯ ಅಸೆಂಬ್ಲಿಗೆ ಜಾಗತಿಕ ಇಂಧನ ಬಿಕ್ಕಟ್ಟಿಗೆ ಕಾರಣವಾದ ಸಂಘರ್ಷವನ್ನು ಕೊನೆಗೊಳಿಸಲು ಪಾಕಿಸ್ತಾನದ ಪ್ರಯತ್ನಗಳನ್ನು ವಿವರಿಸಿದ ಷರೀಫ್ ಅವರು, "ಇದು ಎರಡು ದೇಶಗಳ ನಡುವಿನ ಒಪ್ಪಂದವಲ್ಲ. ಇದು ಶಾಂತಿ ಮತ್ತು ಮಾತುಕತೆಯ ಯಶಸ್ಸು - ರಾಜತಾಂತ್ರಿಕ ಯಶಸ್ಸು" ಎಂದು ಬಣ್ಣಿಸಿದರು.

ಅಮೆರಿಕ-ಇರಾನ್ ಶಾಂತಿ ಒಪ್ಪಂದ "ಐತಿಹಾಸಿಕ ಮೈಲಿಗಲ್ಲು" ಎಂದು ಕರೆದ ಶೆಹಬಾಜ್ ಷರೀಫ್ ಅವರು, ಮೂರು ತಿಂಗಳು ಮತ್ತು 16 ದಿನಗಳ ನಿರಂತರ ಪ್ರಯತ್ನಗಳ ನಂತರ ಇದು ಹೊಸ ಉದಯಕ್ಕೆ ನಾಂದಿ ಹಾಡಿತು. ಇದು ಲೆಬನಾನ್ ಸೇರಿದಂತೆ ಮಿಲಿಟರಿ ಕ್ರಮಕ್ಕೆ ತಕ್ಷಣದ ಮತ್ತು ಶಾಶ್ವತ ಅಂತ್ಯದಲ್ಲಿ ಕೊನೆಗೊಂಡಿತು ಎಂದು ಹೇಳಿದರು.

ಎರಡೂ ದೇಶಗಳ ನಾಯಕತ್ವವು ಕಷ್ಟಕರವಾದ ಮಾತುಕತೆಗಳ ಉದ್ದಕ್ಕೂ ತಾಳ್ಮೆ ಮತ್ತು ವಿವೇಕವನ್ನು ಪ್ರದರ್ಶಿಸಿದವು. ಇದರ ಪರಿಣಾಮವಾಗಿ ಇಡೀ ಜಗತ್ತು ಸಂಭ್ರಮಿಸಬಹುದಾದ ಪ್ರಗತಿ ಕಂಡುಬಂದಿತು ಎಂದು ಅವರು ಹೇಳಿದರು.

ಜಾಗತಿಕ ಇಂಧನ ಬಿಕ್ಕಟ್ಟಿಗೆ ಕಾರಣವಾಗಿದ್ದ 107 ದಿನಗಳ ಯುದ್ಧವನ್ನು ಕೊನೆಗೊಳಿಸಲು ಅಮೆರಿಕ ಮತ್ತು ಇರಾನ್ ಒಪ್ಪಂದವನ್ನು ಅಂತಿಮಗೊಳಿಸಿವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ.

ಪಾಕಿಸ್ತಾನ ಪ್ರಧಾನಿಯವರ ಪ್ರಕಾರ, ಜೂನ್ 19 ರಂದು ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ಶಾಂತಿ ಒಪ್ಪಂದಕ್ಕೆ ಸಹಿ ಹಾಕಲಾಗುವುದು.

ಜೂನ್ 19 ರಂದು ಜಿನೀವಾದಲ್ಲಿ ಪಾಕಿಸ್ತಾನವು ಈ ಐತಿಹಾಸಿಕ ಒಪ್ಪಂದದ "ಸಹಿ ಸಮಾರಂಭವನ್ನು" ಆಯೋಜಿಸಲಿದೆ ಎಂದು ಅವರು ಹೇಳಿದರು.

"ಇಂದು ಪಾಕಿಸ್ತಾನದಲ್ಲಿ ವಾಸಿಸುವವರಿಗೆ ಮಾತ್ರವಲ್ಲದೆ ಪ್ರಪಂಚದಾದ್ಯಂತ ವಾಸಿಸುವ ಪಾಕಿಸ್ತಾನಿಗಳಿಗೂ ಹೆಮ್ಮೆಯ ದಿನ" ಎಂದು ಪಾಕ್ ಪ್ರಧಾನಿ ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಇತರರ ಪ್ರಭಾವಕ್ಕೆ ಒಳಗಾಗಿ ಹಾಗೆ ಮಾತನಾಡಿದೆ, ಕ್ಷಮಿಸಿ': ದೆಹಲಿ ಪ್ರತಿಭಟನೆಯಲ್ಲಿ PM ಮೋದಿ ವಿರುದ್ಧ ಅವಾಚ್ಯ ಪದ ಬಳಕೆ ಮಾಡಿದ ಬಾಲಕಿ-Video

'ನನ್ನ ಜೊತೆಗೆ ತಾಯಿಯನ್ನೂ ನಿಂದಿಸಿದರು, ಆದರೂ 'ನಮ್ಮ ದಾರಿತಪ್ಪಿದ ಮಕ್ಕಳನ್ನು' ಕ್ಷಮಿಸಬೇಕು: ಮತ್ತೊಂದು ವಿಡಿಯೊ ಹಂಚಿಕೊಂಡ PM ಮೋದಿ'-Video

'ದೇಶವನ್ನೇ ಕ್ಷಮಿಸಿದ ನರೇಂದ್ರ ಮೋದಿ: ಪ್ರಧಾನಿಯ ಹೊಸ ವಿಡಿಯೋ ಬಗ್ಗೆ ಕಾಂಗ್ರೆಸ್ ಪ್ರತಿಕ್ರಿಯೆ!

ಕೇರಳದಲ್ಲಿ ಭಾರಿ ಮಳೆಯಿಂದ ಭೂಕುಸಿತ; ಮೂವರು ಸಾವು! ಹಲವು ಜಿಲ್ಲೆಗಳಿಗೆ IMD 'ರೆಡ್ ಅಲರ್ಟ್' ಘೋಷಣೆ

ಮಂಡ್ಯ: ಕಾವೇರಿ ಹೋರಾಟಕ್ಕೆ ಸ್ಪಂದಿಸದೆ ರೈತರ ಕೆಂಗಣ್ಣಿಗೆ ಗುರಿಯಾದ ನಟಿ ರಾಗಿಣಿ ದ್ವಿವೇದಿ!